ಭಾರತ ವಿಶ್ವಕಪ್ ಕ್ರಿಕೆಟ್ ಕಪ್ ಗೆದ್ದಲ್ಲಿ ಒಂದು ಮಗ್ ಬಿಯರ್ ಫ್ರೀ...!


ಮೈಸೂರು: ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ವಿಶ್ವಕಪ್ ಅಂತಿಮ ಹಣಾಹಣಿ ಇನ್ನೇನು ಕೆಲವೇ ಗಂಟೆಗಳಲ್ಲಿ ಆರಂಭವಾಗಲಿದೆ. ಈವರೆಗೆ ಭಾರತ ನಾಲ್ಕು ಬಾರಿ ವಿಶ್ವಕಪ್​ನಲ್ಲಿ ಸ್ಪರ್ಧೆ ಎದುರಿಸಿತ್ತು. ಭಾರತದ ಪಾಲಿಗೆ ಇದು ವಿಶೇಷ ದಿನವಾಗಿದೆ.

ಟ್ರೋಫಿಗಾಗಿ ಭಾರತ ಮತ್ತು ಆಸ್ಟ್ರೇಲಿಯಾ ಸೆಣಸಾಡಲಿವೆ. ಆಸ್ಟ್ರೇಲಿಯಾ ಎದರು 2003ರಲ್ಲಿ ನಡೆದ ವಿಶ್ವಕಪ್ ಫೈನಲ್ ಸೋಲಿನ ಸೇಡು ತೀರಿಸಿಕೊಳ್ಳಲು ಭಾರತ ತವಕದಲ್ಲಿದೆ. ಟೀಂ ಇಂಡಿಯಾ ಗೆಲ್ಲಲಿ ಎಂದು ದೇಶಾದ್ಯಂತ ಶುಭಾಶಯಗಳ ಸುರಿಮಳೆಯೇ ಸುರಿದಿದೆ. ಕ್ರಿಕೆಟ್​​ ಅಭಿಮಾನಿಗಳು ಹರಕೆ, ಪೂಜೆ ಮಾಡುತ್ತಿದ್ದಾರೆ. ಆದರೆ ಇಲ್ಲೊಬ್ಬ ಕ್ರಿಕೆಟ್​​ ಕಟ್ಟಾ ಅಭಿಮಾನಿ ಭಾರತ ಗೆದ್ದರೆ ಉಚಿತ ಬಿಯರ್ ನೀಡುವುದಾಗಿ ತಿಳಿಸಿದ್ದಾನೆ.

ಭಾರತ ಗೆದ್ದರೆ ಉಚಿತ ಬಿಯರ್ ಆಫರ್ ನೀಡಲು ಮೈಸೂರಿನ ಪೆಗ್ಸ್ & ಕೆಗ್ಸ್ ಪಬ್ ಅಂಡ್ ರೆಸ್ಟೋರೆಂಟ್‌‌ ಮುಂದಾಗಿದೆ. ಫೈನಲ್ ನಲ್ಲಿ ಭಾರತ ಗೆದ್ದಲ್ಲಿ ಒಂದು ಮಗ್ ಬಿಯರ್ ಫ್ರೀ ನೀಡುವುದಾಗಿ ಘೋಷಿಸಿದೆ. ಫೈನಲ್ ಪಂದ್ಯ ನೋಡಲು ಮೂರು ಬಿಗ್ ಸ್ಕ್ರೀನ್ ವ್ಯವಸ್ಥೆ ಮಾಡಲಾಗಿದೆ.

BREAKING NEWS
Loading latest news...
Join our WhatsApp Channel Powered By : Online Pudu