ಕೋಲಾರ: ಜಿಲ್ಲಾಸ್ಪತ್ರೆಯಿಂದ ಗಂಡು ಶಿಶು ಕಾಲೇಜು ಬ್ಯಾಗಿನಲ್ಲಿಟ್ಟು ಅಪಹರಣ - ಮೂವರು ಖತರ್ನಾಕ್ ಕಳ್ಳಿಯರ ಕೃತ್ಯ


ಕೋಲಾರ: ಇಲ್ಲಿನ ಎಸ್ ಎನ್ ಆರ್ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ 6 ದಿನಗಳ ಗಂಡು ಶಿಶುವನ್ನು ಮೂವರು ಮಹಿಳೆಯರು ಕಾಲೇಜು ಬ್ಯಾಗಿನೊಳಗೆ ಹಾಕಿ ಅಪಹರಿಸಿರುವ ಘಟನೆ ಗುರುವಾರ ಸಂಜೆ ನಡೆದಿದೆ. ಈ ಘಟನೆ ದೃಶ್ಯ ಸಿ.ಸಿ.ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಮಾಲೂರು ಪಟ್ಟಣದ ಪಟೇಲರ ಬೀದಿ ಮೂಲದ ಪೂವರಸನ್ ನಂದಿನಿ ದಂಪತಿಯ ಗಂಡು ಶಿಶು ಅಪಹರಣಕ್ಕೊಳಗಾಗಿರುವ ಮಗು ಎಂದು ತಿಳಿದು ಬಂದಿದೆ.

ವಾರ್ಡ್‌ನಲ್ಲಿ ತಾಯಿ ನಿದ್ದೆ ಹೋಗಿದ್ದರು. ಈ ಸಂದರ್ಭದಲ್ಲಿ ಹೊಂಚು ಹಾಕಿ ಮಗುವನ್ನು ಕದ್ದೊಯಲಾಗಿದೆ.‌ ಮೂವರು ಮಹಿಳೆಯರು ಈ ಶಿಶುವನ್ನು ಕಾಲೇಜು ಬ್ಯಾಗಿನಲ್ಲಿ ಇರಿಸಿಕೊಂಡು ಕಳ್ಳತನ ಮಾಡಿ ಪರಾರಿಯಾಗಿದೆ. ಮಗುವನ್ನು ಅಪಹರಿಸಿ ಆಸ್ಪತ್ರೆಯಿಂದ ಹೊರಗೆ ಬಂದು ಆಟೋ ಹತ್ತುತ್ತಿರುವ ದೃಶ್ಯ ಸಿ.ಸಿ. ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. 

ತಕ್ಷಣ ಕ್ರಮ ಕೈಗೊಂಡು ಮಗುವನ್ನು ಕೊಡಿಸುವಂತೆ ನಂದಿನಿ ಮತ್ತು ಕುಟುಂಬಸ್ಥರು ಮನವಿ ಮಾಡಿದ್ದಾರೆ. ನಗರ ಠಾಣೆ ಪೊಲೀಸರು ಸಿ.ಸಿ.ಟಿ.ವಿ ಕ್ಯಾಮೆರಾ ಪರಿಶೀಲನೆ ನಡೆಸಿ ತನಿಖೆ ಕೈಗೊಂಡಿದ್ದಾರೆ.
BREAKING NEWS
Loading latest news...
Join our WhatsApp Channel Powered By : Online Pudu