-->
1000938341
ಅವಳಿ ಸಹೋದರರ ಅಥ್ಲೆಟಿಕ್ಸ್ ಸಾಧನೆ: ಯಶಸ್ಸಿನ ಹಾದಿಗೆ ಆಳ್ವಾಸ್ ಅಡಿಪಾಯ

ಅವಳಿ ಸಹೋದರರ ಅಥ್ಲೆಟಿಕ್ಸ್ ಸಾಧನೆ: ಯಶಸ್ಸಿನ ಹಾದಿಗೆ ಆಳ್ವಾಸ್ ಅಡಿಪಾಯ

ಅವಳಿ ಸಹೋದರರ ಅಥ್ಲೆಟಿಕ್ಸ್ ಸಾಧನೆ: ಯಶಸ್ಸಿನ ಹಾದಿಗೆ ಆಳ್ವಾಸ್ ಅಡಿಪಾಯ

ಹಾಸನದ ಹೊಳೆನರಸೀಪುರದ ಪವನ್ ಶೇಖರ್ ಮತ್ತು ಪಂಕಜ್ ಶೇಖರ್ ಈಗ ಅಥ್ಲೆಟಿಕ್ಸ್‌ನಲ್ಲಿ ಮಿಂಚು ತಂದ ಕ್ರೀಡಾಪಟುಗಳು. ಈ ಅವಳಿ ಸಹೋದರರ ಸಾಧನೆಗೆ ಕರಾವಳಿಯ ಪ್ರತಿಷ್ಠಿತ ಆಳ್ವಾಸ್‌ ಕಾಲೇಜ್‌ ಅಡಿಪಾಯ ಹಾಕಿಕೊಟ್ಟಿದೆ ಎಂದರೆ ತಪ್ಪಾಗಲ್ಲ.ಈ ಅವಳಿ ಸಹೋದರರು ಮಂಗಳೂರಿನಲ್ಲಿ ನಡೆಯುತ್ತಿರುವ ರಾಜ್ಯ ಜ್ಯೂನಿಯರ್ ಮತ್ತು ಯೂತ್ ಅಥ್ಲೆಟಿಕ್ಸ್‌ ಕೂಟದಲ್ಲಿ ತಮ್ಮ ಪ್ರದರ್ಶನದ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.

20 ವರ್ಷದೊಳಗಿನ ಟ್ರಿಪಲ್ ಜಂಪ್‌ನಲ್ಲಿ ಪವನ್ ಚಿನ್ನದ ಪದಕ ಮುಡಿಗೇರಿಸಿದರೆ, ಪಂಕಜ್ ಬೆಳ್ಳಿ ಪದಕ ಗಳಿಸಿದರು.ಒಂದೇ ಸ್ಪರ್ಧಿಯಲ್ಲಿ ಮಿಂಚಿದ ಈ ಅವಳಿ ಸಹೋದರರದ್ದು ಒಂದು ನಿಮಿಷದ ವ್ಯತ್ಯಾಸದ ಪ್ರದರ್ಶನವಾಗಿತ್ತು.


ಬೆಂಗಳೂರಿನಲ್ಲಿ ಕಳೆದ ವರ್ಷ ನಡೆದ ಅಮೆಚೂರ್ ಅಥ್ಲೆಟಿಕ್ಸ್‌ನಲ್ಲಿ ಪುರುಷರ ಟ್ರಿಪಲ್ ಜಂಪ್ ವಿಭಾಗದಲ್ಲಿ ಮಂಗಳೂರಿನ ಆಳ್ವಾಸ್ ಕಾಲೇಜನ್ನು ಪ್ರತಿನಿಧಿಸಿದ್ದರು. ಇಲ್ಲಿ ಪವನ್ ಶೇಖರ್ ಬೆಳ್ಳಿ ಪದಕ ಗೆದ್ದಿದ್ದರೆ ಪಂಕಜ್ ಶೇಖರ್ 3 ಸೆ.ಮೀ . ಅಂತರದಲ್ಲಿ ನಾಲ್ಕನೇ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿದ್ದರು.ಆಳ್ವಾಸ್ ಕ್ರೀಡಾ ಕೋಟಾದಡಿ ಶಿಕ್ಷಣ ಪಡೆಯುತ್ತಿರುವ ಈ ಅರಳು ಪ್ರತಿಭೆಗಳಿಗೆ ಸೂಕ್ತ ತರಬೇತು ಮತ್ತು ಆತ್ಮವಿಶ್ವಾಸವನ್ನು ತುಂಬುವಲ್ಲಿ ಆಳ್ವಾಸ್ ಶಿಕ್ಷಣ ಸಂಸ್ಥೆ ಎಲ್ಲ ಪ್ರಯತ್ನವನ್ನೂ ಮಾಡಿದೆ.Ads on article

Advertise in articles 1

advertising articles 2

Advertise under the article