ಲಿಪ್ ಲಾಕ್ ಮಾಡುವುದಿಲ್ಲವೆಂದು ಸುಳ್ಳು ಹೇಳಿದ ನಟಿ ಶ್ರೀಲೀಲಾ: ವೈರಲ್ ಆಯ್ತು ಲಿಪ್ ಲಾಕ್ ವೀಡಿಯೋ

ಹೈದರಾಬಾದ್: ಕನ್ನಡ ಚಿತ್ರರಂಗದಲ್ಲಿ ಸಿನಿಮಾ ವೃತ್ತಿ ಬದುಕನ್ನು ಆರಂಭಿಸಿ, ಇದೀಗ ತೆಲುಗು ಚಿತ್ರರಂಗದಲ್ಲಿ ಮುಂಚೂಣಿ ನಟಿಯರಲ್ಲಿ ಒಬ್ಬರಾಗಿರುವ ಶ್ರೀಲೀಲಾ ಒಂದರ ಹಿಂದೆ ಒಂದು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಇತ್ತೀಚೆಗಷ್ಟೇ ಬಿಡುಗಡೆಯಾದ ಭಗವಂತ ಕೇಸರಿ ಸಿನಿಮಾದಲ್ಲಿ ಸೂಪರ್‌ಸ್ಟಾರ್ ಬಾಲಕೃಷ್ಣರವರ ಪುತ್ರಿಯ ಪಾತ್ರದಲ್ಲಿ ಶ್ರೀಲೀಲಾ ನಟಿಸಿದ್ದಾರೆ. ಸದ್ಯ ಆದಿಕೇಶವ ಸಿನಿಮಾದಲ್ಲಿ ಬಿಜಿಯಾಗಿದ್ದಾರೆ.

ತಮ್ಮ ಪಾತ್ರ ಡಿಮ್ಯಾಂಡ್ ಮಾಡಿದರೆ ಲಿಪ್‌ಲಾಕ್ ದೃಶ್ಯಗಳಲ್ಲಿ ನಟಿಸುವಿರಾ? ಎಂದು ಇತ್ತೀಚಿಗರ ಸಂದರ್ಶನವೊಂದರಲ್ಲಿ ಶ್ರೀಲೀಲಾ ಅವರಿಗೆ ವರದಿಗಾರರೊಬ್ಬರು ಪ್ರಶ್ನಿಸಿದ್ದರು. ಅದಕ್ಕೆ ಶ್ರೀಲೀಲಾ, ತಾನು ಲಿಪ್‌ಲಾಕ್ ದೃಶ್ಯಗಳಲ್ಲಿ ನಟಿಸುವುದಿಲ್ಲ. ಯಾವುದೇ ನಟರೊಂದಿಗೆ ಲಿಪ್‌ಲಾಕ್ ಮಾಡುವುದಿಲ್ಲ. ಒಂದು ವೇಳೆ ನಾನು ಲಿಪ್‌ಕಿಸ್ ನೀಡದಿದ್ದಲ್ಲಿ ಅವರು ತನ್ನ ಪತಿಯಾಗಿರುತ್ತಾರೆ ಎಂದು ಹೇಳಿದ್ದರು.


ಈ ಹೇಳಿಕೆಯ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ನೆಟ್ಟಿಗರು ಕಾಮೆಂಟ್‌ಗಳ ಮೂಲಕ ಶ್ರೀಲೀಲಾ ಕಾಲೆಳೆದಿದ್ದಾರೆ. ಮೊದಲ ಮೊದಲು ಎಲ್ಲರೂ ಹೀಗೇ ಹೇಳುತ್ತಾರೆ. ದಿನಗಳ ಕಳೆಯುತ್ತಾ ಹೋದಂತೆ ಸ್ಕ್ರಿಪ್ಟ್ ಬೇಡಿಕೆಯಿದೆ, ದೃಶ್ಯಕ್ಕೆ ಬೇಡಿಕೆಯಿದೆ ಮತ್ತು ಸಂಭಾವನೆ ಹೆಚ್ಚು ಎಂದೆಲ್ಲಾ ಹೇಳುತ್ತಾರೆ. ಈ ಹಿಂದೆ ಅನೇಕ ಮಂದಿ ಇದನ್ನೇ ಹೇಳಿ ಬಳಿಕ ಲಿಪ್‌ಲಾಕ್ ದೃಶ್ಯಗಳು ಮಾತ್ರವಲ್ಲದೆ, ಅಶ್ಲೀಲ ದೃಶ್ಯಗಳಲ್ಲೂ ನಟಿಸಿದ್ದಾರೆ ಎಂದು ಹೇಳಿದ್ದಾರೆ.

ಈ ನಡುವೆ ಶ್ರೀಲೀಲಾ, ಲಿಪ್‌ಲಾಕ್ ಮಾಡಿರುವ ವಿಡಿಯೋವೊಂದನ್ನು ನೆಟ್ಟಿಗರು ವೈರಲ್ ಮಾಡುತ್ತಿದ್ದಾರೆ. ಕಿಸ್ ಹೆಸರಿನ ಸಿನಿಮಾ ಮೂಲಕವೇ ಶೀಲೀಲಾ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದಲ್ಲದೆ, ಸಿನಿ ವೃತ್ತಿಬದುಕನ್ನು ಆರಂಭಿಸಿದರು. ಇದೇ ಕಿಸ್ ಸಿನಿಮಾ ತೆಲುಗಿನಲ್ಲಿ ಐ ಲವ್ ಯು ಈಡಿಯಟ್ ಹೆಸರಿನಲ್ಲಿ ಬಿಡುಗಡೆ ಆಯಿತು. ಈ ಚಿತ್ರದ ಹಾಡೊಂದರಲ್ಲಿ ಶ್ರೀಲೀಲಾ ನಾಯಕನೊಂದಿಗೆ ಲಿಪ್‌ಲಾಕ್ ಮಾಡುತ್ತಾರೆ.


ಇದೀಗ ಇದೇ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಿ, ನಾನು ಯಾರಿಗೂ ಸಿನಿಮಾದಲ್ಲಿ ಲಿಪ್ ಕಿಸ್ ಮಾಡುವುದಿಲ್ಲ ಎಂದು ಹೇಳಿಬಿಟ್ಟು ತಮ್ಮ ಮೊದಲ ಸಿನಿಮಾದಲ್ಲೇ ಶ್ರೀಲೀಲಾ ಲಿಪ್ ಕಿಸ್ ಕೊಟ್ಟಿದ್ದಾರೆ ಎಂದು ನೆಟ್ಟಿಗರು ಸಿಕ್ಕಾಪಟ್ಟೆ ಟ್ರೋಲ್ ಮಾಡುತ್ತಿದ್ದಾರೆ.