ಹೀಗಾಗಿ ಶ್ರೀರಾಮನು ಆತನನ್ನು ಕ್ಷಮಿಸಿದನು ಮತ್ತು ಪಿತೃ ಪಕ್ಷದಲ್ಲಿ ಕಾಗೆಗಳಿಗೆ ಕೊಡುವ ಆಹಾರವನ್ನು ಪಿತೃಲೋಕದಲ್ಲಿ ನೆಲೆಸಿರುವ ಪಿತೃದೇವತೆಗಳಿಗೆ ಸಿಗುತ್ತದೆ ಎಂದು ಆಶೀರ್ವದಿಸಿದನು.
ಇದಲ್ಲದೆ ಪಿತೃ ಪಕ್ಷದಲ್ಲಿ ಕಾಗೆಗಳಿಗೆ ಮಾತ್ರವಲ್ಲದೆ ಹಸುಗಳು, ನಾಯಿಗಳು ಮತ್ತು ಇತರ ಪಕ್ಷಿಗಳಿಗೆ ಆಹಾರವನ್ನು ನೀಡಲಾಗುತ್ತದೆ. ಈ ಜೀವಿಗಳು ಆಹಾರವನ್ನು ಸ್ವೀಕರಿಸದಿದ್ದರೆ, ಅದು ಪಿತೃದೇವತೆಗಳ ಅತೃಪ್ತಿ ಅಥವಾ ಅಸಮಾಧಾನದ ಸಂಕೇತವಾಗಿರಬಹುದು ಎಂದು ನಂಬಲಾಗಿದೆ.