-->
1000938341
ಟ್ರಕ್ ನಲ್ಲಿ ಪತ್ತೆಯಾಯಿತು ಮೂರು ಕೋಟಿ ರೂಪಾಯಿ ಮಾದಕದ್ರವ್ಯ : ಇಬ್ಬರು ಅರೆಸ್ಟ್

ಟ್ರಕ್ ನಲ್ಲಿ ಪತ್ತೆಯಾಯಿತು ಮೂರು ಕೋಟಿ ರೂಪಾಯಿ ಮಾದಕದ್ರವ್ಯ : ಇಬ್ಬರು ಅರೆಸ್ಟ್

ಹರಿಯಾಣ: 4 ಟನ್​ ಪಾಪಿ ಹಸ್ಕ್, ನಿಷೇಧಿತ ಮಾದಕ ದ್ರವ್ಯವನ್ನು ಸಾಗಾಟ ಮಾಡುತ್ತಿದ್ದ ಟ್ರಕ್ ಒಂದನ್ನು ಹರಿಯಾಣ ರಾಜ್ಯದಲ್ಲಿ ತಡೆದಿರುವ ರಾಜ್ಯದ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ ಇಬ್ಬರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.

ಜಾರ್ಖಂಡ್‌ನ ಛತ್ರಾದಿಂದ ರಾಜಸ್ಥಾನದ ಜೋಧ್‌ಪುರಕ್ಕೆ ಸುಮಾರು 3 ಕೋಟಿ ರೂಪಾಯಿ ಮೌಲ್ಯದ ಈ ಮಾದಕ ದ್ರವ್ಯವನ್ನು ಅಕ್ರಮವಾಗಿ ಸಾಗಾಟ ಮಾಡಲಾಗುತ್ತಿತ್ತು. ರಾಜಸ್ಥಾನ ನೋಂದಣಿಯ ಟ್ರಕ್ ಅನ್ನು ಕುಂಡ್ಲಿ-ಮನೇಸರ್-ಪಲ್ವಾಲ್ ಎಕ್ಸ್‌ಪ್ರೆಸ್‌ವೇ ಟೋಲ್ ಪ್ಲಾಜಾದಲ್ಲಿ ತಡೆದು ನಾರ್ಕೊಟಿಕ್ ಪೊಲೀಸರು ತಪಾಸಣೆ ನಡೆಸಿದಾಗ ಈ ಮಾದಕದ್ರವ್ಯ ಪತ್ತೆಯಾಗಿದೆ.

ತಕ್ಷಣ ಇಬ್ಬರನ್ನು ಬಂಧಿಸಿ ಪ್ರಕರಣ ದಾಖಲಿಸಲಾಗಿದೆ. ಈ ಜಾಲದಲ್ಲಿ ಹೆಚ್ಚಿನ ಮಂದಿಯಿದ್ದು, ಇನ್ನಷ್ಟು ಮಂದಿ ಬಂಧನಕ್ಕೊಳಗಾಗುವ ಸಾಧ್ಯತೆಯಿದೆ.

Ads on article

Advertise in articles 1

advertising articles 2

Advertise under the article