ಓಟದ ಸ್ಪರ್ಧೆಯಲ್ಲಿ ಓಡುತ್ತಿದ್ದಾಗಲೇ ಕುಸಿದು ಬಿದ್ದು ಮೃತಪಟ್ಟ 12ರ ಬಾಲಕ
Thursday, October 19, 2023
ಜೈಪುರ: ಸಣ್ಣ ಮಕ್ಕಳೂ ಕುಸಿದು ಬಿದ್ದು ಮೃತಪಡುತ್ತಿರುವ ಪ್ರಕರಣ ಮುಂದುವರಿದಿದೆ. ಇಂತಹ ಪ್ರಕರಣಕ್ಕೆ ಮತ್ತೊಂದು ಸೇರ್ಪಡೆ ಎಂಬಂತೆ 12 ವರ್ಷದ ಬಾಲಕನೊಬ್ಬ ಕುಸಿದು ಬಿದ್ದು ಪ್ರಾಣಬಿಟ್ಟಿರುವ ಘಟನೆ ರಾಜಸ್ಥಾನದ ಜೈಪುರದಲ್ಲಿ ಸಂಭವಿಸಿದೆ.
ರಾಜಸ್ಥಾನದ ಬಿಕನೇರ್ನ ಖಾಸಗಿ ಶಾಲೆಯ ವಿದ್ಯಾರ್ಥಿ ಇಶಾನ್ ಮೃತಪಟ್ಟ ದುರ್ದೈವಿ ಬಾಲಕ. ವಲ್ಲಭನಗರ ನಿವಾಸಿಯಾಗಿರುವ ಈತ ಇಲ್ಲಿನ ಸರ್ದುಲ್ಗಂಜ್ನ ಖಾಸಗಿ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದ. ಪಾಠದಲ್ಲಷ್ಟೇ ಅಲ್ಲದೆ ಆಟದಲ್ಲೂ ಚುರುಕಾಗಿದ್ದ ಈತ ಓಟದ ಸ್ಪರ್ಧೆಯೊಂದರಲ್ಲಿ ಭಾಗಿಯಾಗಿದ್ದ.ಇನ್ನೇನು ಓಟ ಮುಗಿಸಬೇಕು ಎನ್ನುವಷ್ಟರಲ್ಲಿ ಕುಸಿದು ಬಿದ್ದು ಮೂರ್ಛೆ ಹೋಗಿದ್ದ. ತಕ್ಷಣ ಆತನನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ಯಲಾಯಿತು.
ಆದರೆ ಆಸ್ಪತ್ರೆಗೆ ಬರುವಷ್ಟರಲ್ಲಿ ಹುಡುಗ ಹೃದಯಾಘಾತಕ್ಕೆ ಒಳಗಾಗಿ ಸಾವಿಗೀಡಾಗಿದ್ದಾನೆ ಎಂದು ವೈದ್ಯರು ತಿಳಿಸಿದ್ದಾರೆ. ಬಾಲಕನ ತಂದೆ ಅಶೋಕ್ ಕುಮಾರ್ ಖತ್ರಿ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರಿಗೆ ದೂರು ನೀಡಿದ್ದಾರೆ.