-->
1000938341
ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಮಲಯಾಳಂ ನಟಿಯ ಮೃತದೇಹ ಪತ್ತೆ

ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಮಲಯಾಳಂ ನಟಿಯ ಮೃತದೇಹ ಪತ್ತೆ

ತಿರುವನಂತಪುರಂ: ಬಹಳಷ್ಟು ಸಿನಿಮಾಗಳಲ್ಲಿ ಹಾಗೂ ಧಾರಾವಾಹಿಗಳಲ್ಲಿ ನಟಿಸಿರುವ ಖ್ಯಾತ ನಟಿ ಅಪರ್ಣಾ ಪಿ.ನಾಯರ್ ತಮ್ಮ ಮನೆಯಲ್ಲೇ ನೇಣಿಗೆ ಶರಣಾಗಿರುವ ಅವರ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.

31 ವರ್ಷ ವಯಸ್ಸಿನ ಅವರು ಗುರುವಾರ ಸಂಜೆ ತಮ್ಮ ಮನೆಯಲ್ಲಿ ನೇಣುಬಿಗಿದುಕೊಂಡು ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ತಕ್ಷಣ ಅಪರ್ಣಾರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿರುವುದಾಗಿ ಆಸ್ಪತ್ರೆಯ ಮೂಲಗಳು ಮಾಹಿತಿ ನೀಡಿವೆ.

ನಟಿ ಅಪರ್ಣಾ ನಾಯರ್ ಹಠಾತ್ ಸಾವು ಚಿತ್ರರಂಗಕ್ಕೆ ಬಹುದೊಡ್ಡ ಆಘಾತ ನೀಡಿದೆ. ಅಲ್ಲದೆ ಅವರ ಅಭಿಮಾನಿ ಬಳಗಕ್ಕೆ ನಟಿ ಮೃತಪಟ್ಟಿರುವ ವಿಚಾರ ಅರಗಿಸಿಕೊಳ್ಳಲು ಆಗದಂತಾಗಿದೆ. ಆತ್ಮಹತ್ಯೆಗೆ ನಿಖರ ಕಾರಣ ಏನೆಂಬುದು ಇನ್ನೂ ತಿಳಿದುಬಂದಿಲ್ಲ. ತಾವು ಗುರುವಾರ ಸಂಜೆ ಇನ್ ಸ್ಟಾಗ್ರಾಮ್ ನಲ್ಲಿ ಕೆಲವು ಪೋಸ್ಟ್ ಗಳನ್ನು ಹಾಕಿದ್ದು ಇದರಲ್ಲಿ ಆಕೆ ಮಾನಸಿಕ ಸಮಸ್ಯೆಗೆ ತುತ್ತಾಗಿದ್ದಾರೆ ಎನ್ನಲಾಗಿದ್ದು ಅಲ್ಲದೆ ಕೊನೆಯದಾಗಿ ತನ್ನ ಪುತ್ರಿಯ ಫೋಟೋವನ್ನು ಪೋಸ್ಟ್ ಮಾಡಿದ್ದಾರೆ ಎನ್ನಲಾಗಿದೆ.

ಮೇಘತೀರ್ಥಂ, ಮುದ್ದುಗೌವ್, ಅಚಾಯನ್ಸ್, ಕೊಡತಿ ಸಮಕ್ಷಂ ಬಾಲನ್ ವಕೀಲ್, ಕಲ್ಕಿ ಸೇರಿದಂತೆ ಹಲವಾರು ಸಿನಿಮಾಗಳಲ್ಲಿ ಅಪರ್ಣಾ ನಟಿಸಿದ್ದಾರೆ. ಚಂದನಮಜ, ಆತ್ಮಸಖಿ ಸೇರಿದಂತೆ ಧಾರಾವಾಹಿಗಳಲ್ಲೂ ನಟಿಸಿದ್ದಾರೆ. ಅವರು ತ್ರಯಾ ಮತ್ತು ಕೃತಿಕಾ ಎಂಬ ಇಬ್ಬರು ಮಕ್ಕಳನ್ನು ಅಗಲಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.






Ads on article

Advertise in articles 1

advertising articles 2

Advertise under the article