ವಾಕಿಂಗ್ ತೆರಳಿದ್ದ ಮಹಿಳೆ ಮೇಲೆ ಅತ್ಯಾಚಾರ-ರಸ್ತೆಯಲ್ಲಿ ಬೆತ್ತಲಾಗಿ ಸಾಗಿದ ಯುವತಿ


ಜೈಪುರ: ರಾಜಸ್ಥಾನದ ಭಿಲ್ವಾರಾ ಜಿಲ್ಲೆಯ ಗಂಗಾಪುರದಲ್ಲಿ ಮಹಿಳೆಯೊಬ್ಬರನ್ನು ಅಪಹರಿಸಿದ ಮೂರು ಮಂದಿ ಕಾಮುಕರು, ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿರುವ ಘಟನೆ ಶನಿವಾರ ನಡೆದಿದೆ. 

ಕಾಮುಕರಿಂದ ತಪ್ಪಿಸಿಕೊಳ್ಳಲು ಸಂತ್ರಸ್ತೆ ಬೆತ್ತಲೆಯಾಗಿ ಓಡಿಹೋದಳು. ರಸ್ತೆಯಲ್ಲಿ ವಿವಸ್ತ್ರಳಾಗಿ ಹೋಗುತ್ತಿದ್ದಾಗ, ಸಹಾಯ ಕೋರಿದರೂ ಆಕೆಯ ಮೊರೆಗೆ ಯಾರೂ ಕಿವಿಗೊಡಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.



ರಾತ್ರಿ ಊಟ ಮುಗಿಸಿ ವಾಯು ವಿಹಾರ ಮಾಡುತ್ತಿದ್ದ ಮಹಿಳೆಯನ್ನು ಮೂವರು ಮದ್ಯವ್ಯಸನಿಗಳು ಅಪಹರಿಸಿ, ಅತ್ಯಾಚಾರ ಎಸಗಿದರು. ದುರುಳರ ಹಿಡಿತದಿಂದ ತಪ್ಪಿಸಿಕೊಳ್ಳುವ ಆತುರದಲ್ಲಿ ಆಕೆ ಬಟ್ಟೆಯನ್ನು ತೆಗೆದುಕೊಳ್ಳದೆ ಸ್ಥಳದಿಂದ ಬೆತ್ತಲಾಗಿ ಓಡಿಬಂದಳು. ಸುಮಾರು ಒಂದು ತಾಸಿನ ನಂತರ ಕೆಲವರು ಆಕೆಗೆ ಬಟ್ಟೆ ಕೊಟ್ಟು, ಪೊಲೀಸರಿಗೆ ವಿಷಯವನ್ನು ಮುಟ್ಟಿಸಿದರು.

 ಆರೋಪಿಗಳ ಪೈಕಿ ಓರ್ವನ ಬಗ್ಗೆ ಗೊತ್ತು ಎಂದು ಸಂತ್ರಸ್ತೆ ತಿಳಿಸಿದ್ದು, ಪೊಲೀಸರು ಮೂವರು ಕಾಮುಕರ ಬಂಧನಕ್ಕೆ ಕಾರ್ಯಾಚರಣೆ ನಡೆಸುತ್ತಿದ್ದಾರೆ'' ಎಂದು DYSP ಲಾಬುರಾಂ ಬಿಷ್ಟೊಯಿ ಹೇಳಿದ್ದಾರೆ. ಭಿಲ್ವಾರಾ ಜಿಲ್ಲೆಯಲ್ಲೇ ಆಗಸ್ಟ್ 3ರಂದು 14 ವರ್ಷದ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿ ಹತ್ಯೆ ಮಾಡಲಾಗಿತ್ತು. ಇದಾಗಿ ತಿಂಗಳ ನಂತರ ಮತ್ತೊಂದು ಅತ್ಯಾಚಾರದ ಘಟನೆ ನಡೆದಿದೆ.
BREAKING NEWS
Loading latest news...
Join our WhatsApp Channel Powered By : Online Pudu