ಮಂಗಳೂರು: ಸಂಭ್ರಮದ ಗಣೇಶೋತ್ಸವ - ಬಂಟ್ಸ್ ಹಾಸ್ಟೆಲ್ ನಲ್ಲಿ ಶ್ರೀ ಸಿದ್ಧಿವಿನಾಯಕನ ಪ್ರತಿಷ್ಠಾಪನೆ


ಮಂಗಳೂರು: ಬಂಟರ ಯಾನೆ ನಾಡವರ ಮಾತೃ ಸಂಘ, ಶ್ರೀ ಸಿದ್ಧಿವಿನಾಯಕ ಪ್ರತಿಷ್ಠಾನ ಹಾಗೂ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಆಶ್ರಯದಲ್ಲಿ ದ.ಕ., ಉಡುಪಿ ಹಾಗೂ ಕಾಸರಗೋಡಿನ ವಿವಿಧ ಬಂಟರ ಸಂಘಗಳ ಸಹಭಾಗಿತ್ವದಲ್ಲಿ ಸಾರ್ವಜನಿಕ ಶ್ರೀ ಗಣೇಶೋತ್ಸವದ ಅಂಗವಾಗಿ ಬಂಟ್ಸ್ ಹಾಸ್ಟೆಲ್ ನ ಓಂಕಾರ‌ ನಗರದಲ್ಲಿ 17ನೇ ವರ್ಷದ ಗಣೇಶೋತ್ಸವಕ್ಕೆ ಇಂದು ಬೆಳಗ್ಗೆ ಚಾಲನೆ ದೊರಕಿತು.



ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ ಅಜಿತ್ ಕುಮಾರ್ ರೈ ಮತ್ತು ಆಶಾಜ್ಯೋತಿ ರೈ ಹಾಗೂ ಸಮುದಾಯ ಬಾಂಧವರ ಸಮಕ್ಷಮದಲ್ಲಿ ಬೆಳಗ್ಗೆ ಶ್ರೀ ಸಿದ್ಧಿವಿನಾಯಕ ದೇವರ ಬಿಂಬಪ್ರತಿಷ್ಠೆಯು ಪುರೋಹಿತರಿಂದ ನಡೆಯಿತು. ಬಳಿಕ ಧ್ವಜಾರೋಹಣ ನೆರವೇರಿತು. ಬಳಿಕ ಎಲ್ಲರಿಗೂ ತೆನೆ ವಿತರಣೆ ನಡೆಯಿತು.




ಗಣೇಶೋತ್ಸವವನ್ನು ರಾಮಕೃಷ್ಣ ಕೋ ಆಪರೇಟಿವ್ ಸೊಸೈಟಿಯ ಅಧ್ಯಕ್ಷ ಕೆ ಜೈರಾಜ್ ಬಿ ರೈ ಹಾಗೂ ಸೌಮ್ಯ ಜೆ ರೈ ಕಾರ್ಯಕ್ರಮ ಉದ್ಘಾಟಿಸಿದರು. ಶ್ರೀ ವೈಷ್ಣವಿ ದುರ್ಗಾ ದೇವಸ್ಥಾನ ದಶರಥ ನಗರ ಮಣಿಪಾಲದ ಆಡಳಿತ ಮೊಕ್ತೇಸರ ಬಿ ಜಯರಾಜ್ ಹೆಗ್ಡೆ, ಅಮ್ಮಣ್ಣಿ ಜೆ ಹೆಗ್ಡೆ ತೆನೆ ವಿತರಿಸಿದರು. ಈಎಸ್ ಎಂ ಸಬ್ ಮೇಜರ್ ಶಶಿಧರ ಆಳ್ವ ಶರ್ಮಿಳಾ ಎಸ್ ಆಳ್ವ ಧ್ವಜಾರೋಹಣಗೈದರು. ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ, ಸಿದ್ದಿ ವಿನಾಯಕ ಪ್ರತಿಷ್ಠಾನದ ಟ್ರಸ್ಟಿ ಅಜಿತ್ ಕುಮಾರ್ ರೈ ಮಾಲಾಡಿ ಅಧ್ಯಕ್ಷತೆ ವಹಿಸಿದ್ದರು.

ಬಂಟರ ಮಾತೃ ಸಂಘದ ಪ್ರಧಾನ ಕಾರ್ಯದರ್ಶಿ ಕೆ ಎಂ ಶೆಟ್ಟಿ, ಕೋಶಾಧಿಕಾರಿ ರಾಮಮೋಹನ್ ರೈ, ಶ್ರೀ ಸಿದ್ದಿ ವಿನಾಯಕ ಪ್ರತಿಷ್ಠಾನದ ಟ್ರಸ್ಟಿಗಳಾದ ಕೃಷ್ಣ ಪ್ರಸಾದ್ ರೈ, ಮಂಜುನಾಥ ಭಂಡಾರಿ ಶೆಡ್ಡೆ, ನಿಟ್ಟೆಗುತ್ತು ರವಿರಾಜ ಶೆಟ್ಟಿ, ಜಿಲ್ಲಾ ಸಂಚಾಲಕ ಬಿ ನಾಗರಾಜ ಶೆಟ್ಟಿ, ಬಿ ಶೇಖರ ಶೆಟ್ಟಿ, ಸುಧಾಕರ ಎಸ್ ಪೂಂಜ, ಸಿಎ ಶಾಂತಾರಾಮ ಶೆಟ್ಟಿ, ವಸಂತ ಶೆಟ್ಟಿ, ಪ್ರೇಮಾನಂದ ಶೆಟ್ಟಿ, ಭಾರತಿ ಜಿ ಶೆಟ್ಟಿ, ಅರುಣಾ ಎಸ್ ಶೆಟ್ಟಿ, ಉಲ್ಲಾಸ್ ಆರ್ ಶೆಟ್ಟಿ, ಜಯರಾಮ ಸಾಂತ, ಆಶಾ ಜ್ಯೋತಿ ರೈ ಮೊದಲಾದವರು ಉಪಸ್ಥಿತರಿದ್ದರು. 


ಇಂದಿನಿಂದ ತೊಡಗಿ ಮೂರು ದಿನಗಳ ಪರ್ಯಂತರ ಅಂದರೆ ಗುರುವಾರದವರೆಗೆ ಗಣೇಶನನ್ನು ಕೂರಿಸಲಾಗುತ್ತದೆ. ಗುರುವಾರ ಸಂಜೆ ಗಣೇಶನಿಗೆ ವಿಸರ್ಜನೆ ಪೂಜೆ ನೆರವೇರಿ ಜಲಸ್ತಂಭನ ಮಾಡಲಾಗುತ್ತದೆ‌. ಗಣೇಶೋತ್ಸವದ ಪ್ರತೀ ದಿನವೂ ಧಾರ್ಮಿಕ ಸಭೆ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತದೆ. ಬುಧವಾರ ಧಾರ್ಮಿಕ ಕಾರ್ಯಕ್ರಮದ ಅಂಗವಾಗಿ ಅಷ್ಟೋತ್ತರ ಸಹಸ್ರ ನಾರಿಕೇಳ ಮಹಾಗಣಯಾಗ ನಡೆಯಲಿದೆ. ಗುರುವಾರ ಸಂಜೆ 3.30ಕ್ಕೆ ದೇವರ ಶೋಭಾಯಾತ್ರೆ ನಡೆದು ನಗರದಲ್ಲಿ ಸಂಚರಿಸಿ ಮಹಮ್ಮಾಯಿ ಕೆರೆಯಲ್ಲಿ ಜಲಸ್ತಂಭನ ನಡೆಯಲಿದೆ.