-->

ಮುಲ್ಕಿಯಲ್ಲಿ ತಾಯಿಯ  ಆತ್ಮಹತ್ಯೆಗೆ ಪುತ್ರರ ಪ್ರಚೋದನೆ ಮೂವರು  ಅರೆಸ್ಟ್

ಮುಲ್ಕಿಯಲ್ಲಿ ತಾಯಿಯ ಆತ್ಮಹತ್ಯೆಗೆ ಪುತ್ರರ ಪ್ರಚೋದನೆ ಮೂವರು ಅರೆಸ್ಟ್

ಮಂಗಳೂರು: ವಿಪರೀತ ಮದ್ಯದ ನಶೆಯಲ್ಲಿ ತನ್ನ ತಾಯಿಯ ಆತ್ಮಹತ್ಯೆ ಗೆ ಪ್ರಚೋದನೆ ನೀಡಿದ ಮೂವರು ಪುತ್ರರನ್ನು ಮುಲ್ಕಿ ಪೊಲೀಸರು ಬಂಧಿಸಿದ್ದಾರೆ.

 ಮೂಲ್ಕಿ ಠಾಣಾ ವ್ಯಾಪ್ತಿಯ ಕೆ.ಎಸ್. ರಾವ್ ನಗರದ ಲಿಂಗಪ್ಪಯ್ಯಕಾಡು ಕೊರಂಟಬೆಟ್ಟು ಕಾಲೊನಿಯಲ್ಲಿ ಮಕ್ಕಳು ಪ್ರಚೋದನೆ ನೀಡಿದ ಪರಿಣಾಮ ತಾಯಿ ಆತ್ಮಹತ್ಯೆಗೆ ಶರಣಾಗಿದ್ದರು.
 
 

ಸುಮಿತ್ರಾ (44) ಎಂಬವರು ಆತ್ಮಹತ್ಯೆ ಮಾಡಿಕೊಂಡ ಮಹಿಳೆ.  ಆಕೆಯ ಆತ್ಮಹತ್ಯೆ ಗೆ ಪ್ರಚೋದನೆ ನೀಡಿದ ಆರೋಪದಲ್ಲಿ ಮಕ್ಕಳಾದ ಮಂಜುನಾಥ(25), ಸಂಜೀವ (22), ಪ್ರಹ್ಲಾದ ಯಾನೆ ಪ್ರಭು (19) ಎಂಬುವರನ್ನು ಮುಲ್ಕಿ ಪೊಲೀಸರು ಬಂಧಿಸಿದ್ದಾರೆ. 

ಆರೋಪಿ ಮಕ್ಕಳು ಗುರುವಾರ ರಾತ್ರಿ 11.30ರ ವೇಳೆ ಕುಡಿದ ನಶೆಯಲ್ಲಿ ಕ್ಷುಲ್ಲಕ ಕಾರಣಕ್ಕೆ ಮನೆಯಲ್ಲಿ ಜಗಳ ಮಾಡಿಕೊಂಡಿದ್ದರು. ಇದರಿಂದ ತಾಯಿ ಸುಮಿತ್ರಾ ನೊಂದು ಕೋಣೆಯ ಪಕ್ಕಾಸಿಗೆ ಸೀರೆಯಿಂದ ನೇಣು ಬಿಗಿದು ಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಸ್ಥಳಕ್ಕೆ ಪಣಂಬೂರು ಎಸಿಪಿ, ಮೂಲ್ಕಿ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದು, ಮೂವರು ಆರೋಪಿಗಳನ್ನು ಬಂಧಿಸಿ ಆತ್ಮಹತ್ಯೆಗೆ  ಪ್ರಚೋದನೆ ನೀಡಿದ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

Ads on article

🎁 Amazon Prime ಸದಸ್ಯರಾಗಿರಿ

Amazon Prime Offer
👉 ಉಚಿತ shipping, Prime Video, shopping deals—all in one!

Disclosure: ಈ ಲಿಂಕ್ Amazon Affiliate Program ನ ಭಾಗವಾಗಿದೆ. ನೀವು ಈ ಲಿಂಕ್ ಮೂಲಕ Prime ಸದಸ್ಯರಾಗಿದರೆ, ನಮಗೆ commission ಸಿಗಬಹುದು.

Advertise in articles 1

advertising articles 2

Advertise under the article