-->
1000938341
ಮಂಗಳೂರು: ರಿಕ್ಷಾದಲ್ಲಿ 2.50 ಕ್ವಿಂಟಾಲ್ ಗೋಮಾಂಸ ಅಕ್ರಮ ಸಾಗಾಟ - ಮಾಲು ಸಹಿತ ಆರೋಪಿಯನ್ನು ಪೊಲೀಸರಿಗೊಪ್ಪಿಸಿದ ಬಜರಂಗದಳ ಕಾರ್ಯಕರ್ತರು

ಮಂಗಳೂರು: ರಿಕ್ಷಾದಲ್ಲಿ 2.50 ಕ್ವಿಂಟಾಲ್ ಗೋಮಾಂಸ ಅಕ್ರಮ ಸಾಗಾಟ - ಮಾಲು ಸಹಿತ ಆರೋಪಿಯನ್ನು ಪೊಲೀಸರಿಗೊಪ್ಪಿಸಿದ ಬಜರಂಗದಳ ಕಾರ್ಯಕರ್ತರು


ಮಂಗಳೂರು: ಆಟೊರಿಕ್ಷಾದಲ್ಲಿ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ 2.50 ಕ್ವಿಂಟಾಲ್ ಗೋಮಾಂಸವನ್ನು ಪತ್ತೆಹಚ್ಚಿರುವ ಬಜರಂಗದಳದ ಕಾರ್ಯಕರ್ತರು ಆರೋಪಿ ಸಹಿತ ಸೊತ್ತನ್ನು ಉರ್ವ ಠಾಣಾ ಪೊಲೀಸರಿಗೊಪ್ಪಿಸಿದ ಘಟನೆ ಉರ್ವಸ್ಟೋರ್ ನ ಚಿಲಿಂಬಿ ಬಳಿ ರವಿವಾರ ಬೆಳ್ಳಂಬೆಳಗ್ಗೆ 6ಗಂಟೆ ಸುಮಾರಿಗೆ ನಡೆದಿದೆ.

ಜೋಕಟ್ಟೆಯಿಂದ ಗೋಮಾಂಸವನ್ನು ರಿಕ್ಷಾದಲ್ಲಿ ನಗರದ ಬೀಫ್ ಸ್ಟಾಲ್ ಗೆ ಸಾಗಾಟ ಮಾಡಲಾಗುತ್ತಿತ್ತು. ಈ ಬಗ್ಗೆ ಮಾಹಿತಿ ತಿಳಿದು ಬಜರಂಗದಳದ ಕಾರ್ಯಕರ್ತರು ಚಿಲಿಂಬಿಯಲ್ಲಿ ರಿಕ್ಷಾವನ್ನು ತಡೆದು ಆರೋಪಿಯನ್ನು ಗೋಮಾಂಸ ಸಹಿತ ಪೊಲೀಸರಿಗೊಪ್ಪಿಸಿದ್ದಾರೆ‌. ಐದು ಗೋವುಗಳ 2.50 ಕ್ವಿಂಟಾಲ್ ಮಾಂಸವನ್ನು ರಿಕ್ಷಾದಲ್ಲಿ ಸಾಗಾಟ ಮಾಡಲಾಗುತ್ತಿತ್ತು ಎಂದು ತಿಳಿದು ಬಂದಿದೆ.


ಜೋಕಟ್ಟೆಯ ಬದ್ರು ಎಂಬಾತನಿಗೆ ಸೇರಿದ ಈ ಗೋಮಾಂಸವನ್ನು ದಾವೂದ್ ಎಂಬಾತ ರಿಕ್ಷಾದಲ್ಲಿ ಸಾಗಾಟ ಮಾಡುತ್ತಿದ್ದ. ಈ ಮಾಂಸ ಮಾರುಕಟ್ಟೆಯಲ್ಲಿನ ಮಾಂಸದಂಗಡಿಯ ಯಾಸಿನ್ ಎಂಬಾತನಿಗೆ ಸಾಗಾಟ ಮಾಡಲಾಗುತ್ತಿತ್ತು. ಎರಡು ತಿಂಗಳಿನಿಂದ ಈ ರೀತಿಯಲ್ಲಿ ಮಾಂಸ ಸಾಗಾಟ ಮಾಡಲಾಗುತ್ತಿದೆ ಎಂದು ಆರೋಪಿಯೇ ಬಜರಂಗದಳದ ಕಾರ್ಯಕರ್ತರಲ್ಲಿ ಹೇಳುತ್ತಿರುವುದು ವೀಡಿಯೋದಲ್ಲಿ ದಾಖಲಾಗಿದೆ.


ತಕ್ಷಣ ಉರ್ವ ಠಾಣಾ ಪೊಲೀಸರು ಸ್ಥಳಕ್ಕೆ ಆಗಮಿಸಿ ಆರೋಪಿ ಹಾಗೂ ಸೊತ್ತನ್ನು ವಶಕ್ಕೆ ತೆಗೆದುಕೊಂಡಿದ್ದಾರೆ‌. ಈ ಬಗ್ಗೆ ಪ್ರಕರಣ ದಾಖಲಿಸಿ, ಆರೋಪಿಯ ವಿಚಾರಣೆ ನಡೆಸುತ್ತಿದ್ದಾರೆ‌.Ads on article

Advertise in articles 1

advertising articles 2

Advertise under the article