ಉದಯನಿಧಿ ಸ್ಟಾಲಿನ್ ತಲೆಕಡಿದು ತಂದಲ್ಲಿ‌ 10ಕೋಟಿ ಬಹುಮಾನ ಘೋಷಿಸಿದ ಅಯೋಧ್ಯೆಯ ಸಂತ ಪರಮಹಂಸ ಆಚಾರ್ಯ

ನವದೆಹಲಿ: ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಪುತ್ರ, ಸಚಿವ ಉದಯನಿಧಿ ಸ್ಟಾಲಿನ್ ಸನಾತನ ಧರ್ಮವನ್ನು ಡೆಂಗ್ಯು, ಮಲೇರಿಯಾ ರೋಗಗಳಿಗೆ ಹೋಲಿಸಿರುವುದಕ್ಕೆ ದೇಶಾದ್ಯಂತ ಆಕ್ರೋಶ ವ್ಯಕ್ತವಾಗಿದೆ. ಇದೀಗ ಸ್ಟಾಲಿನ್ ತಲೆ ಕಡಿದರೆ 10 ಕೋಟಿ ರೂ. ಕೊಡುತ್ತೇನೆಂದು ಅಯೋಧ್ಯೆಯ ಸಂತ ಪರಮಹಂಸ ಆಚಾರ್ಯ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಖಡ್ಗದಿಂದ ಡಿಎಂಕೆ ನಾಯಕ ಉದಯನಿಧಿ ಸ್ಟಾಲಿನ್ ರವರ ಭಾವಚಿತ್ರದ ಸಾಂಕೇತಿಕ 'ಶಿರಚ್ಛೇದ' ನಡೆಸಿದ ಪರಮಹಂಸ ಆಚಾರ್ಯ, ಪೋಸ್ಟರ್‌ಗೆ ಬೆಂಕಿ ಹಚ್ಚಿ ಪ್ರತಿಭಟಿಸಿದ್ದಾರೆ. ಬಳಿಕ ಸಚಿವ ಉದಯನಿಧಿ ಸ್ಟಾಲಿನ್ ತಲೆಯನ್ನು ಯಾರಾದರೂ ಕಡಿದು ತಂದಲ್ಲಿ ಅವರಿಗೆ 10 ಕೋಟಿ ರೂ. ಬಹುಮಾನ ನೀಡುವುದಾಗಿ ಘೋಷಿಸಿದ್ದಾರೆ.

ಸನಾತನ ಧರ್ಮವು ಲಕ್ಷಾಂತರ ಸಾವಿರ ವರ್ಷಗಳಿಂದ ಬೆಳೆದು ಬಂದಿದೆ. ಇದಕ್ಕೆ ಆದಿ, ಅಂತ್ಯವಿಲ್ಲ. ಉಳಿದವು ಎರಡು ಸಾವಿರ ವರ್ಷಗಳ ಈಚೆಗೆ ಹುಟ್ಟಿ ಬಂದಿವೆ ಅಷ್ಟೇ. ಭೂಮಿಯಲ್ಲಿ ಅಳಿಯದೆ ಉಳಿದಿರುವುದು ಸನಾತನ ಧರ್ಮ ಅಷ್ಟೇ. ಇದನ್ನು ಅಂತ್ಯಗೊಳಿಸುತ್ತೇನೆ ಎಂದವರನ್ನು ಅಂತ್ಯಗೊಳಿಸಿದೆ. ಈ ಧರ್ಮವನ್ನು ಯಾರಿಂದಲೂ ಅಂತ್ಯಗೊಳಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ಆಚಾರ್ಯ ಪರಮಹಂಸರು ಈ ಹಿಂದೆಯೂ ಇಂತಹ ಹೇಳಿಕೆಗಳಿಂದ ವಿವಾದಗಳನ್ನು ಹುಟ್ಟುಹಾಕಿದ್ದರು. ಈ ಹಿಂದೆ, ರಾಮಚರಿತ ಮಾನಸ್‌ ವಿರುದ್ಧ ಹೇಳಿಕೆ ನೀಡಿದ್ದಕ್ಕಾಗಿ ಬಿಹಾರದ ಸಚಿವರ ನಾಲಿಗೆಯನ್ನು ಕತ್ತರಿಸುವಂತೆ ಹೇಳಿ 10 ಕೋಟಿ ರೂ. ಬಹುಮಾನ ಘೋಷಿಸಿದ್ದರು.

BREAKING NEWS
Loading latest news...
Join our WhatsApp Channel Powered By : Online Pudu