ಪುತ್ತೂರು: ಲೈವ್ ವೀಡಿಯೋ ಮಾಡಿ ಆತ್ಮಹತ್ಯೆಗೆ ಯತ್ನಿಸಿದ ಯುವಕ - ಕಾರಣವೇನು ಗೊತ್ತೇ...?


ಪುತ್ತೂರು: ಲೈವ್ ವೀಡಿಯೋ ಮಾಡಿ ಯುವಕನೊಬ್ಬ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಪುತ್ತೂರಿನಲ್ಲಿ ನಡೆದಿದೆ. ಇದೀಗ ಚಿಂತಾಜನಕ ಸ್ಥಿತಿಯಲ್ಲಿರುವ ಯುವಕನನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಪುತ್ತೂರು ಕಟ್ಟತ್ತಾರು ನಿವಾಸಿ ಅಬ್ದುಲ್ ನಾಸಿರ್ ಆತ್ಮಹತ್ಯೆಗೆತ್ನಿಸಿದ ಯುವಕ. 

ಆತ್ಮಹತ್ಯೆಗೆತ್ನಿಸುವ ಮುನ್ನ ಯುವಕನು ಆತ್ಮಹತ್ಯೆ ಮಾಡಲು ಕಾರಣ ಹಾಗೂ, ಆತ್ಮಹತ್ಯೆಗೆ ಕಾರಣರಾರು ಎಂದು ವಿಡಿಯೋ ಮಾಡಿ ಬ್ಯಾರಿ ಭಾಷೆಯಲ್ಲಿ ಹೇಳಿದ್ದಾನೆ. ಅಲ್ಲದೆ ವೀಡಿಯೋದಲ್ಲಿ ತಾನು ಪುತ್ತೂರಿಗೆ ಹೋಗಿ ಆತ್ಮಹತ್ಯೆ ಮಾಡುವುದಾಗಿ ಹೇಳಿದ್ದಾನೆ. 




ವೀಡಿಯೋದಲ್ಲಿ ''ತಾನು ಕಟ್ಟತ್ತಾರು ನಿವಾಸಿ ಅಬ್ದುಲ್ ನಾಸಿರ್. ಅದ್ರಾಮ ಎಂಬವರ ಮನೆಯಲ್ಲಿ ಕಾರು ಚಾಲಕನಾಗಿದ್ದೆ. ಆದರೆ ಅದ್ರಾಮ, ಅವರ ಅಣ್ಣ, ಅಣ್ಣನ ಮಕ್ಕಳು ಸೇರಿ ಬೆಳ್ಳಾರೆಯಲ್ಲಿ ಹಲ್ಲೆ ನಡೆಸಿದ್ದಾರೆ. ಇದೀಗ ಅವರೇ ನನ್ನನ್ನು ಪುತ್ತೂರಿಗೆ ಕರೆದೊಯ್ದು ಬಿಡುತ್ತಿದ್ದಾರೆ. ನನಗೆ ಅವರೊಂದಿಗೆ ಡ್ರೈವರ್ ಇದ್ದಾಗ ಇರುವ ಸಂಬಂಧ ಬಿಟ್ಟರೆ ಬೇರೇನೂ ಸಂಬಂಧವಿಲ್ಲ. ನಾನು ಈಗ ಪುತ್ತೂರಿಗೆ ಹೋಗಿ ಸಾವಿಗೆ ಶರಣಾಗುತ್ತೇನೆ. ನನ್ನ ಸಾವಿಗೆ ಅದ್ರಾಮ ಮತ್ತು ಅವನ ಕುಟುಂಬಸ್ಥರೇ ಕಾರಣ' ಎಂದು ವಿಡಿಯೋದಲ್ಲಿ ಹೇಳಿದ್ದಾನೆ.

ಆ ಬಳಿಕ ಪುತ್ತೂರಿನಲ್ಲಿ ಆತ್ಮಹತ್ಯೆಗೆತ್ನಿಸಿ ಗಂಭೀರ ಸ್ಥಿತಿಯಲ್ಲಿದ್ದ ಆತನನ್ನು ಜೊತೆಗಿದ್ದವರು ರಕ್ಷಿಸಿ ರಾತ್ರಿಯೇ ಆಸ್ಪತ್ರೆಗೆ ಕರೆತಂದಿದ್ದಾರೆ.