ಬೆಳ್ತಂಗಡಿ: ಸೌಜನ್ಯಾ ತಾಯಿ - ಆರೋಪ ಹೊರಿಸಲಾದ ಮೂವರಿಂದ ಅಣ್ಣಪ್ಪ ಸ್ವಾಮಿ ಬೆಟ್ಟದ ಮುಂದೆ ಪ್ರಮಾಣ!
Sunday, August 27, 2023
ಬೆಳ್ತಂಗಡಿ: ಧರ್ಮಸ್ಥಳದಲ್ಲಿ ಸೌಜನ್ಯಾ ಅತ್ಯಾಚಾರ - ಕೊಲೆ ಪ್ರಕರಣದ ಹಿನ್ನೆಲೆಯಲ್ಲಿ ಇಂದು ಧರ್ಮಸ್ಥಳದ ಅಣ್ಣಪ್ಪ ಸ್ವಾಮಿ ಬೆಟ್ಟದ ಮುಂಭಾಗ ಪ್ರಾರ್ಥನೆ ನಡೆಯಿತು. ಆರೋಪಿಗಳಿಗೆ ಶಿಕ್ಷೆಯಾಗಬೇಕೆಂದು ಸೌಜನ್ಯಾ ತಾಯಿ ಕುಸುಮಾವತಿ ಪ್ರಾರ್ಥಿಸಿದರೆ, ಆರೋಪ ಹೊರಿಸಲಾದ ಮೂವರು ವೃಥಾ ತಮ್ಮ ಮೇಲೆ ಆರೋಪ ಮಾಡುವವರರಿಗೆ ಶಿಕ್ಷೆ ನೀಡಬೇಕೆಂದು ಅಣ್ಣಪ್ಪ ಸ್ವಾಮಿ ಬೆಟ್ಟದ ಮುಂಭಾಗ ನೆರೆದ ಸಾವಿರಾರು ಮಂದಿಯ ಮುಂಭಾಗ ಪ್ರಾರ್ಥಿಸಿದರು.
ವಿಶ್ವ ಹಿಂದೂ ಪರಿಷತ್, ಬಜರಂಗದಳ ಆಯೋಜನೆ ಮಾಡಿರುವ ಪಾದಯಾತ್ರೆಯಲ್ಲಿ ಸೌಜನ್ಯಾ ತಾಯಿ ಕುಸುಮಾವತಿ ಹಾಗೂ ಕುಟುಂಬ ಸದಸ್ಯರು ಭಾಗಿಯಾಗಿ, ಅಣ್ಣಪ್ಪ ಸ್ವಾಮಿ ಮುಂಭಾಗಕ್ಕೆ ಪಾದಯಾತ್ರೆಯಲ್ಲಿ ಸಾವಿರಾರು ಮಂದಿಯೊಂದಿಗೆ ಸಾಗಿದರು. ಬಳಿಕ ಬೆಟ್ಟದ ಮುಂದೆ ನಡೆದ ಪ್ರಾರ್ಥನೆಯಲ್ಲಿ ಸೌಜನ್ಯ ತಾಯಿ ಹಾಗೂ ಮಲ್ಲಿಕ್ ಜೈನ್ , ಧೀರಜ್ , ಉದಯ್ ಜೈನ್ ಭಾಗಿಯಾಗಿದ್ದರು. ಬಿಗಿ ಪೋಲಿಸ್ ಬಂದೊಬಸ್ತ್ ನಲ್ಲಿ ಪ್ರಾರ್ಥನೆ ನಡೆಯಿತು. ಅಣ್ಣಪ್ಪ ಸ್ವಾಮಿ ಬೆಟ್ಟದಲ್ಲಿ ಕಣ್ಣೀರಿಟ್ಟ ಸೌಜನ್ಯಾ ತಾಯಿ ಕುಸುಮಾವತಿ ಅಣ್ಣಪ್ಪ ಸ್ವಾಮಿಗೆ ಕಾಣಿಕೆ ಸಲ್ಲಿಸಿ ಪ್ರಾರ್ಥನೆ ಸಲ್ಲಿಸಿದರು. ಸೌಜನ್ಯಾ ಅತ್ಯಾಚಾರ ಕೊಲೆಯನ್ನು ಯಾರು ಮಾಡಿದ್ದಾರೋ ಆ ಅಪರಾಧಿಗಳಿಗೆ ಶಿಕ್ಷೆಯಾಗುವಂತೆ ಪ್ರಾರ್ಥಿಸಿದರು.
ಸೌಜನ್ಯ ತಾಯಿ ಪ್ರಾರ್ಥನೆಯಾದ ಬಳಿಕ ಆರೋಪ ಹೊರಿಸಲಾದ ಮಲ್ಲಿಕ್ ಜೈನ್, ಉದಯ್ ಜೈನ್, ಧೀರಜ್ ಕೆಲ್ಲರಿಂದಲೂ ಅಣ್ಣಪ್ಪ ಸ್ವಾಮಿ ಬೆಟ್ಟದ ಮುಂಭಾಗ ಪ್ರಾರ್ಥನೆ ಮಾಡಿದರು. ಈ ಪ್ರಕರಣದಲ್ಲಿ ನಮ್ಮ ಯಾವುದೇ ಪಾತ್ರವಿಲ್ಲ. ಆದರೆ ನಮ್ಮ ಹೆಸರನ್ನು ಅನಾವಶ್ಯಕವಾಗಿ ಎಳೆದು ತರಲಾಗಿದೆ ಆದರೆ ನಾವು ಯಾವ ತಪ್ಪನ್ನೂ ಮಾಡಿಲ್ಲ. ಆದ್ದರಿಂದ ವೃಥಾ ಆರೋಪ ಮಾಡುವವರಿಗೆ ತಕ್ಕ ಶಿಕ್ಷೆ ವಿಧಿಸಬೇಕೆಂದು ಅಣ್ಣಪ್ಪ ಸ್ವಾಮಿಯಲ್ಲಿ ಪ್ರಾರ್ಥಿಸಿದರು.