ಕಂಡಿಷನ್ ಹಾಕಿಯೇ ಹೃಷಿಕಾಗೆ ಪ್ರೊಪೋಸ್ ಮಾಡಿದ್ರಂತೆ ಭುವನ್ ಪೊಣ್ಣನ್ನ
Friday, August 25, 2023
ಬೆಂಗಳೂರು: ತಮ್ಮ ಬಹುಕಾಲದ ಪ್ರೀತಿಗೆ ಸ್ಯಾಂಡಲ್ ವುಡ್ ತಾರಾ ಜೋಡಿ ಹರ್ಷಿಕಾ ಪುಣಚ್ಚ ಹಾಗೂ ಭುವನ್ ಪೊಣ್ಣನ್ನ ಮದುವೆಯೆಂಬ ಅಧಿಕೃತ ಮುದ್ರೆಯನ್ನು ಒತ್ತಿದ್ದಾರೆ. ಇಬ್ಬರದ್ದೂ ಪ್ರೇಮ ವಿವಾಹವಾದರೂ, ಎರಡೂ ಕುಟುಂಬದ ಒಪ್ಪಿಗೆಯಿಂದ ಗುರು - ಹಿರಿಯರ ಸಮ್ಮುಖದಲ್ಲಿ ಕೊಡವರ ಶೈಲಿಯಲ್ಲಿ ಮದುವೆಯಾಗಿದೆ.
ಫ್ಯಾಶನ್ ಶೋವೊಂದರಲ್ಲಿ ಇಬ್ಬರು ಪರಸ್ಪರ ಮೊದಲ ಭೇಟಿಯಾಗಿದ್ದಾರೆ. ಭುವನ್ ಅವರು ಹರ್ಷಿಕಾರ ಮೊದಲ ನೋಟದಲ್ಲೇ ಫ್ಲ್ಯಾಟ್ ಆಗಿದ್ದಾರಂತೆ. ಈ ಪರಿಚಯವೇ ಸ್ನೇಹವಾಗಿ ತಿರುಗಿ ಇಬ್ಬರ ನಡುವೆ ಪ್ರೀತಿಗೆ ತಿರುಗಿತ್ತಂತೆ. ಆದರೆ ಪ್ರೀತಿಯ ವಿಚಾರದಲ್ಲಿ ಮೊದಲು ಪ್ರಪೋಸ್ ಮಾಡಿದ್ದು ಭುವನ್ ಅವರೇ ಅಂತೆ. ಆದ್ರೆ ಕಂಡಿಷನ್ ಹಾಕಿಯೇ ಪ್ರಪೋಸ್ ಮಾಡಿದ್ರಂತೆ.
ಹರ್ಷಿಕಾಗೆ ಮೊದಲು ಪ್ರಪೋಸ್ ಮಾಡಿದ ಭುವನ್ ಒಂದೇ ದಿನದಲ್ಲಿ ಉತ್ತರ ಹೇಳಬೇಕು ಎಂದು ಟೈಂ ಫಿಕ್ಸ್ ಮಾಡಿದ್ರಂತೆ. ಫಸ್ಟ್ ಇಂಪ್ರೆಷನ್‌ನಲ್ಲೇ ಭುವನ್ ಇಷ್ಟವಾದ ಕಾರಣ ಒಂದೇ ದಿನದಲ್ಲಿ ಯಸ್ ಎಂದು ಸಮ್ಮತಿಸಿದ್ರಂತೆ ಹರ್ಷಿಕಾ.. ಕುಟುಂಬದವರಿಗೂ ಕೂಡ ಭುವನ್ ಬಗ್ಗೆ ಒಳ್ಳೆಯ ಅಭಿಪ್ರಾಯವಿದ್ದ ಕಾರಣ ಪ್ರೀತಿಗೆ ಗ್ರೀನ್ ಸಿಗ್ನಲ್ ನೀಡಿದ್ದರಂತೆ.