ಉಡುಪಿಯಲ್ಲಿ 32 ವರ್ಷದ ಮಹಿಳೆ 9 ವರ್ಷದ ಮಗಳೊಂದಿಗೆ ನಾಪತ್ತೆ


ಉಡುಪಿ: ನಗರದ ನಯಂಪಳ್ಳಿ ನಿವಾಸಿ ಅಕ್ಷತಾ  ಎಂಬ 32 ವರ್ಷ ಪ್ರಾಯದ  ಮಹಿಳೆ ತನ್ನ 9 ವರ್ಷ ಪ್ರಾಯದ ಮಗಳಾದ ಖುಷಿಯೊಂದಿಗೆ ಎ.30ರಂದು ಮನೆಯಿಂದ ಹೊರಗೆ ಹೋದವರು ವಾಪಾಸು ಬಾರದೇ ನಾಪತ್ತೆಯಾಗಿದ್ದಾರೆ.

ಅಕ್ಷತಾ 5 ಅಡಿ 4 ಇಂಚು ಎತ್ತರ, ಸಾಧಾರಣ ಶರೀರ, ಗೋಧಿ ಮೈಬಣ್ಣ, ದುಂಡು ಮುಖ ಹೊಂದಿದ್ದು, ಕನ್ನಡ, ಹಿಂದಿ ಹಾಗೂ ತುಳು ಭಾಷೆ ಮಾತನಾಡುತ್ತಾರೆ. ಖುಷಿ 4 ಅಡಿ 2 ಇಂಚು ಎತ್ತರ, ಸಾಧಾರಣ ಶರೀರ, ಗೋಧಿ ಮೈಬಣ್ಣ, ದುಂಡು ಮುಖ ಹೊಂದಿದ್ದು ಕನ್ನಡ, ಇಂಗ್ಲಿಷ್ ಹಾಗೂ ತುಳು ಭಾಷೆ ಮಾತನಾಡುತ್ತಾರೆ.

ಇವರ ಬಗ್ಗೆ ಮಾಹಿತಿ ದೊರೆತಲ್ಲಿ ಉಡುಪಿ ನಗರ ಪೊಲೀಸ್ ಠಾಣಾಧಿಕಾರಿಯನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

BREAKING NEWS
Loading latest news...
Join our WhatsApp Channel Powered By : Online Pudu