-->
ಬೇರೆ ಜಾತಿಯ ಯುವಕನನ್ನು ಪ್ರೀತಿಸಿದ್ದಕ್ಕೆ 19 ವರ್ಷದ ಮಗಳನ್ನು ಕೊಂದ ತಂದೆ

ಬೇರೆ ಜಾತಿಯ ಯುವಕನನ್ನು ಪ್ರೀತಿಸಿದ್ದಕ್ಕೆ 19 ವರ್ಷದ ಮಗಳನ್ನು ಕೊಂದ ತಂದೆ

ಕೋಲಾರ: ಕೋಲಾರ ತಾಲೂಕಿನ ತೊಟ್ಟಿ ಗ್ರಾಮದಲ್ಲಿ ಮರ್ಯಾದ ಹತ್ಯೆ ನಡೆದಿದೆ ಎಂದು ವರದಿಯಾಗಿದೆ.

 ತಮ್ಮದಲ್ಲದೆ ಜಾತಿಯ ಯುವಕನನ್ನು ಪ್ರೀತಿಸುತ್ತಿದ್ದ ಕಾರಣಕ್ಕೆ ತಂದೆಯೇ ಪುತ್ರಿಯನ್ನು ಕೊಲೆಗೈದಿರುವ ಘಟನೆ ನಡೆದಿದೆ.

ತೊಟ್ಟಿ ಗ್ರಾಮದ ನಿವಾಸಿ ರಮ್ಯಾ (19) ಕೊಲೆಯಾದ ಯುವತಿ, ಈಕೆಯ ತಂದೆ ವೆಂಕಟೇಶಗೌಡ ಕೊಲೆ ಆರೋಪಿ.

ರಮ್ಯಾ ಬೇರೆ ಜಾತಿಯ ಯುವಕನನ್ನು ಪ್ರೀತಿಸುತ್ತಿದ್ದು, ಇದಕ್ಕೆ
ಮನೆಮಂದಿಯ ವಿರೋಧವಿತ್ತು. ಈ ವಿಚಾರವಾಗಿ ಪೋಷಕರು ಎಷ್ಟೇ ಬುದ್ದಿ ಹೇಳಿದರೂ ರಮ್ಯಾ ಕೇಳಿರಲಿಲ್ಲ. ಇದರಿಂದ ಸಿಟ್ಟಿಗೆದ್ದ ತಂದೆ ವೆಂಕಟೇಶಗೌಡ ಆ.25ರಂದು ರಮ್ಯಾಳನ್ನು ಕೊಲೆ ಮಾಡಿದ್ದಾನೆ. ನಂತರ ಪೋಷಕರು ಎಲ್ಲರೂ ಸೇರಿ ಅಂತ್ಯಸಂಸ್ಕಾರ ಮಾಡಿದ್ದಾರೆ.


ರಮ್ಯಾ ಸಾವಿನ ಬಗ್ಗೆ ಗ್ರಾಮದಲ್ಲಿ ಶಂಕೆ ವ್ಯಕ್ತವಾಗಿತ್ತು. ಈ ವಿಚಾರ ತಿಳಿಯುತ್ತಲೆ ಪೊಲೀಸರು ವೆಂಕಟೇಶಗೌಡನನ್ನು ವಶಕ್ಕೆ ವಿಚಾರಣೆಗೆ ಒಳಪಡಿಸಿದಾಗ ಕೃತ್ಯ ಬೆಳಕಿಗೆ ಬಂದಿದೆ.

ಈ ಹಿನ್ನೆಲೆಯಲ್ಲಿ ಇಂದು ಬೆಳಗ್ಗೆ ತಹಶಿಲ್ದಾರ್ ಹರ್ಷವರ್ಧನ್ ಅವರು ರಮ್ಯಾರನ್ನು ಸಮಾಧಿ ಮಾಡಿದ್ದ ಸ್ಥಳಕ್ಕೆ ಆಗಮಿಸಿ ಮೃತದೇಹವನ್ನು ಹೊರತೆಗೆಸಿದ್ದು, ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.

ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Ads on article

Advertise in articles 1

advertising articles 2

ಉಚಿತವಾಗಿ ಸುದ್ದಿ ಕೊಡುತ್ತಿರುವ ನಮಗೆ ಸಹಾಯ ಮಾಡಿ

  

Pay Rs 100

  

Advertise under the article