Mangalore- ಪ್ರೀತಿಯ ನಾಟಕ ಮಾಡಿ ಅಪ್ತಾಪ್ತೆಯ ಅತ್ಯಾಚಾರ- ಅಬ್ದುಲ್ ಸಮೀರ್ ಮೇಲೆ ಕೇಸ್!


ಮಂಗಳೂರು :ಅಪ್ರಾಪ್ತೆಯೆ ಮೇಲೆ ಪ್ರೀತಿಯ ನಾಟಕ ಮಾಡಿ ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣಕ್ಕೆ ಸಂಬಂಧಿಸಿ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ‌

ಈ ಸಂಬಂಧ ಆರೋಪಿ ಅಬ್ದುಲ್ ಸಮೀರ್ ಎಂಬಾತನ ಮೇಲೆ ವಿಟ್ಲ ಪೊಲೀಸ್ ಠಾಣೆಯಲ್ಲಿ Pocso ಪ್ರಕರಣ ದಾಖಲಾಗಿದೆ. 

ಈ ಘಟನೆ  2019ರ ನವೆಂಬರ್ ಡಿಸೆಂಬರ್ ಮಧ್ಯೆ ನಡೆದಿದ್ದು, ಇದೀಗ ತಡವಾಗಿ ಪ್ರಕರಣ ದಾಖಲು ಮಾಡಲಾಗಿದೆ.

ಅಪ್ರಾಪ್ತ ಬಾಲಕಿಯನ್ನು ಆರೋಪಿ ಅಬ್ದುಲ್ ಸಮೀರ್  ಮೊಬೈಲ್‌ನಲ್ಲಿ ಸಂಪರ್ಕಿಸಿ ಬಳಿಕ ಪ್ರೀತಿಸುವ ನಾಟಕವಾಡಿ, ವಿವಾಹವಾಗುತ್ತೇನೆಂದು ನಂಬಿಸಿ ಬಂಟ್ವಾಳ ತಾಲೂಕು ಕನ್ಯಾನ ಗ್ರಾಮದ ನಿರ್ಮಾಣ ಹಂತದ ಮನೆಯೊಂದರ ಬಳಿ 2019ರ ನವೆಂಬರ್ ತಿಂಗಳಿನಿಂದ 2019ರ ಡಿಸೆಂಬರ್ ತಿಂಗಳ ಕೊನೆಯ ವಾರದ ಅವಧಿ ಯಲ್ಲಿ ಅತ್ಯಾಚಾರ ಮಾಡಿದ್ದನು.  ಬಳಿಕ ಮೋಸ ಮಾಡಿ ಈತ ವಿದೇಶಕ್ಕೆ ಪರಾರಿಯಾಗಿದ್ದಾನೆ. 

ಅಬ್ದುಲ್ ಸಮೀ‌ರ್  ವಿವಾಹವಾಗುತ್ತೇನೆಂದು ಹೇಳಿ ಆಕೆಗೆ ಮೊಬೈಲ್ ಕೊಟ್ಟು ನಂಬಿಸಿ ಬಲಾತ್ಕಾರವೆಸಗಿ ಮದುವೆಯಾಗದೇ ಮೋಸ ಮಾಡಿರುವುದಾಗಿ ಪ್ರಕರಣ ದಾಖಲಾಗಿದೆ.