ಪ್ರತಿಷ್ಠಿತ ಆಮ್‌ವೇ ಕಂಪೆನಿ ಜತೆ ಆಳ್ವಾಸ್ ಪ್ರತಿಷ್ಠಾನದಿಂದ ಶೈಕ್ಷಣಿಕ ಒಡಂಬಡಿಕೆ

ಪ್ರತಿಷ್ಠಿತ ಆಮ್‌ವೇ ಕಂಪೆನಿ ಜತೆ ಆಳ್ವಾಸ್ ಪ್ರತಿಷ್ಠಾನದಿಂದ ಶೈಕ್ಷಣಿಕ ಒಡಂಬಡಿಕೆ





ಆಳ್ವಾಸ್ ಕಾಲೇಜಿನ ಸ್ನಾತಕೋತ್ತರ ವಿಭಾಗದ ಆಹಾರ ವಿಜ್ಞಾನ ಮತ್ತು ಪೋಷಣಾ ವಿಭಾಗವು ಆಮ್‌ ವೇ ಗ್ಲೋಬಲ್ ಸರ್ವೀಸ್ ಇಂಡಿಯಾದ ಜೊತೆ ಶೈಕ್ಷಣಿಕ ಒಡಂಬಡಿಕೆ ಮಾಡಿಕೊಂಡಿದೆ.



ಆಮ್‌ವೇ ಕಂಪೆನಿಯ ವಿವಿಧ ಸಂಶೋಧನಾ ಕ್ರಮಗಳನ್ನು ಬೆಂಬಲಿಸಲು ಹಾಗೂ ಪೌಷ್ಟಿಕಾಂಶ, ಆರೋಗ್ಯ ಮತ್ತು ಕ್ಷೇಮಾಭಿವೃದ್ಧಿಯ ವೈಜ್ಞಾನಿಕ ಸಂಶೋಧನೆ ಕುರಿತು ವಿಶ್ವಾಸ ಹೆಚ್ಚಿಸುವ ಉದ್ದೇಶವಾಗಿದೆ.


ಆಮ್‌ವೇ ಕಂಪನಿಯ ನಿರ್ದೇಶಕ ಡಾ. ಶ್ಯಾಮ ರಾಮಕೃಷ್ಣನ್ ಹಾಗೂ ಹಿರಿಯ ವ್ಯವಸ್ಥಾಪಕ ಡಾ. ಪಳನಿಯಮ್ಮನ್ ದೊರೈರಾಜ್ ಮತ್ತು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವ್ಯವಸ್ಥಾಪಕ ಟ್ರಸ್ಟಿ ವಿವೇಕ್ ಆಳ್ವ, ಪ್ರಾಂಶುಪಾಲ ಡಾ. ಕುರಿಯನ್ ಹಾಗೂ ವಿಭಾಗದ ಮುಖ್ಯಸ್ಥೆ ಡಾ. ಅರ್ಚನ ಪ್ರಭಾತ್ ಇದ್ದರು.


BREAKING NEWS
Loading latest news...
Join our WhatsApp Channel Powered By : Online Pudu