ವಿಶ್ವ ವಿ.ವಿ. ಕ್ರೀಡಾಕೂಟಕ್ಕೆ ಆಳ್ವಾಸ್‌ನಿಂದ ಎಂಟು ಮಂದಿ ಆಯ್ಕೆ

ವಿಶ್ವ ವಿ.ವಿ. ಕ್ರೀಡಾಕೂಟಕ್ಕೆ ಆಳ್ವಾಸ್‌ನಿಂದ ಎಂಟು ಮಂದಿ ಆಯ್ಕೆ






ಚೀನಾದ ಚೆಂಗ್ಡುವಿನಲ್ಲಿ ಜುಲೈ 28ರಿಂದ ಆಗಸ್ಟ್ 8ರ ವರೆಗೆ ನಡೆಯಲಿರುವ ಪ್ರತಿಷ್ಠಿತ ಜಾಗತಿಕ ವಿಶ್ವವಿದ್ಯಾನಿಲಯ ಕ್ರೀಡಾಕೂಟದಲ್ಲಿ ಮೂಡಬಿದಿರೆ ಆಳ್ವಾಸ್‌ನ ಎಂಟು ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ.



ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ಅವರು ಈ ವಿಷಯ ತಿಳಿಸಿದ್ದು, ಆಯ್ಕೆ ಬಗ್ಗೆ ಸಂತಸ ವ್ಯಕ್ತಪಡಿಸಿದರು.



ಪುರುಷರ 400 ಮೀಟರ್ ಓಟ, 4x400 ಮೀಟರ್ ರಿಲೇಯಲ್ಲಿ ತೀರ್ಥೇಶ್ ಶೆಟ್ಟಿ, 20 ಕಿ.ಮೀ. ನಡಿಗೆಯಲ್ಲಿ ಹರದೀಪ್, ಡೆಕಥ್ಲಾನ್‌ನಲ್ಲಿ ಸ್ಟಾಲಿನ್ ಜೋಸ್, ಮಹಿಳೆಯರ ಐದು ಸಾವಿರ ಮತ್ತು 10 ಸಾವಿರ ಮೀಟರ್ ಓಟದಲ್ಲಿ ಪೂನಮ್ ದಿಂಕೆ ಸೋನುನೆ ವಿಶ್ವ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ಧಾರೆ.



ಅದೇ ರೀತಿ, 10 ಸಾವಿರ ಮೀಟರ್‌ ಓಟದಲ್ಲಿ ಬಸಂತಿ ಕುಮಾರಿ, ಹಾಫ್ ಮ್ಯಾರಥಾನ್‌ನಲ್ಲಿ ನಿರ್ಮಾ ಠಾಕೂರ್, ಹೈಜಂಪ್‌ನಲ್ಲಿ ಸಿಂಚನಾ ಎಂ.ಎಸ್., ಲಾಂಗ್ ಜಂಪ್ ಮತ್ತು 4x400 ಮೀಟರ್ ರಿಲೇಯಲ್ಲಿ ಭವಾನಿ ಯಾದವ್ ಭಾಗವತಿ ಪಾಲ್ಗೊಳ್ಳಲಿದ್ದಾರೆ.



ಈ ಎಲ್ಲ ಕ್ರೀಡಾಳುಗಳು ಮಂಗಳೂರು ವಿವಿಯನ್ನು ಪ್ರತಿನಿಧಿಸಿ ಭುವನೇಶ್ವರದ ಕಳಿಂಗ್ ಇನ್ಸ್‌ಟಿಟ್ಯೂಟ್ ಆಫ್ ಇಂಡಸ್ಟ್ರಿಯಲ್ ಟೆಕ್ನಾಲಜಿ ಆವರಣದಲ್ಲಿ ನಡೆದ ಆಯ್ಕೆ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದರು ಎಂದು ಡಾ. ಮೋಹನ್ ಆಳ್ವ ತಿಳಿಸಿದರು.



ಜಾಗತಿಕ ವಿವಿ ಕ್ರೀಡಾಕೂಟದಲ್ಲಿ ಇದುವರೆಗೆ 13 ಕ್ರೀಡಾಪಟುಗಳು ಭಾಗವಹಿಸಿದ್ದರು ಎಂಬುದನ್ನು ಆಳ್ವ ವಿವರಿಸಿದರು.

.

BREAKING NEWS
Loading latest news...
Join our WhatsApp Channel Powered By : Online Pudu