-->
1000938341
ಹೊಟ್ಟೆನೋವೆಂದು ಆಸ್ಪತ್ರೆಗೆ ಹೋದ ಬಾಲಕಿ ಗರ್ಭಿಣಿ ಎಂಬ ಶಾಕಿಂಗ್ ನ್ಯೂಸ್ ಹೇಳಿದ್ದ ವೈದ್ಯರು: 43ರ ಪೊಲೀಸ್ ಅಧಿಕಾರಿ ಅರೆಸ್ಟ್

ಹೊಟ್ಟೆನೋವೆಂದು ಆಸ್ಪತ್ರೆಗೆ ಹೋದ ಬಾಲಕಿ ಗರ್ಭಿಣಿ ಎಂಬ ಶಾಕಿಂಗ್ ನ್ಯೂಸ್ ಹೇಳಿದ್ದ ವೈದ್ಯರು: 43ರ ಪೊಲೀಸ್ ಅಧಿಕಾರಿ ಅರೆಸ್ಟ್

ಕೊಚ್ಚಿ: ಹೊಟ್ಟೆನೋವು ಎಂದು ಆಸ್ಪತ್ರೆಗೆ ಹೋಗಿದ್ದ ಬಾಲಕಿಯೊಬ್ಬಳು ಗರ್ಭಿಣಿಯಾಗಿದ್ದಾಗಿ ವೈದ್ಯರು ಹೇಳಿದ್ದಾರೆ. ಆ ತಕ್ಷಣವೇ ಪೊಲೀಸ್ ಅಧಿಕಾರಿಯೊಬ್ಬನು ಬಂಧನಕ್ಕೊಳಗಾದ ಘಟನೆ ಕೇರಳದ ವೆಲ್ಲರಾಡದಲ್ಲಿ ನಡೆದಿದೆ.

ಮರಯೂರ್ ಠಾಣಾ ಸಿಪಿಒ ದಿಲೀಪ್ (43) ಬಂಧಿತ ಆರೋಪಿ. ಈ ಕಾಮುಕನನ್ನು ಅರ್ಯಾಂಕೋಡ್ ಠಾಣಾ ಪೊಲೀಸರು ಬಂಧಿಸಿದ್ದಾರೆ.

ಆರೋಪಿ ದಿಲೀಪ್, ಸಂತ್ರಸ್ತ ಬಾಲಕಿಗೆ ದೂರದ ಸಂಬಂಧಿಯಾಗಬೇಕು. 9ನೇ ತರಗತಿ ವ್ಯಾಸಂಗ ಮಾಡುತ್ತಿರುವ ಸಂತ್ರಸ್ತ ಬಾಲಕಿ ಕಳೆದ ಕೆಲವು ದಿನಗಳಿಂದ ಹೊಟ್ಟೆನೋವು ಅನುಭವಿಸುತ್ತಿದ್ದಳು. ಇತ್ತೀಚೆಗೆ ಆಕೆಗೆ ಹೋಟೆನೋವು ಸಹಿಸಿಕೊಳ್ಳಲಾಗದಷ್ಟು ಹೆಚ್ಚಾಗಿದ್ದರಿಂದ ಪಾಲಕರು ಬಾಲಕಿಯನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ಬಾಲಕಿಗೆ ಸ್ಕ್ಯಾನ್ ಮಾಡಿ, ವರದಿಯನ್ನು ನೋಡಿದ ವೈದ್ಯರೇ ಶಾಕ್ ಗೊಳಗಾಗಿದ್ದಾರೆ.

ಸ್ಕ್ಯಾನಿಂಗ್ ವರದಿಯಲ್ಲಿ ಬಾಲಕಿ ಗರ್ಭಿಣಿ ಎಂಬ  ಬಯಲಾಗಿದೆ. ಇದನ್ನು ಕೇಳಿ ಬಾಲಕಿಯ ಪಾಲಕರು ಆಘಾತಕ್ಕೊಳಗಾಗಿದ್ದಾರೆ. ಬಳಿಕ ವಿಚಾರಿಸಿದಾಗ ಪೊಲೀಸ್ ಅಧಿಕಾರಿಯ ಕಾಮಪುರಾಣವನ್ನು ಬಾಲಕಿ ಬಿಚ್ಚಿಟ್ಟಿದ್ದಾಳೆ. ಪೊಕ್ಸೊ ಕಾಯ್ದೆಡಿಯಲ್ಲಿ ಪ್ರಕರಣ ದಾಖಲಿಸಿ ಆರೋಪಿಯನ್ನು ಬಂಧಿಸಲಾಗಿದೆ. 
Ads on article

Advertise in articles 1

advertising articles 2

Advertise under the article