-->
ಮಂಗಳೂರು: ಇನ್ನುಮುಂದೆ ವಾಟ್ಸ್ಆ್ಯಪ್ ಸಂದೇಶವನ್ನು ತಿದ್ದುಪಡಿ ಮಾಡಲು ಇದೆ ಅವಕಾಶ

ಮಂಗಳೂರು: ಇನ್ನುಮುಂದೆ ವಾಟ್ಸ್ಆ್ಯಪ್ ಸಂದೇಶವನ್ನು ತಿದ್ದುಪಡಿ ಮಾಡಲು ಇದೆ ಅವಕಾಶ


ನವದೆಹಲಿ: ವಾಟ್ಸ್‌ಆ್ಯಪ್‌ ಮೂಲಕ ರವಾನೆ ಮಾಡಿರುವ ಸಂದೇಶವನ್ನು ಏನಾದರೂ ತಿದ್ದುಪಡಿ ಮಾಡಬೇಕೆಂದಾದಲ್ಲಿ ಮೆಸೇಜ್‌ ಡೆಲಿವರಿಯಾದ 15 ನಿಮಿಷಗಳ ಕಾಲ ಅಂಥ ತಿದ್ದುಪಡಿ ಮಾಡಲು ಇನ್ನು ಮುಂದೆ ಅವಕಾಶವಿರಲಿದೆ.

ಈವಹೊಸ ಫೀಚರ್‌ ಅನ್ನು ವಾಟ್ಸ್‌ಆ್ಯಪ್‌ ಪರಿಚಯಿಸಿದೆ. ಕಳೆದ ವಾರವಷ್ಟೇ ಈ ಫೀಚರ್‌ ಅನ್ನು ಸಂಸ್ಥೆಯು ಆ್ಯಂಡ್ರಾಯ್ಡ್ ಹಾಗೂ ಐಒಎಸ್‌ ಆ್ಯಪ್‌ನ ಆವೃತ್ತಿಯಲ್ಲಿ ಪರೀಕ್ಷೆ ನಡೆಸಿತ್ತು. ಇದೀಗ ಜಗತ್ತಿನಾದ್ಯಂತ ಬಳಕೆದಾರರಿಗೆ ಈ ಸೌಲಭ್ಯವನ್ನು ವಿಸ್ತರಿಸಲಾಗಿದೆ. ಈವರೆಗೆ ವಾಟ್ಸ್‌ಆ್ಯಪ್‌ನಲ್ಲಿ ನೀವು ಕಳುಹಿಸಿದ ಸಂದೇಶವನ್ನು ಡಿಲೀಟ್‌ ಮಾಡುವ ಅವಕಾಶವನ್ನು ಮಾತ್ರ ಕಲ್ಪಿಸಲಾಗಿತ್ತು. ಇನ್ನು ಮುಂದೆ, ಒಮ್ಮೆ ಕಳುಹಿಸಿದ ಸಂದೇಶವನ್ನು ತಿದ್ದುಪಡಿ ಮಾಡುವ ಅವಕಾಶವನ್ನು ಕಲ್ಪಿಸಲಾಗಿದೆ. ಇದರಿಂದಾಗಿ, ಇಡೀ ಸಂದೇಶವನ್ನು ಮತ್ತೆ ಟೈಪ್‌ ಮಾಡುವ ಸಮಯ ಉಳಿತಾಯವಾಗಲಿದೆ.

ಸಂದೇಶ ರವಾನೆಯಾದ ಕೇವಲ 15 ನಿಮಿಷಗಳ ಕಾಲ ಮಾತ್ರ ಎಡಿಟ್‌ ಮಾಡಲು ಅವಕಾಶವಿರುತ್ತದೆ. ನಿಮಗೆ ಯಾವ ಸಂದೇಶವನ್ನು ತಿದ್ದುಪಡಿ ಮಾಡಬೇಕೋ ಅದನ್ನು “ಲಾಂಗ್‌ ಪ್ರಸ್‌’ ಮಾಡಿ, ಒತ್ತಿ ಹಿಡಿಯಬೇಕು. ಬಳಿಕ, ಮೆನುವಿಗೆ ಹೋಗಿ, “ಎಡಿಟ್‌’ ಆಯ್ಕೆಯನ್ನು ಕ್ಲಿಕ್‌ ಮಾಡಿ, ಸಂದೇಶದಲ್ಲಿ ಬದಲಾವಣೆ ಮಾಡಬಹುದು.
ಎಡಿಟ್‌ ಮಾಡಲಾದ ಸಂದೇಶದಲ್ಲಿ “ಎಡಿಟೆಡ್‌'(ತಿದ್ದುಪಡಿ ಮಾಡಲಾಗಿದೆ) ಎಂಬ ಟ್ಯಾಗ್‌ ಕಂಡು ಬರುತ್ತದೆ. ಅಂದರೆ, ಸಂದೇಶ ಸ್ವೀಕರಿಸುವವನಿಗೆ ಈ ಸಂದೇಶ ತಿದ್ದುಪಡಿಯಾಗಿದ್ದು ಎಂಬುದು ಗೊತ್ತಾಗುತ್ತದೆ. ಆದರೆ, ತಿದ್ದುಪಡಿಗೂ ಮುಂಚೆ ಏನಿತ್ತು ಎಂಬುದು ಮಾತ್ರ ಗೊತ್ತಾಗುವುದಿಲ್ಲ.

Ads on article

Advertise in articles 1

advertising articles 2

ಉಚಿತವಾಗಿ ಸುದ್ದಿ ಕೊಡುತ್ತಿರುವ ನಮಗೆ ಸಹಾಯ ಮಾಡಿ

  

Pay Rs 100

  

Advertise under the article