-->
 ಉಳ್ಳಾಲ ( ಮಂಗಳೂರು) ದಲ್ಲಿ ತಾಂಟ್ರೆ ಬಾ ತಾಂಟ್ರೆ ಖ್ಯಾತಿಯ ರಿಯಾಜ್ ಫರಂಗಿಪೇಟೆ ಪಡೆದ ಮತ ನೋಡಿ...

ಉಳ್ಳಾಲ ( ಮಂಗಳೂರು) ದಲ್ಲಿ ತಾಂಟ್ರೆ ಬಾ ತಾಂಟ್ರೆ ಖ್ಯಾತಿಯ ರಿಯಾಜ್ ಫರಂಗಿಪೇಟೆ ಪಡೆದ ಮತ ನೋಡಿ...


ಮಂಗಳೂರು: ಮಂಗಳೂರು (ಉಳ್ಳಾಲ) ಕ್ಷೇತ್ರದಲ್ಲಿ ಐದನೇ ಬಾರಿಗೆ ಯು ಟಿ ಖಾದರ್ ಕಾಂಗ್ರೆಸ್ ನಿಂದ ವಿಜಯವಾಗಿದ್ದಾರೆ. ಈ ಕ್ಷೇತ್ರದಲ್ಲಿ ಯು ಟಿ ಖಾದರ್ ಗೆಲ್ಲುವುದು ಖಚಿತವಾಗಿದ್ದರೂ ಹೆಚ್ಚಿನವರಿಗೆ ಆಸಕ್ತಿಯಿರುವುದು ಎಸ್ ಡಿ ಪಿ ಐ ನ ಮತಗಳ ಮೇಲೆ..
ಮಂಗಳೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಮತಗಳು ಪ್ರಬಲವಾಗಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾಂಗ್ರೆಸ್ ಗೆದ್ದ ಏಕೈಕ ಕ್ಷೇತ್ರ ಮಂಗಳುರು. ಈ ಕ್ಷೇತ್ರದ ಮೇಲೆ ಎಸ್ ಡಿ ಪಿ ಐ ನ ಕಣ್ಣು ಇದೆ. ಮುಸ್ಲಿಂ ಸಮುದಾಯ ಅತ್ಯಧಿಕವಾಗಿರುವ ಮಂಗಳೂರು ಕ್ಷೇತ್ರದಲ್ಲಿ ಎಸ್ ಡಿ ಪಿ ಐ ಸಮುದಾಯದ ಹೆಸರಿನಲ್ಲಿ ರಾಜಕೀಯ ಮಾಡುತ್ತಿದೆ.

ಈ ಕ್ಷೇತ್ರದಲ್ಲಿ ನಗರಸಭೆಯಲ್ಲಿ, ಗ್ರಾಮ ಪಂಚಾಯತ್ ಗಳಲ್ಲಿ ಎಸ್ ಡಿ ಪಿ ಐ ನ ಸದಸ್ಯರುಗಳು ಇದ್ದಾರೆ. ಎಸ್ ಡಿ ಪಿ ಐ ಮಂಗಳೂರು ಕ್ಷೇತ್ರದಲ್ಲಿ ಸಂಘಟನೆಯನ್ನು ಬಲಗೊಳಿಸುತ್ತಿದೆ. ಈ ಕ್ಷೇತ್ರದಲ್ಲಿ ಈ ಬಾರಿ ಎಸ್ ಡಿ ಪಿ ಐ ನಿಂದ ರಿಯಾಜ್ ಫರಂಗಿಪೇಟೆ ಸ್ಪರ್ಧಿಸಿದ್ದರು.


ರಿಯಾಜ್ ಫರಂಗಿಪೆಟೆ ತಾಂಟ್ರೆ ಬಾ ತಾಂಟ್ರೆ ಎಂಬ ಹೇಳಿಕೆ ನೀಡಿ ಖ್ಯಾತವಾಗಿದ್ದರು. ಎಸ್ ಡಿ ಪಿ ಐ ನ ನಾಯಕರಾಗಿರುವ ರಿಯಾಜ್ ಫರಂಗಿಪೇಟೆ ಈ ಬಾರಿ ಖಾದರ್ ಎದುರು ಸ್ಪರ್ಧಿಸಿದ್ದರು.

ಆದರೆ ಮಂಗಳೂರು ಕ್ಷೇತ್ರದಲ್ಲಿ ಎಸ್ ಡಿ ಪಿ ಐ ಮೂರನೇ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿದೆ. ಎಸ್ ಡಿ ಪಿ ಐ ಮತ ಗಳಿಕೆಯು ಹೆಚ್ಚು ಮಾಡಿದೆ ಎಂಬುದು ಗಮನಾರ್ಹ ಅಂಶ.


ಈ ಕ್ಷೇತ್ರದಲ್ಲಿ ರಿಯಾಜ್ ಫರಂಗಿಪೇಟೆ 15054 ಮತಗಳನ್ನು ಪಡೆದಿದ್ದಾರೆ. 9.41 ಶೇಕಡ ಮತವನ್ನು ಪಡೆದಿದ್ದಾರೆ.

ಮಂಗಳೂರು ಕ್ಷೇತ್ರದಲ್ಲಿ ಅಭ್ಯರ್ಥಿಗಳು ಪಡೆದ ಮತವನ್ನು ನೋಡಿ


 
Ads on article

Advertise in articles 1

advertising articles 2

ಉಚಿತವಾಗಿ ಸುದ್ದಿ ಕೊಡುತ್ತಿರುವ ನಮಗೆ ಸಹಾಯ ಮಾಡಿ

  

Pay Rs 100

  

Advertise under the article