ಮೇ 26 ರಂದು " ಪಿರ್ಕಿಲು" ತುಳು ಸಿನಿಮಾ ತೆರೆಗೆ


ಮಂಗಳೂರು: "ಕರಾವಳಿ ಸಿನಿಮಾಸ್ ಲಾಂಛನದಲ್ಲಿ ಸತೀಶ್ ಪೆರ್ನೆ, ಶಿವಪುಸಾದ್ ಇಷ್ಟಾವು ನಿರ್ಮಾಣದಲ್ಲಿ ಹೆಚ್.ಡಿ ಆರ್ಯ ನಿರ್ದೇಶನದಲ್ಲಿ ತಯಾರಾದ ಪಿರ್ಕಿಲು ತುಳು ಸಿನಿಮಾ ಮೇ 26 ರಂದು ಕರಾವಳಿ ಜಿಲ್ಲೆಯಾದ್ಯಂತ ತೆರೆಕಾಣಲಿದೆ. 

ಮಂಗಳೂರಿನಲ್ಲಿ ರೂಪವಾಣಿ, ಬಿಗ್ ಸಿನಿಮಾಸ್, ಪಿವಿಆರ್, ಸಿನಿಪೊಲಿಸ್, ಉಡುಪಿಯಲ್ಲಿ ಕಲ್ಪನ ಮಣಿಪಾಲದಲ್ಲಿ ಭಾರತ್ ಸಿನಿಮಾ, ಐನಾಕ್ಸ್, ಪಡುಬಿದ್ರೆಯಲ್ಲಿ ಭಾರತ್ ಸಿನಿಮಾ, ಸುರತ್ಕಲ್ ನಲ್ಲಿ ನಟರಾಜ್ ಸಿನಿ ಗ್ಯಾಲಕ್ಸಿ, ಪುತ್ತೂರಿನಲ್ಲಿ ಭಾರತ್ ಸಿನಿಮಾ, ಮೂಡಬಿದ್ರೆಯಲ್ಲಿ ಅಮರಶ್ರೀ, ಕಾರ್ಕಳದಲ್ಲಿ ರಾಧಿಕಾ, ಪ್ಲಾನೆಟ್, ಸುಳ್ಯದಲ್ಲಿ ಸಂತೋಷ್, ಬೆಳ್ತಂಗಡಿಯಲ್ಲಿ ಭಾರತ್ ಸಿನಿಮಾ ಮೊದಲಾದ ಕಡೆಗಳಲ್ಲಿ ಸಿನಿಮಾ ತೆರೆ ಕಾಣಲಿದೆ.




ಪಿರ್ಕಿಲು ಸಿನಿಮಾಗೆ  ಸುಳ್ಯ, ಪುತ್ತೂರು,ಮಂಗಳೂರು, ಉಪ್ಪಿನಂಗಡಿಯಲ್ಲಿ 29 ದಿನಗಳ ಕಾಲ ಚಿತ್ರೀಕರಣ ನಡೆದಿದ್ದು, ಸಿನಿಮಾಕ್ಕೆ U/A ಸರ್ಟಿಫಿಕೇಟ್ ದೊರೆತಿದೆ. ಪಿರ್ಕಿಲು ಸಿನಿಮಾ ಹಾಸ್ಯ ಮತ್ತು ಕೌಟುಂಬಿಕ ಮನರಂಜನೆಯ ಚಿತ್ರ. ಎಲ್ಲಾ ವರ್ಗದ ಜನರು ಇಷ್ಟ ಪಡುವ ಕತೆಯನ್ನು ಹಾಸ್ಯಭರಿತವಾಗಿ ನಿರ್ದೇಶಕರು ಹೆಣೆದಿದ್ದಾರೆ. ನಿರ್ದೇಶಕ ಹೆಚ್.ಡಿ ಆರ್ಯ ಕಥೆ, ಚಿತ್ರಕಥೆ, ಸಂಭಾಷಣೆ ಬರೆದಿದ್ದಾರೆ. ಬಬಿತ ತುಳು ಸಂಭಾಷಣೆ ತರ್ಜಿಮೆಯನ್ನು ಮಾಡಿದ್ದಾರೆ.

ತಾರಾ ಬಳಗದಲ್ಲಿ ಖ್ಯಾತ ನಾಮರಾದ ತುಳುನಾಡ ಮಾಣಿಕ್ಯ ಅರವಿಂದ ಬೋಳಾರ್, ನವರಸ ರಾಜ ಬೊಜರಾಜ ವಾಮಂಜೂರು,  ದೀಪಕ್ ರೈ, ಪಾಣಜೆ, ರವಿ ರಾಮಕುಂಜ ಪುಮುಖ ಪಾತ್ರದಲ್ಲಿದ್ದಾರೆ. ನಾಯಕ ನಟರಾಗಿ ವರ್ಧನ್ ಮತ್ತು ಸುದೇಶ್, ನಾಯಕಿಯಾಗಿ ಸಲೋಮಿ ಡಿ.ಸೋಜ, ಲತಾ ಅಭಿನಯಿಸಿದ್ದಾರೆ. ಇನ್ನುಳಿದಂತೆ ಸುಮಿತ್ರ ಡ್ರೈ, ಅಮಿತ, ನವೀನ್ ಬೊಂದೇಲ್, ಅರ್ಪಣ್, ಅನಿಲ್ ರೈ, ರಂಜಿತ್ ರ, ತಿಮ್ಮಪ್ಪ, ಕುಲಾಲ್, ಪುಭಾಕರ ಶೆಟ್ಟಿ, ಮೊಹನ್, ಸೊನಿ ಮೊದಲಾದವರಿದ್ದಾರೆ.

ತಂತ್ರಜರು

ವಸ್ತ್ರಾಲಂಕಾರ ಲತಾ

ನಿರ್ದೇಶನ ತಂಡ -ದೀಪು, ಆರಾಧ್ಯ ಛಾಯಾಗ್ರಹಣ ಸಹಾಯ - ಕೀರ್ತಿ

ಮೇಕಪ್ ದಿಶಾ, ದಿಲೀಪ್

ಸಂಕಲನ - ಎ. ಆರ್ ಕೃಷ್ಣ, ಅಭಿಷೇಕ್ ರಾವ್‌

ಸಂಗೀತ - ವಿ ಮನೋಹರ

ಸಾಹಿತ್ಯ - ವಿ ಮನೋಹರ, ಶ್ರೀಧರ್ ಕರ್ಕೇರ

ಛಾಯಾಗ್ರಹಣ - ಎ. ಆರ್ ಕೃಷ್ಣ

ನಿರ್ಮಾಪಕರು - ಸತೀಶ್ ಪೆರ್ನೆ, ಶಿವಪ್ರಸಾದ್ ಇಜಾವು ತುಳು ಸಂಭಾಷಣೆ ಸಹಾಯ ಮತ್ತು ತರ್ಜಿಮೆ - ಬಬಿತ

ಕಥೆ ಚಿತ್ರಕಥೆ, ಸಂಭಾಷಣೆ, ನಿರ್ದೇಶನ - ಹೆಚ್.ಡಿ ಆರ್ಯ

ಕಥೆಯ ಸಾರಾಂಶ

ಅಂದ ಚಂದದ ಹಾಸ್ಯ ಮತ್ತು ಕೌಟುಂಬಿಕ ಕಥಾ ಹಂತರವಿರುವ ಚಿತ್ರ ಪಿರ್ಕಿಲು . ಪಿರ್ಕಿಲು ಎಂದು ಊರಿನ ಜನರಿಂದ ಕರೆಸಿಕೊಳ್ಳುವ ಹುಡುಗರು ಏನೆಲ್ಲ ಅವಾಂತರಗಳನ್ನು ಸೃಷ್ಟಿ ಮಾಡುತ್ತಾರೆ. ಎಂಬುದನ್ನು ಹಾಸ್ಯಭರಿತವಾಗಿ ಸಂದೇಶ ಸಾರುವುದೇ ಚಿತ್ರದ ಒನ್ ಲೈನ್ ಸ್ಟೋರಿ........
BREAKING NEWS
Loading latest news...
Join our WhatsApp Channel Powered By : Online Pudu