ತುಂಡುಡುಗೆ ತೊಟ್ಟು ಯುವತಿಯ ಮೆಟ್ರೋ ಪ್ರಯಾಣ: ಇದು ಉರ್ಫಿ ಜಾವೇದ್ ಪ್ರಭಾವ ಎಂದ ನೆಟ್ಟಿಗರು


ನವದೆಹಲಿ: ಸಾರ್ವಜನಿಕ ಸ್ಥಳಗಳಲ್ಲಿ ಯಾವ ರೀತಿ ಇರಬೇಕು, ವರ್ತಿಸಬೇಕೆಂಬ ಕನಿಷ್ಠ ಜ್ಞಾನ ಎಲ್ಲರಿಗೂ ಇರಬೇಕು. ಇಲ್ಲದೆ ಹೋದಲ್ಲಿ ಸಾರ್ವಜನಿಕ ಟೀಕೆಗೆ ಗುರಿಯಾಗಬೇಕಾಗುತ್ತದೆ. ಅದರಲ್ಲೂ ಜನಸಂಚಾರ ಹೆಚ್ಚಿರುವ ಸ್ಥಳಗಳಲ್ಲಿ, ಮೆಟ್ರೋ ರೈಲಿನಲ್ಲಿ ಸಭ್ಯತೆಯಿಂದ ವರ್ತಿಸುವುದು ಪ್ರತಿಯೊಬ್ಬ ಪ್ರಯಾಣಿಕರ ಕರ್ತವ್ಯ. ಕಾರಣ ಯಾರಿಗೂ ಮುಜುಗರ ಆಗಬಾರದೆಂಬ ಉದ್ದೇಶ ಇದರ ಹಿಂದೆ ಇರುತ್ತದೆ.

ಇದೀಗ ಯುವತಿಯೊಬ್ಬಳು ಅಶ್ಲೀಲ ರೀತಿಯಲ್ಲಿ ದೆಹಲಿಯ ಮೆಟ್ರೋ ರೈಲಿನಲ್ಲಿ ಪ್ರಯಾಣಿಸಿದ್ದಾಳೆ. ಯುವತಿ ಮಿನಿ ಸ್ಕರ್ಟ್ ಧರಿಸಿ ಪ್ರಯಾಣಿಸುತ್ತಿರುವುದನ್ನು ಸಹ ಪ್ರಯಾಣಿಕರು ವೀಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ವಿಡಿಯೋ ವೈರಲ್ ಆಗುತ್ತಿದ್ದಂತೆ ಸಾಕಷ್ಟು ಟೀಕೆಗಳು ವ್ಯಕ್ತವಾಗಿದೆ.

ಟ್ವಿಟರ್ ಬಳಕೆದಾರರು ಕೆಲವರು ಕಮೆಂಟ್ ಮಾಡುತ್ತಾ, ಇದು ದೆಹಲಿ ಮೆಟ್ರೋದಲ್ಲಾ ಎಂದು ಆಶ್ಚರ್ಯ ಪಟ್ಟಿದ್ದಾರೆ. ಚಿತ್ರ ವಿಚಿತ್ರ ಶೈಲಿಯ ಉಡುಗೆ ತೊಟ್ಟು ಸದಾ ಸುದ್ದಿಯಲ್ಲಿರುವ ಉರ್ಫಿ ಜಾವೇದ್ ಪ್ರಭಾವಕ್ಕೆ ಈಕೆ ಒಳಗಾಗಿದ್ದಾಳೆ ಎಂದು ಅನೇಕರು ಕಮೆಂಟ್ ಮಾಡಿದ್ದಾರೆ.
BREAKING NEWS
Loading latest news...
Join our WhatsApp Channel Powered By : Online Pudu