-->
ಸ್ಲಮ್ ಬಾಲಕಿ ಈಗ ಮಾಡೆಲ್: ಪಿಕಾಕ್ ಮ್ಯಾಗಜಿನ್ ಮುಖಪುಟದಲ್ಲಿ ಮಲೀಶಾ ಫೋಟೋ

ಸ್ಲಮ್ ಬಾಲಕಿ ಈಗ ಮಾಡೆಲ್: ಪಿಕಾಕ್ ಮ್ಯಾಗಜಿನ್ ಮುಖಪುಟದಲ್ಲಿ ಮಲೀಶಾ ಫೋಟೋ


ಮುಂಬೈ: ಅದೃಷ್ಟವೊಂದಿದ್ದರೆ ಜೀವನದಲ್ಲಿ 
ಎಂಥಹ ಸಾಧನೆಯನ್ನು ಮಾಡಬಹುದು. ಅದಕ್ಕೆ ಹಿರಿಯರು 'ಎಲ್ಲದಕ್ಕೂ ಅದೃಷ್ಟ ಬೇಕು ಕಣ್ರೀ' ಎಂಬ ಮಾತು ಆಡುತ್ತಿರುತ್ತಾರೆ. ಇದೀಗ ಸ್ಲಮ್ ಹುಡುಗಿಯ ಬಾಳಿನಲ್ಲಿ ಅದೃಷ್ಟ ಅನ್ನೋದು ಚೆನ್ನಾಗಿ ತನ್ನ ಕಾರ್ಯ ಸಾಧಿಸಿದೆ. ಇದೀಗ ಈ ಸ್ಲಮ್ ಹುಡ್ಗಿ ಮಾಡೆಲ್ ಆಗಿದ್ದಾಳೆ.

ಮುಂಬೈಯ ಸ್ಲಮ್ ಒಂದರಲ್ಲಿ ವಾಸಿಸುತ್ತಿದ್ದ ಮಲೀಶಾ ಕರ್ವ ಎಂಬ 14ರ ಬಾಲಕಿಯ ರೋಚಕ ಸ್ಟೋರಿ ಇದು. ಇರಲು ಸರಿಯಾದ ಮನೆಯೂ ಇಲ್ಲದೇ, ಮೂರು ಹೊತ್ತಿನ ಊಟಕ್ಕೂ ಪರದಾಡುವ ಕಡು ಬಡತನದ ಕುಟುಂಬ ಇವಳದ್ದು. ಆದರೆ ನೋಡಲು ಕ್ಯೂಟ್ ಹಾಗೂ ಟ್ಯಾಲೆಂಟೆಡ್ ಆಗಿದ್ದ ಆಕೆಯ ಲಕ್ ಬದಾಯಿಸಿದ್ದು ಹಾಲಿವುಡ್ ನಟ ರಾಬರ್ಟ್ ಹಾಕ್ಮಾನ್.

ಐಶ್ವರ್ಯಾ, ಕತ್ರಿನಾ ಮುಖಪುಟವಿದ್ದಂತಹ ಭಾರತದ ಪ್ರತಿಷ್ಠಿತ ಪಿಕಾಕ್ ಮ್ಯಾಗಜಿನ್ ನ ಕವರ್ ಪೇಜ್ ಗೆ ಈ ಪುಟ್ಟ ಬಾಲಕಿ ಮಲೀಶಾ ಮಾಡೆಲ್ ಆಗಿ ಫೋಸ್ ಕೊಟ್ಟಿದ್ದಾಳೆ. ಇದೆಲ್ಲ ಸಾಧ್ಯವಾಗಿದ್ದು ಹಾಕ್ಮಾನ್ ನಿಂದ. ಬಾಲಿವುಡ್ ಸಿನಿಮಾ ಒಂದರ ಡಾನ್ಸ್ ಗೆ ಡಾನ್ಸರ್ ಹುಡುಕಾಟದಲ್ಲಿ ಇದ್ದಾಗ ಈ ಬಾಲಕಿ ಸಿನಿಮಾ ತಂಡದ ಕಣ್ಣಿಗೆಬಿದ್ದಿದ್ದಳು. ಆದರೆ ಅಂದು ಆಕೆಗೆ ಅವಕಾಶ ದೊರಕಿರಲಿಲ್ಲ. ಅದರೆ ಈ ಪುಟ್ಟ ಹುಡುಗಿ ಹಾಕ್ಮನ್ ಗೆ ಹಿಂದಿ ಹೇಳಿಕೊಡುವ ವೀಡಿಯೋ ಸಾಕಷ್ಟು ವೈರಲ್ ಆಗಿತ್ತು.

ಇದೇ ವೀಡಿಯೋ ಹುಡುಗಿಯ ಲಕ್ ಬದಲಾಯಿಸಿದೆ. ಗುಡಿಸಲಿನಲ್ಲಿ ವಾಸಿಸುತ್ತಿದ್ದ ಹುಡುಗಿಯ ಟ್ಯಾಲೆಂಟ್ ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಫಾಲೋವರ್ಸ್ ಸಂಖ್ಯೆ ಹೆಚ್ಚಳವಾಗಿದೆ. ಅಲ್ಲದೆ ಕವರ್ ಪೇಜ್ ಮಾಡೆಲ್ ಆಗಿ ಅವಕಾಶ ಗಿಟ್ಟಿಸಿಕೊಂಡಿದ್ದಾಳೆ. ಇದರಿಂದ ಈಕೆಯ ವಿದ್ಯಾಭ್ಯಾಸಕ್ಕೆ ದೇಣಿಗೆಯ ಮಹಾಪೂರವೇ ಹರಿದು ಬಂದಿದೆ. ಏನೇ ಆಗಲಿ ಈ ಪುಟ್ಟ ಹುಡುಗಿಯ ಈ ಟ್ಯಾಲೆಂಟ್ ಗೆ ನಾವು ಶಹಬ್ಬಾಸ್ ಹೇಳಲೇ ಬೇಕು.

Ads on article

Advertise in articles 1

advertising articles 2

ಉಚಿತವಾಗಿ ಸುದ್ದಿ ಕೊಡುತ್ತಿರುವ ನಮಗೆ ಸಹಾಯ ಮಾಡಿ

  

Pay Rs 100

  

Advertise under the article