ಸುಳ್ಯದಲ್ಲಿ ಅಂಗಾರರಿಗೆ BJP ಟಿಕೆಟ್ ನೀಡಿ- ಮುಗೇರ ಮುಖಂಡರ ಆಗ್ರಹ ( VIDEO)
Saturday, April 8, 2023
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪರಿಶಿಷ್ಟ ಜಾತಿ ಮುಗೇರ ಸಮುದಾಯ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಇರುವುದು ಎಲ್ಲರಿಗೂ ತಿಳಿದ ವಿಷಯ. ಆದುದರಿಂದ ಪ್ರತಿನಿಧಿಸುತ್ತಿರುವ ಮೀಸಲು ಸುಳ್ಯ ಕ್ಷೇತ್ರದ ಎಸ್ ಅಂಗಾರವರಿಗೆ ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡಬೇಕೆಂದು ಮುಗೇರ ಸಮುದಾಯದ ಮುಖಂಡ ಲೋಕೇಶ್ ಕೋಟ್ಯಾನ್ ಆಗ್ರಹಿಸಿದರು.
ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಯಾವುದೇ ಕಪ್ಪು ಚುಕ್ಕೆ ಇಲ್ಲದೆ ಯಾವುದೇ ಕಳಂಕ ರಹಿತ ರಾಜಕೀಯ ಮಾಡುತ್ತಿರುವ ಅಂಗಾರರಿಗೆ ಈ ಸಲದ ಸಾರ್ವತ್ರಿಕ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡಬೇಕಾಗಿ ಪಕ್ಷದ ರಾಜ್ಯ ಅಧ್ಯಕ್ಷರಿಗೆ, ಮುಖ್ಯಮಂತ್ರಿ ಅವರಿಗೆ ಹಾಗೂ ಜಿಲ್ಲಾಧ್ಯಕ್ಷರಿಗೂ ನಮ್ಮ ಮುಗೇರ ಸಮುದಾಯದ ಆಗ್ರಹ ವಿದೆ ಎಂದು ತಿಳಿಸಿದ್ದಾರೆ.
ರಾಜಕೀಯ ಜೀವನದಲ್ಲಿ ಯಾವುದೇ ಕಪ್ಪು ಚುಕ್ಕಿ ಇಲ್ಲದೆ ಭ್ರಷ್ಟಾಚಾರವಿಲ್ಲದೆ ತನ್ನ ಪಾಡಿಗೆ ತಾನಿದ್ದು ಕ್ಷೇತ್ರದ ಅಭಿವೃದ್ಧಿಯಲ್ಲಿ ಮುಂಚೇನೆ ಎಲ್ಲಾ ವರ್ಗದವರ ಪ್ರೀತಿಗೆ ಪಾತ್ರರಾಗಿರುವ ಸೋಲಿಲ್ಲದ ಸರದಾರ ಇವರು .ಸತತ ಆರು ಬಾರಿ ಸುಳ್ಯ ಕ್ಷೇತ್ರದಲ್ಲಿ ಸ್ಪರ್ಧಿಸಿ ಗೆದ್ದಿರುವುದು ಇತಿಹಾಸ . ಸಂಘ ಪರಿವಾರದ ನಿಷ್ಠಾವಂತ ಕಾರ್ಯಕರ್ತನಾಗಿ ಬಡ ಜನತೆಯ ಆಶಾಕಿರಣವಾಗಿ ಮುಗೇರ ಸಮುದಾಯದ ಪ್ರತಿನಿಧಿಯಾಗಿ ಇವರು ಸ್ಪರ್ಧಿಸುತ್ತಿರುವುದು ನಮ್ಮೆಲ್ಲರ ಹೆಮ್ಮೆ . ಆದ್ದರಿಂದ ಮುಂದಿನ ಚುನಾವಣೆಯಲ್ಲಿ ಇವರಿಗೆ ಯಾವುದೇ ಕಾರಣಕ್ಕೂ ಟಿಕೆಟ್ ಕೈತಪ್ಪದ ಹಾಗೆ ಪಕ್ಷದ ಹಿರಿಯರು ಗಮನಿಸಬೇಕಾಗಿ ವಿನಂತಿಸುತ್ತಿದ್ದೇವೆ ಎಂದು ತಿಳಿಸಿದ್ದಾರೆ .
ಸುಳ್ಯ ಕ್ಷೇತ್ರದ ಮತದಾರ ಬಾಂಧವರು ಬೆಂಬಲಿಸುವುದು ಊರಿನಲ್ಲಿ ಎದ್ದು ಕಾಣುತ್ತಿರುವ ವಿಚಾರ. ಆದುದರಿಂದ ಸುಳ್ಯ ಕ್ಷೇತ್ರದಲ್ಲಿ ಮುಗೇರ ಸಮುದಾಯದ ಅತಿ ಹೆಚ್ಚು ಅಂದರೆ 25,000 ಕ್ಕಿಂತಲೂ ಮತದಾರದಿದ್ದಾರೆ. ಈ ಸಮುದಾಯವನ್ನು ಪ್ರತಿನಿಧಿಸಿರುವ ಅಂಗರವರಿಗೆ ಅವಕಾಶ ನೀಡಬೇಕಾಗಿ ವಿನಂತಿಯನ್ನು ಮಾಡುತ್ತಿದ್ದೇವೆ .ಚುನಾವಣೆಯಲ್ಲಿ ನಿರ್ಣಾಯಕ ಮತದಾರರಾಗಿರುವ ಮುಗೇರ ಸಮುದಾಯದ ಪ್ರತಿನಿಧಿಗೆ ಅವಕಾಶ ನೀಡಲೇಬೇಕು. ಮುಂದಿನ ದಿನಗಳಲ್ಲಿ ಉಳಿದ ಎಂಟು ವಿಧಾನಸಭಾ ಕ್ಷೇತ್ರಗಳನ್ನು ಮುಗೇರ ಸಮುದಾಯದ ಮತ ನಿರ್ಣಾಯಕವಾಗಿರುತ್ತದೆ ಹಾಗೂ ದಕ್ಷಿಣ ಕನ್ನಡ ಜಿಲ್ಲೆ ಹಾಗೂ ಇತರ ಜಿಲ್ಲೆಗಳಲ್ಲಿ ಮುಗೇರ ಸಮುದಾಯದ ಬಹುಮತ ವಿರುವುದು ಮೇಲ್ನೋಟಕ್ಕೆ ಎದ್ದು ಕಾಣುತ್ತದೆ . ಆದ್ದರಿಂದ ಮುಂದಿನ ಸಾರ್ವತ್ರಿಕ ಚುನಾವಣೆಯಲ್ಲಿ ಎಸ್ ಅಂಗರರವರನ್ನು ಚುನಾವಣೆಗೆ ಸ್ಪರ್ಧಿಸುವಂತ ಅವಕಾಶ ನೀಡಬೇಕಾಗಿ ನಮ್ಮೆಲ್ಲರ ಅಗ್ರಹ ಎಂದವರು ತಿಳಿಸಿದರು.