ಈ ರಾಜ್ಯ ಸರಕಾರದಿಂದ ರಕ್ಷಾಬಂಧನದಂದು 40 ಲಕ್ಷ ಮಹಿಳೆಯರಿಗೆ ಮೂರು ವರ್ಷಗಳ ಉಚಿತ ನೆಟ್ ಪ್ಯಾಕ್ ನೊಂದಿಗೆ ಸ್ಮಾರ್ಟ್ ಫೋನ್
Saturday, April 29, 2023
ಜೈಪುರ: ರಾಜಸ್ತಾನ ಸರಕಾರವು ಈ ಬಾರಿ ರಕ್ಷಾ ಬಂಧನದಂದು 40 ಲಕ್ಷ ಮಹಿಳೆಯರಿಗೆ ಮೂರು ವರ್ಷಗಳ ಇಂಟರ್ನೆಟ್ ಪ್ಯಾಕ್‌ನೊಂದಿಗೆ ಉಚಿತ ಸ್ಮಾರ್ಟ್‌ಫೋನ್‌ಗಳನ್ನು ನೀಡಲಿದೆ ಎಂದು ಸಿಎಂ ಅಶೋಕ್ ಗೆಹ್ಲೋಟ್ ಘೋಷಿಸಿದ್ದಾರೆ.
ಚಿರಂಜೀವಿ ಯೋಜನೆಯ ಮೂಲಕ ನಮ್ಮ ಸರಕಾರ ಎಲ್ಲಾ ಮಹಿಳೆಯರನ್ನು ಕುಟುಂಬದ ಮುಖ್ಯಸ್ಥರನ್ನಾಗಿ ಮಾಡಿದ್ದೇವೆ. ನಮ್ಮ ಆಡಳಿತದಲ್ಲಿ 1.35 ಕೋಟಿ ಮಹಿಳೆಯರನ್ನು ಮನೆಯ ಮುಖ್ಯಸ್ಥರನ್ನಾಗಿ ಮಾಡಲಾಗಿದೆ. ಈ ಮಹಿಳೆಯರಿಗೆ ಮೂರು ವರ್ಷಗಳ ಉಚಿತ ಇಂಟರ್ನೆಟ್ ಜೊತೆಗೆ ಸ್ಮಾರ್ಟ್‌ಫೋನ್ ದೊರೆಯಲಿದೆ ಎಂದು ಗೆಹ್ಲೋಟ್ ಹೇಳಿದರು.
ರಾಜಸ್ತಾನದ ಸಿಎಂ ತಮ್ಮ 2022ರ ಬಜೆಟ್ ಭಾಷಣದಲ್ಲಿ ಚಿರಂಜೀವಿ ಕುಟುಂಬದ ಮಹಿಳಾ ಮುಖ್ಯಸ್ಥರಿಗೆ ಮೂರು ವರ್ಷಗಳವರೆಗೆ ಉಚಿತ ಇಂಟರ್ನೆಟ್ ಪ್ಯಾಕ್ ನೊಂದಿಗೆ ಸ್ಮಾರ್ಟ್ ಫೋನ್‌ಗಳನ್ನು ನೀಡಲಾಗುವುದು ಎಂದು ಘೋಷಿಸಿದ್ದಾರೆ. ಸಿಎಂ ಡಿಜಿಟಲ್ ಸೇವಾ ಯೋಜನೆಯಡಿ ಸುಮಾರು 1.35 ಕೋಟಿ ಮಹಿಳೆಯರಿಗೆ ಸ್ಮಾರ್ಟ್ ಫೋನ್ ನೀಡಬೇಕಿತ್ತು. ಆದರೆ, ಇಷ್ಟು ದೊಡ್ಡ ಸಂಖ್ಯೆಯ ಫೋನ್‌ಗಳನ್ನು ಸಮಯಕ್ಕೆ ಸರಿಯಾಗಿ ಖರೀದಿಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಈ ಯೋಜನೆಯನ್ನು ಜಾರಿಗೆ ತರಲು ಸಾಧ್ಯವಾಗಿಲ್ಲ. ಈ ವರ್ಷದ ಫೆಬ್ರವರಿಯಲ್ಲಿ, ಸ್ಮಾರ್ಟ್‌ಫೋನ್‌ಗಳನ್ನು ವಿತರಿಸಲು ಬಜೆಟ್ ಹಣ ಮೀಸಲು ಇರಿಸಲಾಗಿದೆ ಎಂದು ಸರ್ಕಾರ ವಿಧಾನಸಭೆಗೆ ತಿಳಿಸಿದೆ.