ಮಂಗಳೂರು: ಹಂಪ್ಸ್ ಜಂಪ್ ಆದ ಬಸ್: ಪ್ರಯಾಣಿಕನಿಗೆ ಗಂಭೀರ ಗಾಯ


ಮಂಗಳೂರು: ಹಂಪ್ಸ್ ನಲ್ಲಿ ವೇಗವಾಗಿ ಬಸ್‌ ಚಲಿಸಿದ ಪರಿಣಾಮ ಬಸ್ ಮೇಲಕ್ಕೆ ಜಂಪ್ ಆಗಿ ಬಸ್‌ ಪ್ರಯಾಣಿಕ ಪ್ರದೀಶ್‌ (50) ಎಂಬವರು ಗಂಭೀರವಾಗಿ ಗಾಯಗೊಂಡ ಘಟನೆ ವಾಮಂಜೂರು ಸಮೀಪ ಸಂಭವಿಸಿದೆ.

ಪ್ರದೀಶ್‌ ಶನಿವಾರ ಬಿ.ಸಿ.ರೋಡ್‌ ಕಡೆಗೆ ಹೋಗಲು ಮೂಡುಶೆಡ್ಡೆಯಿಂದ ಮಂಗಳೂರು ಕಡೆಗೆ ಹೋಗುವ ಬಸ್‌ನ ಕೊನೆಯ ಸೀಟಿನಲ್ಲಿ ಕುಳಿತಿದ್ದರು. ಬಸ್‌ ಬೆಳಗ್ಗೆ 9.15ಕ್ಕೆ ವಾಮಂಜೂರಿನ ಆರ್‌ಟಿಒ ಸ್ಟಾಪ್‌ ಬಳಿ ಬಂದಿದೆ. ಈ ವೇಳೆ ಚಾಲಕ ಬಸ್ ಅನ್ನು ಹಂಪ್ಸ್ ಮೇಲೆ ಹಾರಿಸಿಕೊಂಡು ಹೋಗಿದ್ದಾನೆ. ಪರಿಣಾಮ ಪ್ರದೀಶ್‌ ಬಸ್ಸಿನೊಳಗೆ ಬಿದ್ದು ಅವರಿಗೆ ಕಬ್ಬಿಣದ ರಾಡ್‌ ತಾಗಿದೆ. ಈ ಬಗ್ಗೆ ಮಂಗಳೂರು ಸಂಚಾರ ದಕ್ಷಿಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
BREAKING NEWS
Loading latest news...
Join our WhatsApp Channel Powered By : Online Pudu