-->
ಬಸ್ ನಿಲ್ದಾಣದಲ್ಲಿದ್ದ ಯುವತಿಗೆ ಕಪಾಳ ಮೋಕ್ಷ ಮಾಡಿ ಎಸ್ಕೇಪ್ ಆಗಲೆತ್ನಿಸಿದ ಯುವಕ: ಆ ಬಳಿಕ ನಡೆದದ್ದು ಮತ್ತೊಂದು ಎಡವಟ್ಟು

ಬಸ್ ನಿಲ್ದಾಣದಲ್ಲಿದ್ದ ಯುವತಿಗೆ ಕಪಾಳ ಮೋಕ್ಷ ಮಾಡಿ ಎಸ್ಕೇಪ್ ಆಗಲೆತ್ನಿಸಿದ ಯುವಕ: ಆ ಬಳಿಕ ನಡೆದದ್ದು ಮತ್ತೊಂದು ಎಡವಟ್ಟು


ತಿರುವನಂತಪುರಂ: ಯುವಕನೋರ್ವನು ಬಸ್ ನಿಲ್ದಾಣದಲ್ಲಿ ನಿಂತಿದ್ದ ಯುವತಿಗೆ ಕಪಾಳ ಮೋಕ್ಷ ಮಾಡಿ ಎಸ್ಕೆಪ್ ಆಗುವ ವೇಳೆ ಸರಣಿ ಅಪಘಾತ ಸಂಭವಿಸಿರುವ ಘಟನೆ ಸೋಮವಾರ ಸಂಜೆ ನೆಯ್ಯಟ್ಟಿಂಕರದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ನಡೆದಿದೆ.

ಯುವತಿಗೆ ಕಪಾಳಮೋಕ್ಷ ಮಾಡಿದ ಯುವಕನನ್ನು ಅನವೂ‌ ಮೂಲದ ಶಿನೋಜ್ ಎಂದು ಹೇಳಲಾಗಿದೆ. ಕಪಾಳಕ್ಕೆ ಬಾರಿಸಿ ಓಡಿ ಹೋಗುವಾಗ ಶಿನೋಜ್‌ನನ್ನು ನೋಡಿದ ಸ್ಥಳೀಯರು ಆತನನ್ನು ಹಿಡಿಯಲು ಪ್ರಯತ್ನಿಸಿದ್ದಾರೆ. ಈ ವೇಳೆ ಶಿನೋಜ್ ತನ್ನ ಸ್ನೇಹಿತನೊಂದಿಗೆ ಕಾರಿನಲ್ಲಿ ಎಸ್ಕೆಪ್ ಆಗುವ ಭರದಲ್ಲಿ ಸರಣಿ ಅಪಘಾತ ನಡೆದಿದೆ. ಎರಡು ಆಟೋ ಮತ್ತು ನಾಲ್ಕು ಬೈಕ್‌ಗಳಿಗೆ ಕಾರು ಡಿಕ್ಕಿ ಹೊಡೆದಿದೆ. ಪರಿಣಾಮ ಓರ್ವ ಬೈಕ್ ಸವಾರನಿಗೆ ಗಾಯವಾಗಿದೆ.

ಈ ಸರಣಿ ಅಪಘಾತದ ಬಳಿಕ ಕಾರು ರಸ್ತೆಯಲ್ಲಿ ಎದುರಿಗೆ ಸಿಕ್ಕ ಪೊಲೀಸ್ ಜೀಪಿಗೂ ಡಿಕ್ಕಿ ಹೊಡೆದಿದೆ. ಕಪಾಳಕ್ಕೆ ಹೊಡೆತ ತಿಂದ ಯುವತಿ ಶಿನೋಜ್‌ನ ಗರ್ಲ್‌ಫ್ರೆಂಡ್ ಎಂದು ಹೇಳಲಾಗಿದೆ. ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿರುವ ದೃಶ್ಯ ಬಸ್ ನಿಲ್ದಾಣದ ಸಿಸಿಟಿವಿ ಕ್ಯಾಮೆರಾದಲ್ಲೂ ಸೆರೆಯಾಗಿದೆ. ಯುವತಿಯ ಫೋನ್ ಕಸಿದುಕೊಂಡು ಆಕೆಯ ಕಪಾಳಕ್ಕೆ ಬಾರಿಸಿ ಶಿನೋಜ್ ಎಸ್ಕೆಪ್ ಆಗುವಾಗ ಸರಣಿ ಅಪಘಾತ ನಡೆದಿದೆ. ಶಿನೋಜ್ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಸ್ಥಳೀಯ ಪೊಲೀಸರು ಆತನ ಪತ್ತೆಗೆ ಬಲೆ ಬೀಸಿದ್ದಾರೆ.

Ads on article

Advertise in articles 1

advertising articles 2

ಉಚಿತವಾಗಿ ಸುದ್ದಿ ಕೊಡುತ್ತಿರುವ ನಮಗೆ ಸಹಾಯ ಮಾಡಿ

  

Pay Rs 100

  

Advertise under the article