ಸಂಚಾರದಲ್ಲಿದ್ದ ಬೈಕ್ ಮೇಲೆಯೇ ರೊಮ್ಯಾನ್ಸ್ ಮಾಡಿದ ಜೋಡಿಗೆ ಎದುರಾಯ್ತು ಸಂಕಷ್ಟ: ಪ್ರಕರಣ ದಾಖಲಿಸಿ ಪ್ರೇಮಿಯ ಬಂಧಿಸಿದ ಪೊಲೀಸರು


ಜೈಪುರ: ಸಂಚಾರದಲ್ಲಿದ್ದ ಬೈಕ್ ನಲ್ಲಿಯೇ ಯುವ ಜೋಡಿಗಳು ರೊಮ್ಯಾನ್ಸ್ ಮಾಡುವುದು ಇತ್ತೀಚೆಗೆ ಟ್ರೆಂಡ್ ಆಗಿರುವಂತೆ ಕಾಣುತ್ತಿದೆ. ದಿನಕ್ಕೊಂದಾದರೂ ಇಂತಹ ಪ್ರಕರಣಗಳು ವರದಿಯಾಗುತ್ತಲೇ ಇರುತ್ತದೆ. ಇದೀಗ ವೇಗವಾಗಿ ಚಲಿಸುತ್ತಿದ್ದ ಬೈಕ್ ಮೇಲೆಯೇ ಯುವಪ್ರೇಮಿ ಜೋಡಿಯೊಂದು ಸರಸವಾಡುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಈ ಘಟನೆ ರಾಜಸ್ಥಾನ ರಾಜ್ಯದ ಅಜ್ಮೀರ್‌ನಲ್ಲಿ ಸೋಮವಾರ ಮಧ್ಯರಾತ್ರಿ ನಡೆದಿದೆ. ಯುವತಿ ಪೆಟ್ರೋಲ್ ಟ್ಯಾಂಕ್ ಮೇಲೆ ಕುಳಿತು ಬೈಕ್ ಸವಾರ ಪ್ರೇಮಿಯನ್ನು ಅಪ್ಪಿಕೊಂಡು, ಚುಂಬಿಸುತ್ತಿರುವ ಈ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿದೆ. ಇಬ್ಬರು ಅಜ್ಮೀರ್‌ನಿಂದ ಪುಷ್ಕರ್‌ಗೆ ಪ್ರಯಾಣಿಸುತ್ತಿದ್ದ ಮಾರ್ಗ ಮಧ್ಯೆ ಅನುಚಿತವಾಗಿ ವರ್ತಿಸಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಈ ವೀಡಿಯೋ ವೈರಲ್ ಆಗುತ್ತಿದ್ದಂತೆ ಅಜ್ಮೀರದಲ್ಲಿರುವ ಕ್ರಿಶ್ಚಿಯನ್ ಗಂಜ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಕೊನೆಗೂ ಬೈಕ್ ಸವಾರನ ಮಾಹಿತಿ ಪತ್ತೆಹಚ್ಚಲಾಗಿದ್ದು, ಪ್ರೇಮಿಯನ್ನು ಸಾಹಿಲ್ ಎಂದು ಗುರುತಿಸಲಾಗಿದೆ. ಆತ ಅಜೇರ್‌ನ ಫೈ ಸಾಗರ್ ರಸ್ತೆಯ ನಿವಾಸಿಯಾಗಿದ್ದು, ಪೊಲೀಸರು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದ್ದಾರೆ.

ಸಾಕಷ್ಟು ವಿಚಾರಣೆಯ ಬಳಿಕ ತನ್ನೊಂದಿಗಿದ್ದ ಯುವತಿಯ ಬಗ್ಗೆಯೂ ಸಾಹಿಲ್ ಮಾಹಿತಿ ನೀಡಿದ್ದಾನೆ. ಇದೀಗ ಆ ಯುವತಿಗೂ ಪೊಲೀಸರು ಸಮನ್ಸ್ ನೀಡಿದ್ದು, ಆಕೆಯು ಸಹ ವಿಚಾರಣೆಯನ್ನು ಎದುರಿಸಬೇಕಿದೆ.
BREAKING NEWS
Loading latest news...
Join our WhatsApp Channel Powered By : Online Pudu