-->
ಪತ್ನಿಯ ಬಯಕೆಯಂತೆ ಆಕೆಯ ಸ್ನೇಹಿತೆಯನ್ನೇ ಎರಡನೇ ವಿವಾಹವಾದ ಪತಿರಾಯ

ಪತ್ನಿಯ ಬಯಕೆಯಂತೆ ಆಕೆಯ ಸ್ನೇಹಿತೆಯನ್ನೇ ಎರಡನೇ ವಿವಾಹವಾದ ಪತಿರಾಯ


ನವದೆಹಲಿ: ಮೊದಲ ಪತ್ನಿ ಬದುಕಿರುವಾಗಲೇ ಮತ್ತೊಂದು ಮದುವೆಯಾದರೆ ಪತಿಯ ಕಥೆ ಮುಗಿಯಿತೆಂದೇ ಅರ್ಥ. ಆದರೆ ಇಲ್ಲೊಬ್ಬಾಕೆ ತನ್ನ ಪತಿಗೆ ತಾನೇ ಮುಂದೆ ನಿಂತು ಎರಡನೇ ಮದುವೆ ಮಾಡಿಸಿದ್ದಾಳೆ. ವಿಶೇಷವೆಂದರೆ ಆಕೆ ತನ್ನ ಸ್ನೇಹಿತೆಯನ್ನೇ ಪತಿಗೆ ಮದುವೆ ಮಾಡಿಸಿದ್ದಾಳೆ. ಅಚ್ಚರಿ ಎನಿಸಿದರೂ ಇದು ಸತ್ಯ.

ಹೌದು, ಅಷ್ಟಕ್ಕೂ ಆಕೆ ತೆಗೆದುಕೊಂಡ ನಿರ್ಧಾರ ಅವಳ ಬಯಕೆಯಂತೆ. ಪತ್ನಿಯನ್ನು ಸಂತೋಷವಾಗಿ ಇಡಲೆಂದೇ ಆಕೆಯ ಸ್ನೇಹಿತೆಯನ್ನು ತಾನು ಎರಡನೇ ಮದುವೆ ಆಗಿದ್ದಾಗಿ ಪತಿ ಹೇಳಿಕೊಂಡಿದ್ದಾನೆ. ಇದಕ್ಕೆ ಸಂಬಂಧಿಸಿದ ವಿಡಿಯೋ ವೈರಲ್ ಆಗಿದ್ದು, ಮೂವರ ನಡುವೆ ನಡೆದಿರುವ ಸಂಭಾಷಣೆ ನೆಟ್ಟಿಗರ ಗಮನ ಸೆಳೆದಿದೆ.

ಸೆಲ್ಫಿ ವಿಡಿಯೋ ರೆಕಾರ್ಡ್ ಮಾಡಿರುವ ಪತಿ ಮೊದಲು ತನ್ನ ಹಿಂದಿರುವ ಮೊದಲ ಪತ್ನಿಯ ಪರಿಚಯ ಮಾಡುತ್ತಾನೆ. 
ಬಳಿಕ ನಿನ್ನ ಬಯಕೆ ಏನು ಎಂದು ಪತ್ನಿಯನ್ನು ಪ್ರಶ್ನೆ ಮಾಡುತ್ತಾನೆ. ಇದಕ್ಕೆ ಉತ್ತರಿಸುವ ಪತ್ನಿ ನನ್ನ ಫ್ರೆಂಡ್ ಜೊತೆ ನಾನು ಹೆಚ್ಚಿನ ಸಮಯ ಕಳೆಯಬೇಕೆಂದು ಕೇಳುತ್ತಾಳೆ. ಇದಕ್ಕೆ ಪತಿ ನಿನ್ನ ಸಮಸ್ಯೆಯನ್ನು ನಾನು ಬಗೆಹರಿಸಿದ್ದೇನೆಯೇ? ಎನ್ನುತ್ತಾನೆ. ಅದಕ್ಕೆ ಪತ್ನಿ ಹೌದು, ನೀನು ಪರಿಹರಿಸಿದ್ದೀಯ ಎನ್ನುತ್ತಾಳೆ.

ಇದಾದ ಬಳಿಕ ಆ ವ್ಯಕ್ತಿ ತನ್ನ ಕ್ಯಾಮೆರಾವನ್ನು ತನ್ನ ಪಕ್ಕದಲ್ಲಿ ಕುಳಿತಿರುವ ಮತ್ತೊಂದು ಮಹಿಳೆಯ ಬಳಿ ತಿರುಗಿಸುತ್ತಾನೆ. ಇವಳೇ ನನ್ನ ಎರಡನೇ ಪತ್ನಿ, ಹೆಸರು ಸಕಿನಾತ್. ನನ್ನ ಮೊದಲ ಪತ್ನಿಯ ಸ್ನೇಹಿತೆ ಎಂದು ಪರಿಚಯಿಸುತ್ತಾನೆ. ನನ್ನ ಕುಟುಂಬಕ್ಕೆ ಸ್ವಾಗತ ಸಕಿನಾತ್ ಎಂದು ಹೇಳುತ್ತಾನೆ. ಈ ವೇಳೆ ಎರಡನೇ ಪತ್ನಿ ನಾಚಿಕೊಳ್ಳುತ್ತಾಳೆ. ಬಳಿಕ ಗುಡ್‌ಬೈ ಹೇಳುವ ಮೂಲಕ ವಿಡಿಯೋ ಕೊನೆಯಾಗುತ್ತದೆ.

ಇದೀಗ ವೀಡಿಯೋಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಆದರೆ, ವಿಡಿಯೋ ಅಸಲಿಯತ್ತೇನು ಎಂಬುದು ದೃಢವಾಗಿಲ್ಲ. ವಿಡಿಯೋ ಮಾತ್ರ ಎಲ್ಲರ ಗಮನ ಸೆಳೆದಿದೆ. ಕೆಲವರು ತಮಾಷೆಯ ಕಾಮೆಂಟ್‌ಗಳನ್ನು ಮಾಡಿದರೆ, ಇನ್ನು ಕೆಲವರು ಮೊದಲ ಪತ್ನಿಯನ್ನು ಈ ರೀತಿ ನಡೆಸಿಕೊಳ್ಳುವುದಕ್ಕಾಗಿ ಮತ್ತು ಅವಳನ್ನು ಮೋಸಗೊಳಿಸಿದ್ದಕ್ಕಾಗಿ ಆತನನ್ನು ನಿಂದಿಸಿದ್ದಾರೆ.

Ads on article

Advertise in articles 1

advertising articles 2

ಉಚಿತವಾಗಿ ಸುದ್ದಿ ಕೊಡುತ್ತಿರುವ ನಮಗೆ ಸಹಾಯ ಮಾಡಿ

  

Pay Rs 100

  

Advertise under the article