ಪೋಷಕರಿಗೆ ತಿಳಿಯದಂತೆ ಗೋವಾದಲ್ಲಿ ಪ್ರೇಮಿಗಳ ದಿನ ಆಚರಿಸಲು ಬಂದ ಲವ್ ಬರ್ಡ್ಸ್ ದುರಂತ ಅಂತ್ಯ


ಪಣಜಿ: ಪೋಷಕರಿಗೆ ತಿಳಿಯದಂತೆ ಪ್ರೇಮಿಗಳ ದಿನ ಆಚರಣೆಗೆಂದು ಗೋವಾಗೆ ಬಂದಿದ್ದ ಪ್ರೇಮಿಗಳಿಬ್ಬರು ಸಮುದ್ರದಲ್ಲಿ ಮುಳುಗಿ ದುರ್ಮರಣಕ್ಕೀಡಾದ ಘಟನೆ ಸೋಮವಾರ ಸಂಜೆ ಪಾಲೊಲೇಮ್ ಬೀಚ್ ನಲ್ಲಿ ನಡೆದಿದೆ.

ಉತ್ತರಪ್ರದೇಶ ಮೂಲದವರಾದ ಸುಪ್ರಿಯಾ ದುಬೇ (26) ಮತ್ತು ವಿಭು ಶರ್ಮಾ (27) ಮೃತ ಪ್ರೇಮಿಗಳು. 

ಘಟನೆಯ ಬಳಿಕ ಮಾಹಿತಿ ಲಭ್ಯವಾಗುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ಗೋವಾ ಪೊಲೀಸರು ಜೀವ ರಕ್ಷಕರ ಸಹಾಯದಿಂದ ಮೃತದೇಹಗಳನ್ನು ಸಮುದ್ರದಿಂದ ಮೇಲಕ್ಕೆತ್ತಿದ್ದಾರೆ. ತಕ್ಷಣ ಅವರನ್ನು ಸಮೀಪದ ಕೊಂಕಣ ಸಾಮಾಜಿಕ ಆರೋಗ್ಯ ಕೇಂದ್ರಕ್ಕೆ ದಾಖಲಿಸಿದಾದರೂ ಅಷ್ಟರಲ್ಲಾಗಲೇ ಮೃತಪಟ್ಟಿರುವುದಾಗಿ ವೈದ್ಯರು ದೃಢಪಡಿಸಿದರು. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆ ಸ್ಥಳಾಂತರಿಸಲಾಗಿದೆ.

ಮೃತ ಸುಪ್ರಿಯಾ ಬೆಂಗಳೂರಿನಲ್ಲಿ ನೆಲೆಸಿದ್ದರು. ವಿಭು ದೆಹಲಿಯಲ್ಲಿ ವಾಸವಿದ್ದರು. ಇಬ್ಬರೂ ಸಂಬಂಧಿಕರೇ ಆಗಿರುವುದಾಗಿ ತಿಳಿದುಬಂದಿದೆ. ಆದರೆ ಇವರಿಬ್ಬರೂ ಗೋವಾಗೆ ಬಂದಿರುವುದು ಎರಡು ಕುಟುಂಬಗಳಿಗೆ ತಿಳಿಯದಿರುವ ಹಿನ್ನಲೆಯಲ್ಲಿ ಸಾವಿನ ಬಗ್ಗೆ ಮಾಹಿತಿ ಆ ಕ್ಷಣಕ್ಕೆ ತಿಳಿಯಲಿಲ್ಲ. ಬಳಿಕ ಪೊಲೀಸರು ಇಬ್ಬರ ಮಾಹಿತಿ ಕಲೆಹಾಕಿ ಸಾವಿನ ಸುದ್ದಿಯನ್ನು ಮುಟ್ಟಿಸಿದ್ದಾರೆ. ಸುಪ್ರಿಯಾ ಹಾಗೂ ವಿಭು ಕಳೆದ ಎರಡು ದಿನಗಳಿಂದ ಗೋವಾದಲ್ಲಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆಯ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ.
BREAKING NEWS
Loading latest news...
Join our WhatsApp Channel Powered By : Online Pudu