-->

ಓದುಗರ ಗಮನಕ್ಕೆ

ಓದುಗರ ಗಮನಕ್ಕೆ ಇಮುಂಗಾರು ವೆಬ್ಸೈಟ್‌ನಲ್ಲಿ ಪ್ರಕಟವಾಗುವ ಸುದ್ದಿಗಳಲ್ಲಿ ಯಾವುದೇ ಸಲಹೆಗಳಿದ್ದರೆ, ಅವುಗಳನ್ನು ಪಾಲಿಸುವ ಮುಂಚೆ ತಜ್ಞರ ಸಲಹೆಯಿಂದ ಕರಾರುವಕ್ಕಾಗಿ ಪರಿಶೀಲಿಸಿ. ಇಮುಂಗಾರು ಸಂಸ್ಥೆಯು ಯಾವುದೇ ಹಣಕಾಸಿನ ವ್ಯವಹಾರಗಳಲ್ಲಿ ತೊಡಗಿಸಿಕೊಳ್ಳುವುದಿಲ್ಲ. ಯಾವುದೇ ಹಣಕಾಸಿನ ವ್ಯವಹಾರಗಳಿಗೆ ಸಂಬಂಧಿಸಿದಂತೆ ನಮ್ಮ ಸಂಸ್ಥೆಯು ಯಾವುದೇ ಜವಾಬ್ದಾರಿಯನ್ನು ಹೊಂದಿರುವುದಿಲ್ಲ. ನಾವು ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಶೇರ್ ಮಾಡುವಾಗ ಜಾಹೀರಾತು ರೂಪದಲ್ಲಿ ಮೂರನೇ ವಾಟ್ಸಾಪ್ ಗ್ರೂಪ್ ಇನ್ವೈಟ್ ಲಿಂಕ್‌ಗಳನ್ನು ಸೇರಿಸಬಹುದು, ಆದರೆ ಇದಕ್ಕೆ ನಮ್ಮ ಸಂಸ್ಥೆಗೆ ಯಾವುದೇ ಸಂಬಂಧವಿಲ್ಲ.
ಯು-ಟ್ಯೂಬ್ ಸಿಇಒ ಹುದ್ದೆ ಅಲಂಕರಿಸಿದ ಭಾರತೀಯ ಮೂಲದ ನೀಲ್ ಮೋಹನ್

ಯು-ಟ್ಯೂಬ್ ಸಿಇಒ ಹುದ್ದೆ ಅಲಂಕರಿಸಿದ ಭಾರತೀಯ ಮೂಲದ ನೀಲ್ ಮೋಹನ್


ವಾಷಿಂಗ್ಟನ್: ವಿಶ್ವದ ಅತೀ ಜನಪ್ರಿಯ ಆನ್‌ಲೈನ್ ವೀಡಿಯೋ ವೇದಿಕೆ ಯು-ಟ್ಯೂಬ್‌ನ ಸಿಇಒ ಹುದ್ದೆಯಿಂದ ಸುಸಾನ್ ವೊಜಿಸಿಕಿ ಕೆಳಗಿಳಿದಿದ್ದು, ಯು-ಟ್ಯೂಬ್‌ನ ಮುಖ್ಯ ಉತ್ಪನ್ನಾಧಿಕಾರಿ ಭಾರತೀಯ ಮೂಲದ ನೀಲ್ ಮೋಹನ್ ಅವರಿಗೆ ಅಧಿಕಾರ ಹಸ್ತಾಂತರಿಸಿದ್ದಾರೆ.

ಸುಸಾನ್ 9 ವರ್ಷಗಳ ಕಾಲ ಯು-ಟ್ಯೂನ್ ಸಿಇಒ ಹುದ್ದೆಯನ್ನು ಅಲಂಕರಿಸಿದ್ದರು. ಕುಟುಂಬ, ಆರೋಗ್ಯ ಹಾಗೂ ತಮ್ಮ ವೈಯಕ್ತಿಕ ಯೋಜನೆಗಳಿಗೆ ಗಮನ ಹರಿಸಬೇಕಾಗಿರುವ ಹಿನ್ನೆಲೆಯಲ್ಲಿ ಈ ಹುದ್ದೆಯನ್ನು ತೆರವುಗೊಳಿಸುತ್ತಿರುವುದಾಗಿ ಅವರು ತಿಳಿಸಿದ್ದಾರೆ. ಈ ಮೊದಲು ಗೂಗಲ್‌ನ ಆ್ಯಡ್ ಪ್ರಾಡಕ್ಟ್ ವಿಭಾಗದ ಹಿರಿಯ ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದ ಸುಸಾನ್, 2014ರಲ್ಲಿ ಯು-ಟ್ಯೂಬ್ ಸಿಇಓ ಆಗಿ ಅಧಿಕಾರ ವಹಿಸಿಕೊಂಡಿದ್ದರು.

ಗೂಗಲ್‌ನ ಆರಂಭಿಕ ಉದ್ಯೋಗಿಗಳಲ್ಲೊಬ್ಬರಾದ ಇವರು, ಇದರ ಮಾತೃಸಂಸ್ಥೆ ಅಲ್ಫಾಬೆಟ್ ಇನ್‌ಕಾರ್ಪೊರೇಷನ್‌ನಲ್ಲಿ 25 ವರ್ಷ ಕಾಲ ಸೇವೆ ಸಲ್ಲಿಸಿದ್ದರು.

Ads on article

Advertise in articles 1

advertising articles 2

Advertise under the article

ಸುರ