ಯುಕೆಯಲ್ಲಿ ಉದ್ಯೋಗ ಕೊಡಿಸುವುದಾಗಿ ವಂಚನೆ: ನೈಜೀರಿಯನ್ ಪ್ರಜೆ ಅರೆಸ್ಟ್

ಯುಕೆಯಲ್ಲಿ ಉದ್ಯೋಗ ಕೊಡಿಸುವುದಾಗಿ ವಂಚನೆ: ನೈಜೀರಿಯನ್ ಪ್ರಜೆ ಅರೆಸ್ಟ್ 

ಬೆಂಗಳೂರು: ಯುಕೆಯಲ್ಲಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ ವಿವಿಧ ಶುಲ್ಕಗಳ ಹೆಸರಿನಯ ಹಣ ಪಡೆದು ವಂಚಿಸಿರುವ ಆರೋಪದಲ್ಲಿ ನೈಜೀರಿಯನ್ ದೇಶದ ಪ್ರಜೆಯನ್ನು ಬಂಧಿಸಲಾಗಿದೆ.

ನೋಕೋಚಾ ಕಾಶ್ಮೀರ್ ಇಕೆಂಬಾ ಎಂಬಾತ ಬಂಧಿತ ಆರೋಪಿ. ಈತ ಯುಕೆಯ ಶೆಲ್ ಆಯಿಲ್ ಕಂಪೆನಿಯಲ್ಲಿ ಮ್ಯಾನೆಜ್‌ಮೆಂಟ್ ಹುದ್ದೆ ಸ್ಟಾಪ್ ನರ್ಸ್, ಚೆಫ್ ಮುಂತಾದ ಹುದ್ದೆಗಳನ್ನು ಕೊಡಿಸುವುದಾಗಿ ಹೇಳಿ ನಂಬಿಸಿ ವಿವಿಧ ಶುಲ್ಕಗಳ ಹೆಸರಿನಲ್ಲಿ ಹಣ ಪಡೆದುಕೊಂಡು ಅಮಾಯಕರನ್ನು ವಂಚಿಸುತ್ತಿದ್ದ. ಇದೀಗ ಆರೋಪಿಯನ್ನು ಬೆಂಗಳೂರು ನಗರದ ಈಶಾನ್ಯ ವಿಭಾಗದ ಸಿ.ಇ.ಎನ್. ಪೊಲೀಸರು ಫೆ.11ರಂದು ಪತ್ತೆ ಮಾಡಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಈತ ಬೆಂಗಳೂರು ಮೂಲದ ಮಲರ್ ಕೋಡಿ ಎಂಬವರಿಗೆ ಯುಕೆಯಲ್ಲಿ ಸ್ಟಾಫ್ ನರ್ಸ್ ಕೆಲಸ ಕೊಡಿಸುವುದಾಗಿ ಸಂದೇಶ ಕಳುಹಿಸಿದ್ದ. ಇದನ್ನು ನಂಬಿದ ಮಲ‌ರ್ ಕೋಡಿ, ಆರೋಪಿಯನ್ನು ಸಂಪರ್ಕಿಸಿದ್ದಾರೆ‌. ವಿವಿಧ ಶುಲ್ಕ ಹಾಗೂ ಕ್ಲಿಯರನ್ಸ್ ಶುಲ್ಕಗಳೆಂದು ಹಂತ ಹಂತವಾಗಿ ಅವರ ಬ್ಯಾಂಕ್ ಖಾತೆಗಳಿಗೆ ಒಟ್ಟು 3ಲಕ್ಷ ರೂ. ಅಧಿಕ ಹಣವನ್ನು ಹಾಕಿಸಿಕೊಂಡು ಯಾವುದೇ ಕೆಲಸ ಕೊಡಿಸದೆ ವಂಚಿಸಿದ್ದನು.

ತಾನು ವಂಚನೆಗೊಳಗಾಗಿರುವುದು ಅರಿತ ಬಳಿಕ ಸಂತ್ರಸ್ತೆ ಮಲಾರ್ ಕೋಡಿ, ಈಶಾನ್ಯ ವಿಭಾಗದ ಸೆನ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ತನಿಖಾಧಿಕಾರಿಗಳು ಪ್ರಕರಣದ ತನಿಖೆ ನಡೆಸಿ, ಆರೋಪಿ ನೋಕೊಚಾ ಕಾಶ್ಮೀರ್ ಇಕೆಂಬಾನನ್ನು ಬಂಧಿಸಿದ್ದಾರೆ. 

ಆತನ ಬಳಿ ಕೃತ್ಯಕ್ಕೆ ಬಳಸಿದ್ದ ಸಿಮ್ ಕಾರ್ಡಗಳು, 6 ಮೊಬೈಲ್ ಫೋನ್‌ಗಳು, 1 ಲ್ಯಾಪ್‌ಟಾಪ್, 2 ಡೆಬಿಟ್ ಕಾರ್ಡ್ ಹಾಗೂ ಪಾಸ್‌ಪೋರ್ಟ್ ಅನ್ನು ವಶಕ್ಕೆ ತೆಗೆದುಕೊಂಡು ತನಿಖೆ ನಡೆಸುತ್ತಿದ್ದಾರೆ.
BREAKING NEWS
Loading latest news...
Join our WhatsApp Channel Powered By : Online Pudu