-->
ಪತ್ನಿ ಗರ್ಭಿಣಿ, ಹೊಟ್ಟೆಯಲ್ಲಿರುವ ಮಗು ತನ್ನದಲ್ಲವೆಂದ ಪತಿಯಿಂದ ಈ ಕೃತ್ಯ ನಡೆದೇ ಹೋಯ್ತು

ಪತ್ನಿ ಗರ್ಭಿಣಿ, ಹೊಟ್ಟೆಯಲ್ಲಿರುವ ಮಗು ತನ್ನದಲ್ಲವೆಂದ ಪತಿಯಿಂದ ಈ ಕೃತ್ಯ ನಡೆದೇ ಹೋಯ್ತು


ಬೆಂಗಳೂರು: ಯುವತಿಯೊಬ್ಬಳು ಗರ್ಭಿಣಿಯಾಗಿದ್ದೇ ಆಕೆಯ ಪ್ರಾಣಕ್ಕೆ ಮುಳುವಾಗಿದೆ. ಅನುಮಾನ ಪಿಶಾಚಿ ಪತಿಯೇ ಈ ಮಗು ತನ್ನದಲ್ಲವೆಂದು ಆಕೆಯನ್ನು ಉಸಿರುಗಟ್ಟಿಸಿ ಕೊಲೆ ಮಾಡಿರುವ ಘಟನೆ ಬೆಂಗಳೂರಿನ ತಾವರೆಕೆರೆಯ ಸುಭಾಷ್‌ನಗರದ ಫ್ಲ್ಯಾಟ್‌ನಲ್ಲಿ ಈ ಕೊಲೆ ನಡೆದಿದೆ. 

ನಾಜ್ (22) ಅನುಮಾನಕ್ಕೆ ಬಲಿಯಾದ ಯುವತಿ. ಪತಿ ನಾಸಿರ್ ಹುಸೇನ್ ಕೊಲೆ ಆರೋಪಿ. ಕಳೆದ 6 ತಿಂಗಳ ಹಿಂದಷ್ಟೇ ದಂಪತಿ ಫ್ಲ್ಯಾಟ್‌ ಗೆ ಬಂದು ವಾಸವಿದ್ದರು. ಕೊಲೆಗೆ ಕಾರಣವೇನೆಂಬುದು ಇದೀಗ ಬಹಿರಂಗಗೊಂಡಿದೆ.

ಪರಸ್ಪರ ಪ್ರೀತಿಯ ಬಲೆಗೆ ಬಿದ್ದಿದ್ದ ಇವರಿಬ್ಬರು ಆರು ತಿಂಗಳ ಹಿಂದೆಯಷ್ಟೇ ಮದುವೆಯಾಗಿದ್ದರು. ನಾಸಿರ್ ಹುಸೇನ್‌ಗೆ ತಂದೆ-ತಾಯಿ ಇರಲಿಲ್ಲ. ನಾಜ್ ಆತನನ್ನೇ ಮದುವೆಯಾಗುವೆನೆಂದು ತಂದೆ-ತಾಯಿಯನ್ನು ಒಪ್ಪಿಸಿದ್ದಳು. ತಬ್ಬಲಿಯಂತಿದ್ದ ನಾಸಿರ್ ಗುಣವಂತ ಎಂದುಕೊಂಡು ನಾಜ್‌ಳನ್ನು ಆಕೆಯ ಪಾಲಕರು ಮದುವೆ ಮಾಡಿಸಿಕೊಟ್ಟಿದ್ದರು.

ಆದರೆ ಇತ್ತೀಚೆಗಷ್ಟೇ ಗರ್ಭಿಣಿಯಾಗಿದ್ದ ನಾಜ್ ಮೇಲೆ ನಾಸಿರ್ ಹುಸೇನ್ ಅನುಮಾನ ವ್ಯಕ್ತಪಡಿಸಿದ್ದ. 'ನಿನ್ನ ಹೊಟ್ಟೆಯಲ್ಲಿರುವ ಮಗು ತನ್ನದಲ್ಲ ಎನ್ನುತ್ತಿದ್ದ ನಾಸಿರ್, ಗರ್ಭಪಾತ ಮಾಡಿಸಿಕೊಳ್ಳುವಂತೆಯೂ ಒತ್ತಾಯಿಸಿದ್ದ'. ಇದು ನಾಜ್‌ ಇಷ್ಟವಿರದ್ದರಿಂದ ಇಬ್ಬರ ನಡುವೆ ಆಗಾಗ ಗಲಾಟೆ ಆಗುತ್ತಿತ್ತು. ಪರಿಣಾಮ ನಾಸಿರ್ ಆಕೆಯನ್ನು ಉಸಿರುಗಟ್ಟಿಸಿ ಕೊಲೆಗೈದಿದ್ದಾನೆ.

Ads on article

  

Advertise in articles 1

advertising articles 2

ಉಚಿತವಾಗಿ ಸುದ್ದಿ ಕೊಡುತ್ತಿರುವ ನಮಗೆ ಸಹಾಯ ಮಾಡಿ

  

Pay Rs 100

  

Advertise under the article