-->

ಸುರತ್ಕಲ್: ನಾಲ್ಕು ವರ್ಷದ ಕಂದಮ್ಮನನ್ನು ಬೀದಿಗೆ ಬಿಟ್ಟ ಪೋಷಕರು...!

ಸುರತ್ಕಲ್: ನಾಲ್ಕು ವರ್ಷದ ಕಂದಮ್ಮನನ್ನು ಬೀದಿಗೆ ಬಿಟ್ಟ ಪೋಷಕರು...!


ಮಂಗಳೂರು: ಇದೆಂಥಹ ಅಮಾನವೀಯ ಕೃತ್ಯ. ಇನ್ನೂ ಏನೂ ಅರಿಯದ ನಾಲ್ಕು ವರ್ಷದ ಕಂದಮ್ಮನನ್ನು ಪೋಷಕರು ಬೀದಿಗೆ ತಳ್ಳಿದ್ದಾರೆ‌. ತನ್ನವರು ಇಲ್ಲದೆ ಬೀದಿಗೆ ಬಿದ್ದ ಈ ಬಾಲಕಿ ಈಗ ಪೊಲೀಸ್ ಆಶ್ರಯದಲ್ಲಿದ್ದಾಳೆ.

ಹೌದು... ನಗರದ ಸುರತ್ಕಲ್ ಠಾಣಾ ವ್ಯಾಪ್ತಿಯಲ್ಲಿ ನಾಲ್ಕು ವರ್ಷದ ಹೆಣ್ಣು ಮಗುವೊಂದು ಪತ್ತೆಯಾಗಿದೆ. ವಾರಸುದಾರರಿಲ್ಲದೆ ಮಾರ್ಗದ ಬದಿಯಲ್ಲಿ ಅಲೆದಾಡುತ್ತಿದ್ದ ಮಗುವನ್ನು ಪೋಷಕರು ಬಿಟ್ಟು ಹೋಗಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ.


ಸುರತ್ಕಲ್ ನ ಸದಾನಂದ ಹೋಟೆಲ್ ಬಳಿ ಈ ಹೆಣ್ಣು ಮಗುವನ್ನು ಪೋಷಕರು ಬಿಟ್ಟು ಹೋಗಿದ್ದಾರೆ. ಮಗು ಒಂಟಿಯಾಗಿರುವುದನ್ನು ಗಮನಿಸಿದ ಸಾರ್ವಜನಿಕರು ಈ ಬಗ್ಗೆ ಸುರತ್ಕಲ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಹೆಣ್ಣು ಮಗು ಎಲ್ಲಿಯಾದರೂ ನಾಪತ್ತೆಯಾಗಿದ್ದಲ್ಲಿ ದಯವಿಟ್ಟು ಈ ಕೆಳಕಂಡ ಸುರತ್ಕಲ್ ಠಾಣೆಯ ಫೋನ್ ನಂಬರ್ ಗಳಿಗೆ  ಸಂಪರ್ಕಿಸಿ ಎಂದು ಪೊಲೀಸ್ ಇಲಾಖೆ ಮನವಿ ಮಾಡಿದೆ.

ಸುರತ್ಕಲ್ ಠಾಣಾ ಫೋನ್ ನಂಬರ್- 08242220540
 ಪೊಲೀಸ್ ನಿರೀಕ್ಷಕರ ಮೊಬೈಲ್ ನಂಬರ್- 9480805360
 ಪೊಲೀಸ್ ಉಪನಿರೀಕ್ಷಕರು ಮೊಬೈಲ್ ನಂಬರ್- 9480802344
 ನಗರ ನಿಸ್ತಂತು ನಿಯಂತ್ರಣ ಕೊಠಡಿ ಮಂಗಳೂರು ನಗರ ಫೋನ್ ನಂಬರ್- 9480802321
ಮಹಿಳಾ ಸಮನ್ವಯ ಅಧಿಕಾರಿ -9448332713

Ads on article

Advertise in articles 1

advertising articles 2

Advertise under the article