ಮಂಗಳೂರು ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡ 'ಕ್ಯಾಪ್ಟನ್ ಕೂಲ್' ಎಂ.ಎಸ್.ಧೋನಿ


ಮಂಗಳೂರು: ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ, 'ಕ್ಯಾಪ್ಟನ್ ಕೂಲ್' ಮಹೇಂದ್ರ ಸಿಂಗ್ ಧೋನಿ ಇಂದು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡರು. 

ಕಾಸರಗೋಡಿಗೆ ಹೋಗಬೇಕಾದ ಮಹೇಂದ್ರ ಸಿಂಗ್ ಧೋನಿಯವರು ವಿಮಾನದ ಮ‌ೂಲಕ ಆಗಮಿಸಿ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದಿಳಿದಿದ್ದಾರೆ. ಬಳಿಕ ಅವರು ರಸ್ತೆ ಮಾರ್ಗವಾಗಿ ಕೇರಳ ರಾಜ್ಯದ ಕಾಸರಗೋಡಿಗೆ ತೆರಳಲಿದ್ದಾರೆ. 

ಅವರು ಇಂದು ಸಂಜೆ ಕಾಸರಗೋಡಿನಲ್ಲಿ ನಡೆಯಲಿರುವ ತಮ್ಮ ಗೆಳೆಯ ಡಾ.ಶಾಜಿರ್ ಗಾಫರ್ ಅವರ ತಂದೆ ಪ್ರೊ.ಕೆ.ಕೆ.ಅಬ್ದುಲ್ ಗಾಫರ್ ಅವರ ಆತ್ಮಕಥೆ ಪುಸ್ತಕ ಅನಾವರಣ ಮಾಡಲೆಂದು ಆಗಮಿಸಿದ್ದಾರೆ. ಈ ವೇಳೆ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಎಂ.ಎಸ್.ಧೋನಿಯವರಿಗೆ ಸ್ವಾಗತ ಕೋರಲಾಯಿತು. ತಮ್ಮ ನೆಚ್ಚಿನ ಆಟಗಾರನನ್ನು ಕಂಡು ಅಭಿಮಾನಿಗಳು ಸೆಲ್ಫಿಗಾಗಿ ಮುಗಿಬಿದ್ದರು. ಆದರೆ ಭದ್ರತಾ ಸಿಬ್ಬಂದಿ ಅವಕಾಶ ಕೊಡದಿರುವುದರಿಂದ ಅಭಿಮಾನಿಗಳು ನಿರಾಶೆಗೊಂಡರು.
BREAKING NEWS
Loading latest news...
Join our WhatsApp Channel Powered By : Online Pudu