-->
ಮಹಿಳಾ ಕ್ರಿಕೆಟ್ ಆಟಗಾರ್ತಿ ಮೃತದೇಹ ಆತ್ಮಹತ್ಯೆಗೈದ ಸ್ಥಿತಿಯಲ್ಲಿ ಪತ್ತೆ

ಮಹಿಳಾ ಕ್ರಿಕೆಟ್ ಆಟಗಾರ್ತಿ ಮೃತದೇಹ ಆತ್ಮಹತ್ಯೆಗೈದ ಸ್ಥಿತಿಯಲ್ಲಿ ಪತ್ತೆ


ಭುವನೇಶ್ವರ: ಒಡಿಶಾದ ಮಹಿಳಾ ಕ್ರಿಕೆಟ್ ಆಟಗಾರ್ತಿ ರಾಜಶ್ರೀ ಸೈನ್ ಮೃತದೇಹ ಕತಕ್ ನಗರ ಬಳಿಯ ಅತಾಗಢ ಪ್ರದೇಶದ ದಟ್ಟ ಅರಣ್ಯವೊಂದರಲ್ಲಿ ಮರಕ್ಕೆ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಶುಕ್ರವಾರ ಪತ್ತೆಯಾಗಿದೆ. ರಾಜಶ್ರೀ ಸ್ಟೈನ್ ಜನವರಿ 11ರಿಂದ ನಾಪತ್ತೆಯಾಗಿದ್ದರು.

ರಾಜಶ್ರೀ ಸೈನ್ ನಾಪತ್ತೆಯಾಗಿರುವ ಬಗ್ಗೆ ಅವರ ಕೋಚ್ ಕತಕ್ ನ ಮಂಗಳಾಬಾದ್ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದರು. ಗುರುದಿಝಾತಿಯಾ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಸಾವು ಪ್ರಕರಣ ದಾಖಲಿಸಲಾಗುವುದು ಎಂದು ಕೋಚ್ ತಿಳಿಸಿದ್ದಾರೆ. ಸ್ಟೈನ್ ಸಾವಿಗೆ ನಿಖರವಾದ ಕಾರಣವೇನೆಂದು ಪೊಲೀಸರು ಇದುವರೆಗೆ ಪತ್ತೆ ಮಾಡಿಲ್ಲ. 

ಆದರೆ, “ರಾಜಶ್ರೀ ಸ್ಟೈನ್ ರನ್ನು ಹತ್ಯೆಗೈಯಲಾಗಿದೆ. ಇದಕ್ಕೆ ಅವರ ಮೃತದೇಹದಲ್ಲಿ ಕಂಡು ಬಂದಿರುವ ಗಾಯಗಳು ಹಾಗೂ ಕಣ್ಣಿಗೆ ಉಂಟಾಗಿರುವ ಹಾನಿ ಇದಕ್ಕೆ ಸಾಕ್ಷಿ” ಎಂದು ಕುಟುಂಬ ಆರೋಪಿಸಿದೆ. ಸೈನ್ ಅವರ ಸ್ಕೂಟರ್ ಸಮೀಪದ ಅರಣ್ಯದಲ್ಲಿ ಪತ್ತೆಯಾಗಿದೆ. ಅವರ ಮೊಬೈಲ್ ಸ್ವಿಚ್ ಆಫ್ ಆಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಪ್ರಕರಣವನ್ನು ಎಲ್ಲಾ ಆಯಾಮಗಳಲ್ಲಿ ತನಿಖೆ ನಡೆಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

Ads on article

  

Advertise in articles 1

advertising articles 2

ಉಚಿತವಾಗಿ ಸುದ್ದಿ ಕೊಡುತ್ತಿರುವ ನಮಗೆ ಸಹಾಯ ಮಾಡಿ

  

Pay Rs 100

  

Advertise under the article