ಬೆಳ್ತಂಗಡಿ: ಅಪ್ರಾಪ್ತೆಯ ಅತ್ಯಾಚಾರಗೈದು ಗರ್ಭಿಣಿಯಾಗಲು ಆರೋಪಿ ಅರೆಸ್ಟ್


ಬೆಳ್ತಂಗಡಿ: ಅಪ್ರಾಪ್ತೆಯ ಮೇಲೆ ಅತ್ಯಾಚಾರ ಎಸಗಿ ಆಕೆ ಗರ್ಭಿಣಿಯಾಗಲು ಕಾರಣನಾದ ಆರೋಪಿ ಸುಧೀರ್ (25) ಎಂಬಾತನನ್ನು ‌ಪೊಲೀಸರು‌ ಬಂಧಿಸಿದ್ದಾರೆ.

ಕಡಿರುದ್ಯಾವರ ಗ್ರಾಮದ ಕೊಪ್ಪದ ಗಂಡಿ ಸಮೀಪದ ನಿವಾಸಿ ಅಪ್ರಾಪ್ತ ಬಾಲಕಿಯ ಸುಧೀರ್ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ. ಪರಿಣಾಮ ಬಾಲಕಿ ಗರ್ಭಿಣಿಯಾಗಿದ್ದಳು. ಬಳಿಕ ಆಕೆಯ ಗರ್ಭಪಾತ ಮಾಡಿಸಿದ್ದಾನೆ. ಈಗಾಗಲೇ ಬಾಲಕಿಯ ಗರ್ಭಪಾತಕ್ಕೆ ಸಹಕರಿಸಿದ್ದ ಸುಧೀರ್ ತಮ್ಮ ಮನೋಹರ್ (23) ಹಾಗೂ ಸಂಬಂಧಿ ಮಾಧವ (55) ಎಂಬಾತನನ್ನು ಬಂಧಿಸಲಾಗಿದೆ.

ಪ್ರಕರಣ ದಾಖಲಾದ ಬಳಿಕ ಪ್ರಮುಖ ಆರೋಪಿ ಸುಧೀರ್ ತಲೆಮರೆಸಿಕೊಂಡಿದ್ದ. ಸುಧೀರ್ ಚಿಕ್ಕಮಗಳೂರು ಸುತ್ತಮುತ್ತ ಕೆಲಸ ಮಾಡುತ್ತಿದ್ದ ಮಾಹಿತಿ ಪಡೆದ ಬೆಳ್ತಂಗಡಿ ವೃತ್ತನಿರೀಕ್ಷಕ ಶಿವಕುಮಾರ್ ಹಾಗೂ ತಂಡ ಜ.17 ರಂದು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ. ಬಾಲಕಿಯ ಗರ್ಭಪಾತಕ್ಕೆ ಆರೋಪಿ ತಾಯಿ ಪಾರ್ವತಿ (60) ಸಹಕರಿಸಿದ್ದು, ಆಕೆ ತಾನು ಅಪ್ರಾಪ್ತೆಯ ತಾಯಿ ಎಂದು ಆಸ್ಪತ್ರೆಯಲ್ಲಿ ಸುಳ್ಳು ಮಾಹಿತಿ ನೀಡಿದ್ದರು ಎಂದು ತಿಳಿದು ಬಂದಿದೆ. ಈ ಕುರಿತು ಆರೋಪಿಯನ್ನು ವಿಚಾರಣೆಗೆ ಒಳಪಡಿಸಲಾಗಿದೆ.


BREAKING NEWS
Loading latest news...
Join our WhatsApp Channel Powered By : Online Pudu