ಮಂಗಳೂರು: ಕೋಸ್ಟಲ್ ವುಡ್ ನಲ್ಲಿ ಹವಾ ಸೃಷ್ಟಿಸಲಿದೆ "Vip's Last ಬೆಂಚ್" ಮಲ್ಟಿ ಸ್ಟಾರ್ ಸಿನಿಮಾ

ಮಂಗಳೂರು: ಬಾಲಿವುಡ್, ಸ್ಯಾಂಡಲ್ ವುಡ್ ಗಳಲ್ಲಿ ಮಲ್ಟಿ ಸ್ಟಾರ್ ಗಳ ಸಿನಿಮಾ ಸಾಕಷ್ಟು ಬರುತ್ತಿದೆ. ಆದರೆ ಇದೇ ಮೊದಲ ಬಾರಿಗೆ ಕೋಸ್ಟಲ್ ವುಡ್ ನಲ್ಲಿ ಇಂಥಹದ್ದೊಂದು ಪರಂಪರೆಗೆ ''Vip's Last ಬೆಂಚ್'' ಸಿನಿಮಾ ನಾಂದಿ ಹಾಡಿದೆ.

'ಬಿಗ್ ಬಾಸ್' ಖ್ಯಾತಿಯ ರೂಪೇಶ್ ಶೆಟ್ಟಿ, 'ದಿಯಾ' ಸಿನಿಮಾ ಖ್ಯಾತಿಯ ಪೃಥ್ವಿ ಅಂಬರ್ ಮತ್ತು 'ರಾಜ್ ಸೌಂಡ್ಸ್ & ಲೈಟ್ಸ್' ಸಿನಿಮಾ ಖ್ಯಾತಿಯ ವಿನೀತ್ ಕುಮಾರ್ ಮೂವರು ನಾಯಕ ನಟರಾಗಿ ನಟಿಸಿರುವ "Vip's Last ಬೆಂಚ್" ಸಿನಿಮಾ ಡಿಸೆಂಬರ್ 16ರಂದು ತೆರೆಕಾಣಲಿದೆ. ಮೂವರು ಬೇಜವಾಬ್ದಾರಿ ಯುವಕರ ಕಾಲೇಜು ಲೈಫ್ ಈ ಸಿನಿಮಾದಲ್ಲಿ ಚಂದದ ಸ್ಟೋರಿ ಲೈನ್ ಕೂಡಾ ಇದೆ. ಬರೀ ಕಾಮಿಡಿ ಮಾತ್ರವಲ್ಲದೆ ಭಾವನಾತ್ಮಕ ಸನ್ನಿವೇಶವೂ ಇದೆ. 




ನಾಲ್ಕು ವರ್ಷಗಳ ಹಿಂದೆ ಈ ಸಿನಿಮಾ ಚಿತ್ರೀಕರಣಗೊಂಡಿತ್ತು. ಆದರೆ ಕೋವಿಡ್ ಸೇರಿದಂತೆ ಹಲವಾರು ಅಡೆತಡೆಗಳ ಬಳಿಕ "Vip's Last ಬೆಂಚ್" ಸಿನಿಮಾ ಇದೀಗ ತೆರೆ ಕಾಣುತ್ತದೆ. ಸಿನಿಮಾ ಚಿತ್ರೀಕರಣ ಆಗುವಾಗ ಮೂವರೂ ನಾಯಕರು ಸಾಮಾನ್ಯ ನಟರಾಗಿದ್ದರು‌. ಈಗ ಮೂವರೂ ಪ್ರಸಿದ್ಧರಾಗಿ ಸಾಕಷ್ಟು ಹೆಸರು ಗಳಿಸಿದ್ದಾರೆ. 




ಎ.ಎಸ್.ಪ್ರೊಡಕ್ಷನ್ ಲಾಂಛನದಲ್ಲಿ ನಿರ್ಮಾಣಗೊಂಡಿರುವ "Vip's Last ಬೆಂಚ್" ಸಿನಿಮಾಕ್ಕೆ ಪ್ರಧಾನ್ ಎಂಪಿ ಆ್ಯಕ್ಷನ್ ಕಟ್ ಹೇಳಿದ್ದಾರೆ. ಆಶಿಕಾ ಸುವರ್ಣ ನಿರ್ಮಾಣದಲ್ಲಿ ಮೂಡಿ ಬಂದ ಈ ಸಿನಿಮಾದಲ್ಲಿ ಈ ಮೂವರು ಮಲ್ಟಿ ಸ್ಟಾರ್ ಗಳೊಂದಿಗೆ ತುಳುಚಿತ್ರರಂಗದ ಹಾಸ್ಯ ಕಲಾವಿದರ ದಂಡೇ ಇದೆ. 


BREAKING NEWS
Loading latest news...
Join our WhatsApp Channel Powered By : Online Pudu