ಮಂಗಳೂರು: ಹೆಲ್ಮೆಟ್ ಧರಿಸಿಲ್ಲವೆಂದು ಕಾರುಚಾಲಕನಿಗೆ ನೋಟಿಸ್ ಜಾರಿ; ಸಂಚಾರಿ ಪೊಲೀಸರ ಎಡವಟ್ಟು




ಮಂಗಳೂರು: ಹೆಲ್ಮಟ್ ಧರಿಸದಿರುವ ಬೈಕ್ ಸವಾರರಿಗೆ ದಂಡ ವಿಧಿಸಿ ಮನೆಗೆ ನೋಟಿಸ್ ಜಾರಿಯಾಗುವುದು ನಮಗೆಲ್ಲಾ ಗೊತ್ತೇ ಇದೆ.‌ ಆದರೆ ಇಲ್ಲೊಬ್ಬ ಕಾರು ಸವಾರೊಬ್ಬರಿಗೆ ಹೆಲ್ಮೆಟ್ ಇಲ್ಲವೆಂದು ದಂಡ ವಿಧಿಸಿ ನೋಟಿಸ್ ಜಾರಿಗೊಳಿಸಿರುವ ಮಂಗಳೂರು ಸಂಚಾರಿ ಪೊಲೀಸರ ಎಡವಟ್ಟೊಂದು ಬಯಲಾಗಿದೆ.

ನ.29ರಂದು ನಗರದ ಮಂಗಳಾದೇವಿಯಲ್ಲಿ ವ್ಯಕ್ತಿಯೊಬ್ಬರು ತಮ್ಮ ಕಾರಿನಲ್ಲಿ ಸಂಚರಿಸಿದ್ದರು. 
ಆದರೆ ಸಂಚಾರ ಪೊಲೀಸ್ ಠಾಣೆಯಿಂದ ಸಹ ಸವಾರ ಹೆಲ್ಮೆಟ್ ಹಾಕಿಲ್ಲವೆಂಬ ಕಾರಣವೊಡ್ಡಿ ಡಿ.22ರಂದು 500ರೂ. ದಂಡಪಾವತಿಗೆ ಅವರ ಮನೆಗೆ ನೋಟಿಸ್ ಜಾರಿಯಾಗಿತ್ತು. ಪರಿಣಾಮ ವಿಚಲಿತರಾದ ಕಾರು ಮಾಲಕರು ಪರಿಶೀಲನೆ ನಡೆಸಿದಾಗ ಅಟೋಮೇಶನ್ ಸೆಂಟರ್‌ನಲ್ಲಿ ಎಡವಟ್ಟಾಗಿರುವುದು ಬಯಲಾಗಿದೆ.

ಕಾರು ಮಾಲಕರು ತೆರಳುತ್ತಿದ್ದ ವೇಳೆ ಅದೇ ದಾರಿಯಲ್ಲಿ ಇಬ್ಬರು ಯುವಕರು ಬೈಕ್‌ನಲ್ಲಿ ತೆರಳುತ್ತಿದ್ದರು. ಅವರಲ್ಲಿ ಸಹಸವಾರ ಹೆಲ್ಮೆಟ್ ಧರಿಸಿರಲಿಲ್ಲ. ಆ ವಾಹನದ ಮೇಲೆ ದಂಡ ಹಾಕುವ ಬದಲು ಕಾರಿನ ಮಾಲಕರಿಗೆ ದಂಡ ವಿಧಿಸಿ ನೋಟಿಸ್ ಜಾರಿಯಾಗಿದೆ ಎಂದು ತಿಳಿದು ಬಂದಿದೆ.
BREAKING NEWS
Loading latest news...
Join our WhatsApp Channel Powered By : Online Pudu