-->

ಭಗವಂತ ವಿಷ್ಣುವನ್ನೇ ವಿವಾಹವಾಗಿದ್ದಾಳೆ 30 ವರ್ಷದ ಯುವತಿ...!

ಭಗವಂತ ವಿಷ್ಣುವನ್ನೇ ವಿವಾಹವಾಗಿದ್ದಾಳೆ 30 ವರ್ಷದ ಯುವತಿ...!


ಜೈಪುರ: ಮಹಾನ್ ಸಂತೆ ಮೀರಾ ತನ್ನ ಆರಾಧ್ಯ ದೈವ ಕೃಷ್ಣನನ್ನೇ ವಿವಾಹವಾಗಿದ್ದು, ಶಿವಶರಣೆ ಅಕ್ಕಮಹಾದೇವಿ ಶಿವನನ್ನೇ ವಿವಾಹವಾಗಿದ್ದರೆಂದು ನಾವು ಓದಿದ್ದೆವು. ಇದೀಗ ರಾಜಸ್ಥಾನದ ಗೋವಿಂದಗಢ ಸಮೀಪದ ಹಳ್ಳಿಯೊಂದರಲ್ಲಿ ನಡೆದಿರುವ ವಿವಾಹವೊಂದು ಇಂತಹದ್ದೇ ಕಾರಣಕ್ಕೆ ಸುದ್ದಿಯಾಗುತ್ತಿದೆ. ಈ ಮದುವೆ ವರನನ್ನು ಹೊರತುಪಡಿಸಿ ಎಲ್ಲಾ ವಿಧಿವಿಧಾನಗಳನ್ನು ನೆರವೇರಿದೆ.

ಹೌದು... ಜೈಪುರದ 30 ವರ್ಷದ ಪೂಜಾ ಸಿಂಗ್ ಎಂಬ ಯಿವತಿ ಭಗವಾನ್ ವಿಷ್ಣುವನ್ನು ವಿವಾಹವಾಗಿದ್ದಾಳೆ. ಈಕೆಯ ಮದುವೆಯ ಫೋಟೋಗಳು ಮತ್ತು ವೀಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗುತ್ತಿವೆ. ಪೂಜಾ ಸಿಂಗ್ ಡಿಸೆಂಬರ್ 8 ರಂದು ಸಂಪೂರ್ಣ ವಿಧಿವಿಧಾನಗಳೊಂದಿಗೆ ಭಗವಾನ್ ವಿಷ್ಣುವನ್ನೇ ಮದುವೆಯಾಗುವ ಮೂಲಕ ಎಲ್ಲರನ್ನು ಅಚ್ಚರಿಗೊಳಿಸಿದ್ದಾರೆ. ಈ ವಿಶಿಷ್ಟ ಮದುವೆಯಲ್ಲಿ, ಪೂಜಾ ಸ್ವತಃ ವಿಷ್ಣುವಿನ ಹೆಸರಿನಲ್ಲಿ ಸಿಂಧೂರದ ಬದಲಿಗೆ ಶ್ರೀಗಂಧವನ್ನು ಹಚ್ಚಿಕೊಂಡಿದ್ದಾಳೆ.

ಭಗವಾನ್ ವಿಷ್ಣುವನ್ನು ಮದುವೆಯಾಗಲು ಕಾರಣವೇನು ಎಂದು ಕೇಳಿದಾಗ ಪೂಜಾ, ಬಾಲ್ಯದಿಂದಲೂ ತಂದೆ-ತಾಯಿಯ ನಡುವೆ ಜಗಳಗಳು ನಡೆಯುತ್ತಿದ್ದ ಕಾರಣ ತಾನು ಮದುವೆಯಾಗುವುದಿಲ್ಲ ಎಂದು ನಿರ್ಧರಿಸಿದ್ದೆ. ಆದರೆ ಜನರ ಮೂದಲಿಕೆಗಳನ್ನು ಕೇಳಿ ಬೇಸರಗೊಂಡೆ. ಜೊತೆಗೆ ನನ್ನ ಜೀವನವನ್ನು ಹಾಳು ಮಾಡಿಕೊಳ್ಳಲು ಬಯಸಲಿಲ್ಲ. ಆದ್ದರಿಂದ ಜನರು ತಮ್ಮ ಮದುವೆಯ ಬಗ್ಗೆ ಮಾತನಾಡುವುದನ್ನು ನಿಲ್ಲಿಸಲು ದೇವಸ್ಥಾನದಲ್ಲಿ ಸಾಕ್ಷಾತ್ ಭಗವಂತನನ್ನೇ ಮದುವೆಯಾಗಿದ್ದೇನೆ ಎಂದು ಪೂಜಾ ಹೇಳಿದ್ದಾರೆ.

ಮದುವೆಯಾದ ಬಳಿಕ, ಪೂಜಾ ತನ್ನ ಮನೆಯಲ್ಲಿ ದೇವರ ಕೋಣೆಯಲ್ಲಿ ಕುಳಿತು ಭಗವಾನ್ ವಿಷ್ಣುವಿಗೆ ಆಹಾರವನ್ನು ತಯಾರಿಸುತ್ತಾಳೆ. ಸಮಾಜ ತನ್ನನ್ನು ಗೇಲಿ ಮಾಡುತ್ತದೆ, ಆದರೆ ವಿಷ್ಣುವನ್ನು ಪತಿಯಾಗಿ ಸ್ವೀಕರಿಸಿದ್ದೇನೆ ಎಂದು ಪೂಜಾ ಹೇಳಿದ್ದಾರೆ. ಕೆಲವರು ಪೂಜಾ ಅವರನ್ನು ಬೆಂಬಲಿಸಿದ್ದಾರೆ. ಇನ್ನು ಹಲವರು ಈ ಸುದ್ದಿ ಕೇಳಿ ನಗೆಯಾಡಿದ್ದಾರೆ.

Ads on article

Advertise in articles 1

advertising articles 2

Advertise under the article