-->

ಓದುಗರ ಗಮನಕ್ಕೆ

ಓದುಗರ ಗಮನಕ್ಕೆ ಇಮುಂಗಾರು ವೆಬ್ಸೈಟ್‌ನಲ್ಲಿ ಪ್ರಕಟವಾಗುವ ಸುದ್ದಿಗಳಲ್ಲಿ ಯಾವುದೇ ಸಲಹೆಗಳಿದ್ದರೆ, ಅವುಗಳನ್ನು ಪಾಲಿಸುವ ಮುಂಚೆ ತಜ್ಞರ ಸಲಹೆಯಿಂದ ಕರಾರುವಕ್ಕಾಗಿ ಪರಿಶೀಲಿಸಿ. ಇಮುಂಗಾರು ಸಂಸ್ಥೆಯು ಯಾವುದೇ ಹಣಕಾಸಿನ ವ್ಯವಹಾರಗಳಲ್ಲಿ ತೊಡಗಿಸಿಕೊಳ್ಳುವುದಿಲ್ಲ. ಯಾವುದೇ ಹಣಕಾಸಿನ ವ್ಯವಹಾರಗಳಿಗೆ ಸಂಬಂಧಿಸಿದಂತೆ ನಮ್ಮ ಸಂಸ್ಥೆಯು ಯಾವುದೇ ಜವಾಬ್ದಾರಿಯನ್ನು ಹೊಂದಿರುವುದಿಲ್ಲ. ನಾವು ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಶೇರ್ ಮಾಡುವಾಗ ಜಾಹೀರಾತು ರೂಪದಲ್ಲಿ ಮೂರನೇ ವಾಟ್ಸಾಪ್ ಗ್ರೂಪ್ ಇನ್ವೈಟ್ ಲಿಂಕ್‌ಗಳನ್ನು ಸೇರಿಸಬಹುದು, ಆದರೆ ಇದಕ್ಕೆ ನಮ್ಮ ಸಂಸ್ಥೆಗೆ ಯಾವುದೇ ಸಂಬಂಧವಿಲ್ಲ.
10 ತಿಂಗಳ ಹಸುಗೂಸನ್ನು ಕಾರಿನಿಂದ ಹೊರಕ್ಕೆಸೆದ ದುಷ್ಕರ್ಮಿಗಳಿಂದ ತಾಯಿಯ ಮೇಲೆ ಲೈಂಗಿಕ ದೌರ್ಜನ್ಯ

10 ತಿಂಗಳ ಹಸುಗೂಸನ್ನು ಕಾರಿನಿಂದ ಹೊರಕ್ಕೆಸೆದ ದುಷ್ಕರ್ಮಿಗಳಿಂದ ತಾಯಿಯ ಮೇಲೆ ಲೈಂಗಿಕ ದೌರ್ಜನ್ಯ


ಮಹಾರಾಷ್ಟ್ರ: 10 ತಿಂಗಳ ಹಸುಗೂಸನ್ನು ಕಾರಿನಿಂದ ಹೊರಕ್ಕೆಸೆದ ಕಾಮುಕರು ತಾಯಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಪ್ರಕರಣ ಮುಂಬೈ- ಅಹ್ಮದಾಬಾದ್ ಹೆದ್ದಾರಿಯ ಪಾಲ್ಗ‌ ಎಂಬಲ್ಲಿ ಶನಿವಾರ ನಡೆದಿದೆ ಎಂದು ಹೇಳಲಾಗಿದೆ.

ಕಾರಿನಿಂದ ಎಸೆಯಲ್ಪಟ್ಟ ಹೆಣ್ಣುಗೂಸು ಮೃತಪಟ್ಟಿದೆ. ಲೈಂಗಿಕ ದೌರ್ಜನ್ಯ ಎಸಗಿದ ಬಳಿಕ ತಾಯಿಯನ್ನೂ ಕಾರಿನಿಂದ ಹೊರಕ್ಕೆ ತಳ್ಳಲಾಗಿದೆ. ಪರಿಣಾಮ ಆಕೆಗೂ ಗಂಭೀರ ಗಾಯಗಳಾಗಿವೆ ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.

ಮಹಿಳೆ ಹಾಗೂ ಆಕೆಯ 10 ತಿಂಗಳ ಹಸಗೂಸು ವಾಡಾ ತಾಲೂಕಿನ ಪೊಶೆರೆ ಎಂಬಲ್ಲಿಗೆ ಕಾರಿನಲ್ಲಿ ತೆರಳುತ್ತಿದ್ದರು. ಈ ವೇಳೆ ಕಾರಿನಲ್ಲಿ ಇತರ ಕೆಲ ಪ್ರಯಾಣಿಕರು ಇದ್ದರು.‌ ಆದರೆ ಮಾರ್ಗಮಧ್ಯದಲ್ಲಿ ಕಾರಿನ ಚಾಲಕ ಹಾಗೂ ಸಹ ಪ್ರಯಾಣಿಕರು ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದರು ಎಂದು ಆರೋಪಿಸಲಾಗಿದೆ. ಈ ಸಂದರ್ಭ ಮಹಿಳೆ ಪ್ರತಿರೋಧ ತೋರಿದ ವೇಳೆ ಮಹಿಳೆಯ ಕೈಯಿಂದ ಮಗುವನ್ನು ಕಿತ್ತು ವೇಗವಾಗಿ ಹೋಗುತ್ತಿದ್ದ ಕಾರಿನಿಂದ ಹೊರಗೆಸೆಯಲಾಗಿದೆ. ಪರಿಣಾಮ ಮಗು ಸ್ಥಳದಲ್ಲೇ ಕೊನೆಯುಸಿರೆಳೆದಿದೆ ಎಂದು ಮಹಿಳೆ ಪೊಲೀಸರಿಗೆ ವಿವರಿಸಿದ್ದಾರೆ.

ಆ ಬಳಿಕ ಮಹಿಳೆಯನ್ನೂ ಕಾರಿನಿಂದ ಹೊರಕ್ಕೆ ತಳ್ಳಲಾಗಿದ್ದು, ಆಕೆಗೂ ಗಂಭೀರ ಸ್ವರೂಪದ ಗಾಯಗಳಾಗಿವೆ. ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಮಾಂಡ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಗಳಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದು, ಇನ್ನೂ ಅವರು ಪತ್ತೆಯಾಗಿಲ್ಲ.

Ads on article

Advertise in articles 1

advertising articles 2

Advertise under the article

ಸುರ