-->

ವೃಶ್ಚಿಕ ರಾಶಿಯಲ್ಲಿ ಸೂರ್ಯ, ಬುಧ, ಶುಕ್ರರ ಸಂಯೋಗ- ಈ ರಾಶಿಯವರಿಗೆ ಹಣದ ಸುರಿಮಳೆ!

ವೃಶ್ಚಿಕ ರಾಶಿಯಲ್ಲಿ ಸೂರ್ಯ, ಬುಧ, ಶುಕ್ರರ ಸಂಯೋಗ- ಈ ರಾಶಿಯವರಿಗೆ ಹಣದ ಸುರಿಮಳೆ!


ಕರ್ಕಾಟಕ ರಾಶಿ: ಶನಿ ಒಡೆತನದ ಅನುರಾಧಾ ನಕ್ಷತ್ರದಲ್ಲಿ ಸೂರ್ಯ, ಬುಧ ಮತ್ತು ಶುಕ್ರರ ಉಪಸ್ಥಿತಿಯು ಕರ್ಕಾಟಕ ರಾಶಿಯವರಿಗೆ ತುಂಬಾ ಪ್ರಯೋಜನಕಾರಿಯಾಗಿದೆ. ಈ ಸಂದರ್ಭದಲ್ಲಿ ನಿಮ್ಮ ಹಳೆಯ ಹೂಡಿಕೆಯಿಂದ ಲಾಭವಾಗಲಿದೆ. ಹಣವು ಪ್ರಯೋಜನಕಾರಿಯಾಗಲಿದೆ. 


ಮಕರ ರಾಶಿ: ಶನಿಯ ನಕ್ಷತ್ರ ಪುಂಜದಲ್ಲಿ ಸೂರ್ಯ, ಬುಧ ಮತ್ತು ಶುಕ್ರ ಮೂರೂ ಗ್ರಹಗಳ ಉಪಸ್ಥಿತಿಯು ಮಕರ ರಾಶಿಯವರಿಗೆ ಸಾಕಷ್ಟು ಪ್ರಯೋಜನಗಳನ್ನು ತರಲಿದೆ. ವೃತ್ತಿ ರಂಗದಲ್ಲಿ ಪ್ರಮೋಷನ್ ಸಾಧ್ಯತೆ ಇದ್ದು ಉದ್ಯೋಗದಲ್ಲಿ ಉತ್ತುಂಗಕ್ಕೇರಬಹುದು. ನೀವು ಹೊಸ ಉದ್ಯೋಗಕ್ಕಾಗಿ ಹುಡುಕುತ್ತಿದ್ದರೆ ಈ ಸಮಯದಲ್ಲಿ ನಿಮ್ಮ ನೆಚ್ಚಿನ ಉದ್ಯೋಗ ಲಭ್ಯವಾಗುವ ಸಾಧ್ಯತೆಯೂ ಇದೆ. 

ಕುಂಭ ರಾಶಿ: ಅನುರಾಧಾ ನಕ್ಷತ್ರದಲ್ಲಿ ಸೂರ್ಯ, ಬುಧ ಮತ್ತು ಶುಕ್ರರ ಸಂಯೋಗವು ಕುಂಭ ರಾಶಿಯವರಿಗೆ ವರದಾನವಿದ್ದಂತೆ ಎಂದೇ ಹೇಳಲಾಗುತ್ತಿದೆ. ಈ ಸಯಮದಲ್ಲಿ ಕುಂಭ ರಾಶಿಯವರಿಗೆ ಪ್ರತಿ ಕೆಲಸದಲ್ಲೂ ಅದೃಷ್ಟ ಜೊತೆಯಾಗಲಿದೆ. ನೀವು ಕೈ ಹಾಕುವ ಪ್ರತಿ ಕೆಲಸದಲ್ಲೂ ಯಶಸ್ಸು ಪ್ರಾಪ್ತಿಯಾಗಲಿದೆ. 


Ads on article

Advertise in articles 1

advertising articles 2

Advertise under the article