ನಟಿ ಮೇಘನಾರಾಜ್ ಥಾಯ್ಲಾಂಡ್ ಪ್ರವಾಸದ ಹಾಟ್ ಫೋಟೋಗಳು ಇನ್ ಸ್ಟಾಗ್ರಾಂನಲ್ಲಿ ಸದ್ದು

ಬೆಂಗಳೂರು: ನಟಿ ಮೇಘನಾ ರಾಜ್ ಸಾಕಷ್ಟು ಕಾಲಗಳ ಬಳಿಕ ತಮ್ಮ ಆಪ್ತ ಗೆಳತಿಯರೊಂದಿಗೆ ಥಾಯ್ಲೆಂಡ್ ಪ್ರವಾಸ ಮಾಡಿದ್ದಾರೆ. ಥಾಯ್ಲೆಂಡ್ ಪ್ರವಾಸದಲ್ಲಿ ಕ್ಲಿಕ್ಕಿಸಿರುವ ತಮ್ಮ ಹಾಟ್ ಫೋಟೋಗಳನ್ನು ಮೇಘನಾ ರಾಜ್ ಇನ್ ಸ್ಟಾಗ್ರಾಂ ಖಾತೆಯಲ್ಲಿ ಅಪ್ಲೋಡ್ ಮಾಡಿದ್ದಾರೆ. 

ಸದ್ಯ ಮೇಘನಾ ರಾಜ್ ಶೇರ್ ಮಾಡಿಕೊಂಡಿರುವ ಹಾಟ್ ಫೋಟೋಗಳು ಸಖತ್ ಸದ್ದು ಮಾಡುತ್ತಿವೆ. ಮೇಘನಾ ರಾಜ್, ತಮ್ಮ ಗೆಳತಿಯರೊಂದಿಗೆ ಥಾಯ್ಲೆಂಡ್‌ಗೆ ತೆರಳಿದ್ದು, ಅಲ್ಲಿನ ಪ್ರವಾಸಿ ತಾಣಗಳಲ್ಲಿ ಸುತ್ತಾಡಿದ್ದಾರೆ. ಈ ವೇಳೆ ಸ್ವಿಮ್ಮಿಂಗ್ ಪೂಲ್‌ನಲ್ಲಿ ತೆಗೆದಿರುವ ಸೆಲ್ಫಿಯನ್ನು ಅವರು ಇನ್ ಸ್ಟಾಗ್ರಾಂನಲ್ಲಿ ಅಪ್ಲೋಡ್ ಮಾಡಿದ್ದಾರೆ. 


ಮೇಘನಾ ರಾಜ್ ತಮ್ಮ ನಾಲ್ಕು ಮಂದಿ ಗೆಳತಿಯರೊಂದಿಗೆ ಥಾಯ್ಲೆಂಡ್‌ನಲ್ಲಿ ಎಂಜಾಯ್ ಮಾಡುತ್ತಿದ್ದಾರೆ. ಮೇಘನಾ ಗೆಳತಿಯರೊಂದಿಗಿನ ಹಳೆಯ ಮತ್ತು ಹೊಸ ಫೋಟೋವನ್ನು ಒಟ್ಟಾಗಿ ಇನ್ ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡಿದ್ದು, ಫ್ರೆಂಡ್ಸ್ ಫಾರ್‌ವೆರ್ ( Friends Forever ) ಎಂದು ಬರೆದುಕೊಂಡಿದ್ದಾರೆ.