ಹ್ಯಾಲೋವೀನ್ ಕಾಲ್ತುಳಿತಕ್ಕೆ ದಕ್ಷಿಣ ಕೊರಿಯಾದ ಪ್ರಖ್ಯಾತ ನಟ, ಗಾಯಕ ಲೀ ಜಿಹಾನ್ ಬಲಿ

ಸಿಯೋಲ್: ಇತ್ತೀಚೆಗೆ ದಕ್ಷಿಣ ಕೊರಿಯಾದ ಸಿಯೋಲ್‌ನ ಇಟೇವೋನ್ ಜಿಲ್ಲೆಯಲ್ಲಿ ನಡೆದ ಹ್ಯಾಲೋವೀನ್ ಪಾರ್ಟಿಯಲ್ಲಿ ನಡೆದ ಕಾಲ್ತುಳಿತದಲ್ಲಿ ದಕ್ಷಿಣ ಕೊರಿಯಾದ ಪ್ರಖ್ಯಾತ ನಟ ಹಾಗೂ ಗಾಯಕ ಲೀ ಜಿಹಾನ್ ಅವರೂ ಮೃತಪಟ್ಟಿದ್ದಾರೆ. ಲೀ ಜಿಹಾನ್(24) ನಿಧನದ ಸುದ್ದಿಯನ್ನು ಅವರ ಕೆಲಸಗಳನ್ನು ನಿಭಾಯಿಸುವ ಏಜನ್ಸಿ 935 ಎಂಟರೊಸ್ಕೆಂಟ್ ದೃಢಪಡಿಸಿದೆ.

ಕೊರಿಯಾದ ಸಂಗೀತ ಸ್ಪರ್ಧೆ ಪ್ರೊಡ್ಯೂಸ್ 101 ಇದರ ಮಾಜಿ ಸ್ಪರ್ಧಿಯಾಗಿದ್ದ ಲೀ ಜಿಹಾನ್ 'ಟುಡೇ ಡಾಸ್ ಎನದರ್ ನಮ್ ಹ್ಯುನ್ ಡೇ' ಎಂಬ ಟೆಲಿವಿಷನ್ ಕಾರ್ಯಕ್ರಮದ ಮೂಲಕ ಕಿರುತೆರೆಗೆ ಪಾದಾರ್ಪಣೆಯನ್ನು ಮಾಡಿದ್ದರು. ಲೀ ಜಿಹಾನ್ ಅಂತ್ಯಕ್ರಿಯೆ ಇಂದು ನಡೆಯಲಿದೆ ಎಂಬ ಮಾಹಿತಿಯಿದೆ. 

ಸಿಯೋಲ್‌ನ ಇಕ್ಕಟ್ಟಾದ ರಸ್ತೆಯಲ್ಲಿ ನಡೆದ ಹ್ಯಾಲೋವೀನ್ ಆಚರಣೆ ವೇಳೆ ನಡೆದ ಕಾಲ್ತುಳಿತದಲ್ಲಿ 151ಕ್ಕೂ ಅಧಿಕ ಮಂದಿ ಮೃತಪಟ್ಟು 100 ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದರು. ಕೋವಿಡ್ ನಿರ್ಬಂಧಗಳ ಸಡಿಲಿಕೆಯ ನಂತರ ನಡೆದ ನಡೆದ ಮೊದಲ ಹ್ಯಾಲೋವೀನ್ ಪಾರ್ಟಿ ಇದಾಗಿತ್ತು.
BREAKING NEWS
Loading latest news...
Join our WhatsApp Channel Powered By : Online Pudu