-->
ಉಡುಪಿ: ವಿಶ್ವದಲ್ಲಿಯೇ ಅತೀ ದೊಡ್ಡ ಮೂತ್ರಕೋಶದ ಕಲ್ಲು ಮಹಿಳಾರೋಗಿಯಲ್ಲಿ ಪತ್ತೆ

ಉಡುಪಿ: ವಿಶ್ವದಲ್ಲಿಯೇ ಅತೀ ದೊಡ್ಡ ಮೂತ್ರಕೋಶದ ಕಲ್ಲು ಮಹಿಳಾರೋಗಿಯಲ್ಲಿ ಪತ್ತೆ

ಉಡುಪಿ: ಮಹಿಳಾ ರೋಗಿಯೊಬ್ಬರಲ್ಲಿ ವಿಶ್ವದಲ್ಲಿಯೇ ಅತಿ ದೊಡ್ಡ ಮೂತ್ರಕೋಶದ ಕಲ್ಲು ಕಂಡು ಬಂದಿದ್ದು, ಮಣಿಪಾಲ ಕಸ್ತೂರ್‌ಬಾ ಆಸ್ಪತ್ರೆಯ ಮೂತ್ರಕೋಶ ತಜ್ಞ ವೈದ್ಯರು ಯಶಸ್ವಿಯಾಗಿ ಅದನ್ನು ಹೊರತೆಗೆದಿದ್ದಾರೆ.

60ರ ಈ ಮಹಿಳೆ ಕಳೆದ ಆರು ವರ್ಷಗಳಿಂದ ಉರಿ ಮೂತ್ರದ ಸಮಸ್ಯೆಯಿಂದ ಸ್ಥಳೀಯ ಆಸ್ಪತ್ರೆಗೆ ಭೇಟಿ ನೀಡುತ್ತಿದ್ದರು. ಇತ್ತೀಚೆಗೆ ಕಸ್ತೂರ್ಬಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ಭೇಟಿ ನೀಡಿದ್ದರು. ಆಗ ಅವರಿಗೆ ಸರಳ ಸಿ.ಟಿ.ಸ್ಕ್ಯಾನ್ ಮಾಡಲಾಗಿತ್ತು. ಇದು ಸಂಪೂರ್ಣ ಮೂತ್ರಕೋಶವನ್ನು ಆಕ್ರಮಿಸಿಕೊಂಡಿರುವ ಗಮನಾರ್ಹವಾದ ವಸ್ತುವೊಂದರ ಇರುವಿಕೆಯನ್ನು ಅದು ಬಹಿರಂಗಪಡಿಸಿತು.

ಕೆಎಂಸಿಯ ಮೂತ್ರಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಮತ್ತು ಉಪ ವೈದ್ಯಕೀಯ ಅಧೀಕ್ಷಕ ಡಾ.ಪದ್ಮರಾಜ್ ಹೆಗ್ಡೆ ಅವರ ಮಾರ್ಗದರ್ಶನದಲ್ಲಿ 11.5 x 7.5 ಸೆಂ.ಮೀ. ಅಳತೆಯ 672ಗ್ರಾಂ ತೂಕದ ಮೂತ್ರಕೋಶದ ಕಲ್ಲನ್ನು ಡಾ. ಆಂಶುಮನ್, ಡಾ.ಕಾಶಿ ವಿಶ್ವನಾಥ್, ಡಾ.ನಿಶಾ, ಡಾ. ವಿವೇಕ್ ಪೈ ಮತ್ತು ಡಾ. ಕೃಷ್ಣ ಅವರ ತಂಡವು ತೆರೆದ ಸಿಸ್ಟೋಲಿಥೋಟಮಿ ಶಸ್ತ್ರಚಿಕಿತ್ಸೆ ಮೂಲಕ ಹೊರ ತೆಗೆದರು. ಶಸ್ತ್ರಚಿಕಿತ್ಸೆಯ ಎರಡನೇ ದಿನ ರೋಗಿಯನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಯಿತು.

ಸಾಧಾರಣ ಆರೋಗ್ಯವಂತ ವಯಸ್ಕ ಮಹಿಳೆಯಲ್ಲಿ 672 ಗ್ರಾಂ ತೂಕದ ದೈತ್ಯ ಮೂತ್ರಕೋಶದ ಕಲ್ಲು ವಿಶ್ವದಲ್ಲಿಯೇ ವರದಿಯಾಗಿರುವ ಮಹಿಳಾ ರೋಗಿಯಲ್ಲಿ ಪತ್ತೆಯಾದ ಅತಿ ದೊಡ್ಡ ಮೂತ್ರಕೋಶದ ಕಲ್ಲು. ಇಲ್ಲಿಯವರೆಗೆ ವರದಿಯಾದ ಅತಿದೊಡ್ಡ ಮೂತ್ರಕೋಶದ ಕಲ್ಲು ಪತ್ತೆಯಾಗಿರುವುದು ಮುಂಬೈನ ಕೆಇಎಂ ಆಸ್ಪತ್ರೆಯಲ್ಲಿ, ಅದು 528 ಗ್ರಾಂ ತೂಕವಿತ್ತು ಎಂದು ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.

Ads on article

  

Advertise in articles 1

advertising articles 2

ಉಚಿತವಾಗಿ ಸುದ್ದಿ ಕೊಡುತ್ತಿರುವ ನಮಗೆ ಸಹಾಯ ಮಾಡಿ

  

Pay Rs 100

  

Advertise under the article