-->

ಪಾಲಕರ ವಿರುದ್ಧದಿಂದ ಬೇರಾಗಿದ್ದ ಸಲಿಂಗ ಜೋಡಿಯ ನಿಶ್ಚಿತಾರ್ಥದ ಫೋಟೋ ವೈರಲ್

ಪಾಲಕರ ವಿರುದ್ಧದಿಂದ ಬೇರಾಗಿದ್ದ ಸಲಿಂಗ ಜೋಡಿಯ ನಿಶ್ಚಿತಾರ್ಥದ ಫೋಟೋ ವೈರಲ್

ಕೊಚ್ಚಿ: ಪಾಲಕರ ಒತ್ತಡದಿಂದ ಬೇರಾಗಿದ್ದ ಸಲಿಂಗ ಜೋಡಿ ಹೈಕೋರ್ಟ್‌ ಮೆಟ್ಟಿಲೇರಿತ್ತು.‌ ಕಳೆದ ಮೇ ತಿಂಗಳಿನಲ್ಲಿ ಕೋರ್ಟ್ ತೀರ್ಪು ಬಂದ. ಬಳಿಕ ಮತ್ತೆ ಒಂದಾಗಿದ್ದ ಈ ಜೋಡಿ ಇತ್ತೀಚೆಗಷ್ಟೇ ನಿಶ್ಚಿತಾರ್ಥ ಮಾಡಿಕೊಂಡಿದೆ.

ಕೇರಳ ರಾಜ್ಯದ ಅಲುವಾ ಮೂಲದ ಆಧಿಲಾ ನಸ್ತಿನ್ (22) ಮತ್ತು ಕೊಯಿಕ್ಕೋಡ್ ಮೂಲದ ಫಾತಿಮಾ ನೋರಾ (23) ಸಲಿಂಗ ಜೋಡಿ. ಪರಸ್ಪರ ಪ್ರೀತಿಸುತ್ತಿದ್ದು ಈ ಸಲಿಂಗ ಜೋಡಿ ನಿಶ್ಚಿತಾರ್ಥ ಮಾಡಿಕೊಂಡಿದೆ. ಸಮುದ ಕಿನಾರೆಯಲ್ಲಿ ಅದ್ಧೂರಿ ನಿಶ್ಚಿತಾರ್ಥದ ಫೋಟೋಗಳನ್ನು ಇಬ್ಬರೂ ತಮ್ಮ ಇನ್‌ಸ್ಟಾಗ್ರಾಂನಲ್ಲಿ ಕಳೆದ ಅಕ್ಟೋಬರ್ 11ರಂದ ಶೇರ್ ಮಾಡಿಕೊಂಡಿದ್ದಾರೆ. ಸಾಧನೆಯನ್ನು ಅನ್‌ಲಾಕ್ ಮಾಡಲಾಗಿದೆ...ಎಂದೆಂದಿಗೂ ಜೊತೆಯಾಗಿ ಎಂದು ಅಡಿಬರಹ ನೀಡಿದ್ದಾರೆ.


ಸಾಂಪ್ರದಾಯಿಕ ಆಭರಣಗಳೊಂದಿಗೆ ಮದುವೆಯ ಉಡುಗೆ ಪಮತ್ತು ಹಾರಗಳನ್ನು ವಿನಿಮಯ ಮಾಡಿಕೊಳ್ಳುವ ಫೋಟೋಗಳನ್ನು ಸಲಿಂಗ ಜೋಡಿ Instagram ನಲ್ಲಿ ಹಂಚಿಕೊಂಡಿದ್ದಾರೆ. ನಾನು ಮಾಡುವ ನಿಯಮಗಳನ್ನು ನಾನೇ ಅನುಸರಿಸುತ್ತೇನೆ ಎಂದು ನಸ್ರನ್ ಅಡಿಬರಹ ನೀಡಿದ್ದಾರೆ. ಸದ್ಯ ಫೋಟೋಗಳು ಸಾವಿರಾರು ಲೈಕ್ಸ್‌ಗಳ ಮೂಲಕ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ಅಭಿನಂದನೆಗಳ ಮಹಾಪೂರವನ್ನೇ ಹರಿಸುತ್ತಿದ್ದಾರೆ.

ನಿಶ್ಚಿತಾರ್ಥದ ಬಗ್ಗೆ ಮಾತನಾಡಿರುವ ನಸ್ರನ್, ಈ ಪರಿಕಲ್ಪನೆಯು ಆಸಕ್ತಿದಾಯಕ ಎಂದು ಭಾವಿಸಿದ್ದರಿಂದ ನಾವು ಫೋಟೋಶೂಟ್ ಪ್ರಯತ್ನಿಸಿದ್ದೇವೆ. ನಾವು ಇನ್ನೂ ಮದುವೆಯಾಗಿಲ್ಲ. ಆದರೆ ಒಂದು ಹಂತದಲ್ಲಿ ನಾವು ಮದುವೆ ಆಗಲು ಬಯಸುತ್ತೇವೆ ಎಂದು ಹೇಳಿದ್ದಾರೆ.

Ads on article

Advertise in articles 1

advertising articles 2

Advertise under the article